ಗದಗ : ಕೊರೊನಾ ನಿಯಮ ಉಲ್ಲಂಘಿಸಿದವರಿಗೆ ಬೆತ್ತದ ರುಚಿ ನೀಡದಂತೆ ರಾಜ್ಯಾದ್ಯಂತ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ಪರ್ಯಾಯವಾಗಿ ವಾಹನಗಳ ಸೀಜ್ ಮಾಡುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ, ನಗರದಲ್ಲಿ ಅನಿವಾರ್ಯವಾಗಿ ಜನ ಮನೆಯಲ್ಲೇ ಕುಳಿತುಕೊಳ್ಳುತ್ತಿದ್ದಾರೆ.
ಬೈಕ್ ಸೀಜ್ ಆಗುವ ಭಯದಲ್ಲಿ ಜನರು ಮನೆಯಿಂದ ಆಚೆ ಬಂದಿಲ್ಲ. ಹೀಗಾಗಿ, ವ್ಯಾಪಾರ-ವಹಿವಾಟು ಕೂಡ ಸರಿಯಾಗಿ ನಡೆದಿಲ್ಲ. ಪರಿಣಾಮ ನಗರದ ಪ್ರಮುಖ ಮಾರುಕಟ್ಟೆಗಳು ಬಿಕೋ ಎನ್ನುತ್ತಿವೆ.
ವಾಹನ ವ್ಯವಸ್ಥೆ ಇಲ್ಲದ ಕಾರಣ ನಡೆದುಕೊಂಡೇ ವಾಲೇಶ್ ಪೂಜಾರ್ ಎಂಬ ವ್ಯಕ್ತಿ ಬೆಳಗ್ಗೆ 4ಕ್ಕೆ ಮಾರುಕಟ್ಟೆಗೆ ಹೂವು ತಂದು ಗ್ರಾಹಕರಿಗಾಗಿ ಕಾಯ್ದಿದ್ದಾರೆ.
ಆದರೆ, ಬೈಕ್ ಸೀಜ್ ಆಗುತ್ತದೆಂದು ಹೆದರಿರುವ ಜನ ಮಾರುಕಟ್ಟೆಯತ್ತ ಸುಳಿದಿಲ್ಲ. ಹೀಗಾಗಿ, ವ್ಯಾಪಾರಕ್ಕೆ ವ್ಯಯಿಸಿದ್ದ ಸುಮಾರು ₹2 ಸಾವಿರ ಹಣ ವ್ಯರ್ಥವಾಯಿತು ಎಂದು ಅವರು ಕಣ್ಣೀರು ಸುರಿಸಿದ್ದಾರೆ.
ಓದಿ: ಪಾಸಿಟಿವಿಟಿ ರೇಟ್ ಹೆಚ್ಚಾದಂತೆ ಟೆಸ್ಟಿಂಗ್ ಸಂಖ್ಯೆ ಕಡಿಮೆ : ಸೋಂಕಿತರ ಸಂಖ್ಯೆ ಇಳಿಕೆಗೆ ಇದೇನಾ ಕಾರಣ??