ETV Bharat / state

ಅನಾವಶ್ಯಕ ವಿಚಾರಗಳನ್ನು ಕೈ ಬಿಡಿ ಹೆಚ್​ಡಿಕೆ-ಸುಮಲತಾರಿಗೆ ಮಾಜಿ ಸಚಿವ ಹೆಚ್ ಕೆ ಪಾಟೀಲ್ ಸಲಹೆ - ಎಚ್.ಡಿ ಕುಮಾರಸ್ವಾಮಿ

ಹಾಗೇನಾದರೂ ಡ್ಯಾಮ್ ಬಿರುಕುಬಿಟ್ಟಿದ್ರೆ, ಡ್ಯಾಮ್ ಸೇಫ್ಟಿ ಕಮಿಟಿ, ತಂತ್ರಜ್ಞರನ್ನು ಸರ್ಕಾರ ತನಿಖೆಗೆ ಕಳುಹಿಸಬೇಕು. ಡ್ಯಾಮ್ ವಾಸ್ತವಿಕತೆ ಗುರ್ತಿಸಿ ಕ್ರಮಕೈಗೊಳ್ಳಬೇಕು, ಇದು ರಾಜಕೀಯ ಚರ್ಚೆ ಆಗಬಾರದು..

ಹೆಚ್​ಡಿಕೆ-ಸುಮಲತಾಗೆ ಎಚ್ ಕೆ ಪಾಟೀಲ್ ಸಲಹೆ
ಹೆಚ್​ಡಿಕೆ-ಸುಮಲತಾಗೆ ಎಚ್ ಕೆ ಪಾಟೀಲ್ ಸಲಹೆ
author img

By

Published : Jul 10, 2021, 3:40 PM IST

ಗದಗ : ಹೆಚ್ ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ವಾಕ್ಸಮರ ವಿಚಾರ ಕುರಿತು ಕಾಂಗ್ರೆಸನ ಹಿರಿಯ ಶಾಸಕ ಹೆಚ್ ಕೆ ಪಾಟೀಲ್ ಪ್ರತಿಕ್ರಿಯಿಸಿದಾರೆ. ಅನಾವಶ್ಯಕ ವಿಚಾರಗಳನ್ನು ಇಲ್ಲಿಗೆ ಕೈಬಿಡಿ ಎಂದು ಅವರು ಸುಮಲತಾ-ಹೆಚ್‌ಡಿಕೆ ಅವರಿಬ್ಬರಿಗೂ ಸಲಹೆ ನೀಡಿದ್ದಾರೆ.

ಹೆಚ್​ಡಿಕೆ-ಸುಮಲತಾಗೆ ಹೆಚ್‌ಕೆಪಾಟೀಲ್ ಸಲಹೆ

ನಗರದಲ್ಲಿ ಆಂಗ್ಲ ಉರ್ದು ಮಾಧ್ಯಮ ಶಾಲೆಯ ಆವರಣದಲ್ಲಿ ಲಸಿಕಾ ವಿತರಣಾ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನಾವಶ್ಯಕ ವಿಚಾರಗಳನ್ನು ಕೈ ಬಿಡಿ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕಕ್ಕೂ ತಮ್ಮ ಗಮನವಿರಲಿ. ಇಲ್ಲೂ ಸಾಕಷ್ಟು ವಿಷಯಗಳಿವೆ, ಅವುಗಳ ಬಗ್ಗೆ ಚರ್ಚೆ ಆಗಲಿ. ಒಂದೇ ವಿಷಯವನ್ನು ಎಷ್ಟು ಚರ್ಚೆ ಮಾಡಿ ಏನು ಮಾಡುವರು? ಎಂದರು.

ಹಾಗೇನಾದರೂ ಡ್ಯಾಮ್ ಬಿರುಕುಬಿಟ್ಟಿದ್ರೆ, ಡ್ಯಾಮ್ ಸೇಫ್ಟಿ ಕಮಿಟಿ, ತಂತ್ರಜ್ಞರನ್ನು ಸರ್ಕಾರ ತನಿಖೆಗೆ ಕಳುಹಿಸಬೇಕು. ಡ್ಯಾಮ್ ವಾಸ್ತವಿಕತೆ ಗುರ್ತಿಸಿ ಕ್ರಮಕೈಗೊಳ್ಳಬೇಕು, ಇದು ರಾಜಕೀಯ ಚರ್ಚೆ ಆಗಬಾರದು.

ಅನಾವಶ್ಯಕ ಭಯ ಹುಟ್ಟಿಸುವುದಾಗಲಿ, ಕಂಪ್ಲೇಂಟ್ ಬಂದಾಗ ಏನು ಕ್ರಮಕೈಗೊಳ್ಳದೇ ಇರುವುದು ಸರ್ಕಾರದ ನಿಲುವು ಸರಿಯಲ್ಲ ಎಂದರು. ಇನ್ನು, ರಾಕ್ ಲೈನ್ ವೆಂಕಟೇಶ್ ಮನೆಗೆ ಜೆಡಿಎಸ್ ಮುತ್ತಿಗೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅದು ಅನಾವಶ್ಯಕ ಚರ್ಚೆ ನಡೆದಿದೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.

ಇದನ್ನೂ ಓದಿ : ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ: ರಮೇಶ್ ‌ಜಾರಕಿಹೊಳಿ ಯೂಟರ್ನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.