ETV Bharat / state

ಗದಗ ಜಿಲ್ಲೆ ಜನರಿಗೆ ಕೊರೊನಾ,ನೆರೆಯ ಚಿಂತೆ.. ಬಿಜೆಪಿ ಶಾಸಕ-ಸಚಿವರಿಗೆ ವರ್ಗಾವಣೆಯ ಚಿಂತೆ!! - Gadag news

ರೋಣ ಶಾಸಕ ಕಳಕಪ್ಪ ಬಂಡಿ ಜುಲೈ ಮೂರರಂದೇ ಪೌರಾಡಳಿತ ಸಚಿವ ನಾರಾಯಣಗೌಡರಿಗೆ ಪತ್ರ ಬರೆದು ಮನ್ಸೂರ್ ಅಲಿ ಅವರನ್ನೇ ಮುಂದುವರೆಸುವಂತೆ ಮನವಿ ಮಾಡಿದ್ದರು. ಆದರೀಗ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಬಂಡಿಯವರನ್ನು ಹಿಂದಿಕ್ಕಿ ಹೊಸ ಕಮಿಷನರ್ ಅವರನ್ನು ತಂದು ಗೆದ್ದಿದ್ದಾರೆ ಅನ್ನೋದು ಬಿಜೆಪಿ ಬೆಂಬಲಿಗರ ಮಾತು..

BJP
ಗದಗ-ಬೆಟಗೇರಿ ನಗರಸಭೆ
author img

By

Published : Sep 12, 2020, 5:39 PM IST

ಗದಗ : ಜಿಲ್ಲೆಯಲ್ಲಿ ಅಧಿಕಾರಿ ವರ್ಗ ಸಾಕಷ್ಟು ಶ್ರಮಿಸುತ್ತಿದ್ರೂ ಕೋವಿಡ್ ನಿಯಂತ್ರಣಕ್ಕೆ ಬರ್ತಿಲ್ಲ. ಈ ನಡುವೆ ರಾತ್ರೋರಾತ್ರಿ ನಡೆದಿರೋ ಗದಗ-ಬೆಟಗೇರಿ ನಗರಸಭೆಯ ಆಯುಕ್ತರ ವರ್ಗಾವಣೆ, ಅವಳಿ ನಗರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಆಯುಕ್ತ ಮನ್ಸೂರ್ ಅಲಿ ಹಲವು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಅವಳಿ ನಗರದ ಮೂಲೆ ಮೂಲೆಯ ಪರಿಚಯವಿದೆ. ಕೋವಿಡ್ ಹಾಗೂ ಮಳೆ ಹಾನಿಗೆ ಅವಳಿ ನಗರ ತತ್ತರಿಸಿದೆ. ಪರಿಹಾರ ಕಾರ್ಯ, ಕೋವಿಡ್ ನಿಯಂತ್ರಣಕ್ಕೆ ಹರಸಾಹಸ ನಡೆದಿದೆ‌. ಈ ನಡುವೆ ಆಯುಕ್ತರ ವರ್ಗಾವಣೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವರ್ಗಾವಣೆ ಹಿಂದೆ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಕುತಂತ್ರವಿದೆ ಅಂತಾ ಜನ ಕಿಡಿಕಾರಿದ್ದಾರೆ. ಕೋವಿಡ್ ಹಾಗೂ ಪ್ರವಾಹದ ಸಂದರ್ಭದಲ್ಲಿ ವರ್ಗಾವಣೆ ಎಷ್ಟು ಸರಿ ಅನ್ನೋದು ಸಾರ್ವಜನಿಕರ ಆಕ್ರೋಶ.

ಬಿಜೆಪಿಯಲ್ಲಿ ಒಮ್ಮತದ ಕೊರತೆ?

ಇಲ್ಲಿ ಬಂದು ಆಯುಕ್ತರ ಕುರ್ಚಿಯಲ್ಲಿ ಕುಳಿತ ವ್ಯಕ್ತಿ ಸರ್ಕಾರದ ನಿಯಮಗಳನ್ನು ಪಾಲಿಸಿದ್ದಾರೆಯೇ ಎಂಬ ಪ್ರಶ್ನೆ ಈಗ ನಗರಸಭೆ ಸಿಬ್ಬಂದಿ ಮತ್ತು ಜನರನ್ನು ಕಾಡತೊಡಗಿದೆ. ಸೆಪ್ಟೆಂಬರ್ 10ರಂದು ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ರಮೇಶ್ ಜಾಧವ್​ ಈಗ ಗದಗ ನಗರಸಭೆ ಆಯುಕ್ತರು. ಅವರು ಸರ್ಕಾರದ ಆದೇಶ ಹಿಡಿದುಕೊಂಡು ಬಂದೇ ಇಲ್ಲಿ ಕುಳಿತಿದ್ದಾರೆ.

ಈವರೆಗೆ ಆಯುಕ್ತರಾಗಿದ್ದ ಮನ್ಸೂರ್ ಅಲಿ ಅವರಿಗೆ ಯಾವ ಹುದ್ದೆಯನ್ನೂ ನೀಡಿಲ್ಲ. ಇದು ಅಂಧಾದುಂಧಿ ವರ್ಗಾವಣೆ ದಂಧೆ ಬಯಲು ಮಾಡುತ್ತಿದೆ. ಜುಲೈ ತಿಂಗಳಲ್ಲಿ ವಿಜಯಪುರ ಕಾರ್ಪೊರೇಷನ್​ನ ಕಂದಾಯ ಇಲಾಖೆ ಅಧಿಕಾರಿಯಾಗಿದ್ದ ರಮೇಶ್ ಜಾಧವ್ ಅವರನ್ನು ಇಲ್ಲಿನ ನಗರಸಭೆ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ರೋಣ ಶಾಸಕ ಕಳಕಪ್ಪ ಬಂಡಿ ಜುಲೈ ಮೂರರಂದೇ ಪೌರಾಡಳಿತ ಸಚಿವ ನಾರಾಯಣಗೌಡರಿಗೆ ಪತ್ರ ಬರೆದು ಮನ್ಸೂರ್ ಅಲಿ ಅವರನ್ನೇ ಮುಂದುವರೆಸುವಂತೆ ಮನವಿ ಮಾಡಿದ್ದರು. ಆದರೀಗ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಬಂಡಿಯವರನ್ನು ಹಿಂದಿಕ್ಕಿ ಹೊಸ ಕಮಿಷನರ್ ಅವರನ್ನು ತಂದು ಗೆದ್ದಿದ್ದಾರೆ ಅನ್ನೋದು ಬಿಜೆಪಿ ಬೆಂಬಲಿಗರ ಮಾತು.

BJP
ಶಾಸಕ ಕಳಕಪ್ಪ ಬಂಡಿ ಮನವಿ

ಆಗ ಜನರಿಂದಲೂ ವಿರೋಧ ವ್ಯಕ್ತವಾಗಿದ್ದ ವಿಚಾರವಾಗಿ ಅಂದಿನ ವರ್ಗಾವಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು. ಆಗ ಸಾಮಾಜಿಕ ಜಾಲತಾಣದಲ್ಲಿ, ‘ವರ್ಗಾವಣೆ ರದ್ದು’ ಎಂಬ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್, ಇದು ‘ತಾತ್ಕಾಲಿಕ’ ಎಂದಿದ್ದರು. ಅಂದರೆ ವರ್ಗಾವಣೆ ತಡೆ ಆಗಿದ್ದು ಸಚಿವರಿಗೆ ಇಷ್ಟ ವಿರಲಿಲ್ಲ ಅನ್ನೋದು ಕಂಡಿತ್ತು. ಈಗ ರಮೇಶ ಜಾಧವ್ ಆಯುಕ್ತರಾಗಿರುವುದನ್ನು ನೋಡಿದ್ರೆ, ಸಚಿವರು ಬದ್ಧತೆ ಪಾಲಿಸಿದ್ದಾರೆ. ಪ್ರವಾಹ, ಅತಿವೃಷ್ಟಿ ಪರಿಹಾರಕ್ಕೆ ಒಂದೂ ರೂಪಾಯಿಯನ್ನೂ ರಾಜ್ಯ ಸರ್ಕಾರದಿಂದ ತರಲಾಗದ ಸಚಿವರು, ಗುರುವಾರ ಆಯುಕ್ತರ ನೇಮಕಾತಿ ಆದೇಶ ಹೊರಬೀಳಲು ತುಂಬ ಬೆವರು ಹರಿಸಿದ್ದಾರೆ ಅಂತಾ ಜನ ಮಾತಾಡುತ್ತಿದ್ದಾರೆ.

ನಗರಸಭೆ ಆಯುಕ್ತರ ವರ್ಗಾವಣೆ ವಿಷಯ ಅವಳಿ ನಗರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರೋದು ನಿಜ. ಇನ್ಮೇಲಾದ್ರೂ ಸಚಿವರು ವರ್ಗಾವಣೆ ಕಡೆ ಗಮನ ನೀಡುವುದನ್ನು ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸಲಿ ಅನ್ನೋದು ಜನರ ಆಗ್ರಹ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.