ETV Bharat / state

ಪ್ರವಾಹ ಸ್ಥಳಕ್ಕೆ ತೆರಳಿದ್ದ ಸಿಎಂಗೆ ಜನರ ದಿಗ್ಭಂಧನ... ಪೊಲೀಸರಿಂದ ಲಘು‌ ಲಾಠಿ ಪ್ರಹಾರ - gadag flood

ಗದಗ ಜಿಲ್ಲೆಯ ಕೊಣ್ಣೂರು ಗ್ರಾಮದಲ್ಲಿ ಜನರು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ದಿಗ್ಭಂಧನ ಹಾಕಿದ್ದರು. ಗ್ರಾಮಸ್ಥರನ್ನು ನಿಯಂತ್ರಿಸಲು ಪೊಲೀಸರು ಲಘು‌ ಲಾಠಿ ಪ್ರಹಾರ ನಡೆಸಿದರು.

ಲಘು‌ ಲಾಠಿ ಪ್ರಹಾರ
author img

By

Published : Aug 9, 2019, 6:00 PM IST

ಗದಗ: ಪ್ರವಾಹ ಪರಿಸ್ಥಿತಿ ಅರಿಯಲು ಜಿಲ್ಲೆಯ ಕೊಣ್ಣೂರು ಗ್ರಾಮಕ್ಕೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ಕಾರಿಗೆ ಗ್ರಾಮಸ್ಥರು ದಿಗ್ಭಂಧನ ಹಾಕಿದ ಘಟನೆ ನಡೆಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಲಘು‌ ಲಾಠಿ ಪ್ರಹಾರ ನಡೆಸಬೇಕಾಯಿತು.

ಸಿಎಂಗೆ ಜನರ ದಿಗ್ಭಂಧನ

ಕೊಣ್ಣೂರು ಗ್ರಾಮಕ್ಕೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿ ಅವಲೋಕಿಸಿದರು. ಆದರೆ, ಸಂತ್ರಸ್ತರನ್ನು ವಿಚಾರಿಸದೆ ಹಾಗೆಯೇ ತೆರಳಿದರು. ಪರಿಹಾರ ಘೋಷಣೆ ಮಾಡದೇ ತೆರಳಿದ್ದಕ್ಕೆ ಸಿಟ್ಟಿಗೆದ್ದ ಜನರು ತಮ್ಮ‌ ಜೊತೆ ಮಾತಾಡುವಂತೆ ಒತ್ತಾಯಿಸಿದರು. ನೂರಾರು ಗ್ರಾಮಸ್ಥರು ಸಿಎಂ ಡ್ರೈವರ್​​ಗೆ ಅವಾಚ್ಯ ಶಬ್ದಗಳಿಂದ ಬೈದರಲ್ಲದೆ, ಕಾರಿಗೆ ದಿಗ್ಭಂಧನ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ವಾಹನವನ್ನು ಗುದ್ದಿ ಹೇಗೆ ಹೊಗ್ತಾ ಇದ್ದಿರಿ ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದರು. ಈ ವೇಳೆ ಪೊಲೀಸರು ಲಘು‌ ಲಾಠಿ ಪ್ರಹಾರ ನಡೆಸಿದರು. ಆಕ್ರೋಶಗೊಂಡ ಗ್ರಾಮಸ್ಥರು, ಪೊಲೀಸರು ಮತ್ತು ಸರ್ಕಾರಿ ವಾಹನಗಳನ್ನು ಊರಿಂದ ಹೊರಗೆ ಕಳಿಸಿದರು. ಕೊನೆಗೂ ಪೊಲೀಸರು ಗ್ರಾಮಸ್ಥರ ಕ್ಷಮೆ ಕೇಳಿ ಮುನ್ನಡೆದರು.

Intro:Body:

gdgg bsy

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.