ETV Bharat / state

ಗಲ್ಲಾ ಪೆಟ್ಟಿಗೆಗಾಗಿ ಕಮಿಟಿ-ಮುಜಾವರಗಳ ಜಗಳ: ಐತಿಹಾಸಿಕ ಲಕ್ಕುಂಡಿ ದರ್ಗಾಕ್ಕೆ ಬೀಗ

ಗಲ್ಲಾ ಪೆಟ್ಟಿಗೆಗೆ ಬರುವ ಹಣವನ್ನು ಪೂಜೆ ಮಾಡುವ ಮುಜಾವರಗಳು ವೈಯಕ್ತಿಕವಾಗಿ ಬಳಸಿಕೊಳ್ತಿರೋದನ್ನು ಅಂಜುಮನ್ ಕಮಿಟಿಯವರು ತಕರಾರು ಮಾಡಿ ವಕ್ಫ್ ಮಂಡಳಿಗೆ ದೂರು ಕೊಟ್ಟ ಬಳಿಕ, ಗದಗ ತಹಶೀಲ್ದಾರ್ ಅವರನ್ನು ಆಡಳಿತ ಮಂಡಳಿಯ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಹಾಗಾಗಿ ಕಳೆದ ಐದು ತಿಂಗಳ ಹಿಂದೆ ಆಗಿನ ತಹಶೀಲ್ದಾರ್​ ಶ್ರೀನಿವಾಸ ಕುಲಕರ್ಣಿ ದರ್ಗಾಕ್ಕೆ ಬೀಗ ಹಾಕಿ ಹೋಗಿದ್ದಾರೆ.

ಐದು ತಿಂಗಳಿಂದ ದರ್ಗಾಕ್ಕೆ ಬೀಗ
ಐದು ತಿಂಗಳಿಂದ ದರ್ಗಾಕ್ಕೆ ಬೀಗ
author img

By

Published : Aug 6, 2021, 7:31 AM IST

ಗದಗ​: ಅದು ಭಾವೈಕ್ಯತೆ ಸಾರುವ ಐತಿಹಾಸಿಕ ದರ್ಗಾ. ಹಿಂದೂ-ಮುಸ್ಲಿಂ ಎನ್ನದೆ ಅಲ್ಲಿಗೆ ದಿನನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ವಿವಿಧ ಜಿಲ್ಲೆಗಳಿಂದ ವಿವಿಧ ರಾಜ್ಯಗಳಿಂದ ಆಗಮಿಸಿ ತಮ್ಮ ಹರಕೆ ತೀರಿಸಿ ಹೋಗುತ್ತಾರೆ.

ಆದರೆ ಕಳೆದ ಐದು ತಿಂಗಳಿಂದ ಆ ದರ್ಗಾಕ್ಕೆ ಗರ ಬಡಿದಂತಾಗಿದೆ. ಯಾಕೆಂದರೆ ಆಡಳಿತ ಮಂಡಳಿ ಮತ್ತು ಅಲ್ಲಿ ಪೂಜೆ ಮಾಡುವ ಮುಜಾವರಗಳ ನಡುವೆ ನಡೆದ ಕಲಹದ ಪರಿಣಾಮ, ದರ್ಗಾಕ್ಕೆ ಬೀಗ ಜಡಿಯಲಾಗಿದ್ದು ಭಕ್ತ ಸಮೂಹದ ಕೆಂಗಣ್ಣಿಗೆ ಗುರಿಯಾಗಿದೆ.

ಐತಿಹಾಸಿಕ ಲಕ್ಕುಂಡಿ ದರ್ಗಾಕ್ಕೆ ಬೀಗ

ಲಕ್ಕುಂಡಿ ಗ್ರಾಮದ ಬಳಿ ಇರುವ ಐತಿಹಾಸಿಕ ಜಿಂದೇಶ್ಯಾವಲಿ ದರ್ಗಾಕ್ಕೆ ಐದು ತಿಂಗಳಿನಿಂದ ಬೀಗ ಹಾಕಲಾಗಿದೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಆಡಳಿತ ಮಂಡಳಿ ಅಂಜುಮನ್-ಇ-ಕಮಿಟಿ ಮತ್ತು ಮುಜಾವರಗಳ ನಡುವಿನ ಒಳಜಗಳ. ದರ್ಗಾಕ್ಕೆ ಬರುವ ಸಾವಿರಾರು ಜನರು ಗಲ್ಲಾ ಪೆಟ್ಟಿಗೆಗೆ ಹಾಕುವ ಹಣದ ವಿಚಾರವೇ ಸಂಘರ್ಷದ ಮೂಲ.

ಗಲ್ಲಾ ಪೆಟ್ಟಿಗೆಗೆ ಬರುವ ಹಣವನ್ನು ಪೂಜೆ ಮಾಡುವ ಮುಜಾವರಗಳು ವೈಯಕ್ತಿಕವಾಗಿ ಬಳಸಿಕೊಳ್ತಿರುವ ಬಗ್ಗೆ ಅಂಜುಮನ್ ಕಮಿಟಿ ತಕರಾರು ಮಾಡಿ ವಕ್ಫ್ ಮಂಡಳಿಗೆ ದೂರು ಕೊಟ್ಟಿದ್ದು, ಗದಗ ತಹಶೀಲ್ದಾರ್ ಅವರನ್ನು ಆಡಳಿತ ಮಂಡಳಿಯ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಹಾಗಾಗಿ ಕಳೆದ ಐದು ತಿಂಗಳ ಹಿಂದೆ ಆಗಿನ ತಹಶೀಲ್ದಾರ್​ ಶ್ರೀನಿವಾಸ ಕುಲಕರ್ಣಿ ದರ್ಗಾಕ್ಕೆ ಬೀಗ ಹಾಕಿ ಹೋಗಿದ್ದಾರೆ. ಆದರೆ ಈಗ ಅವರು ಬೇರೆ ಕಡೆ ವರ್ಗಾವಣೆ ಆಗಿದ್ದು ದರ್ಗಾದ ಬೀಗವನ್ನು ಇನ್ನೂ ಪೂರ್ಣವಾಗಿ ತೆರೆದಿಲ್ಲ. ಕೇವಲ ಮುಜಾವರುಗಳಿಗೆ ಪೂಜೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ಬರುವ ಭಕ್ತರಿಗೆ ಅನುಕೂಲವಾಗಿದ್ದ ಯಾತ್ರಿನಿವಾಸಿಗಳಿಗೆ ಬೀಗ ಬಿದ್ದಿದೆ.

ದರ್ಗಾಕ್ಕೆ ಬರುವ ಭಕ್ತರಿಗೆ ಯಾತ್ರೆ ನಿವಾಸಗಳಿಗೆ ಸಂಪೂರ್ಣ ಬೀಗ ಹಾಕಲಾಗಿದ್ದರಿಂದ ಭಕ್ತರು ಹೊರಗಡೆ ಕೂತು ಊಟ ಮಾಡುವ ಮತ್ತು ಅಡುಗೆ ಮಾಡವ ಪರಿಸ್ಥಿತಿ ಉಂಟಾಗಿದೆ. ಇಲ್ಲಿ ಸುಮಾರು 8 ಯಾತ್ರಿ ನಿವಾಸಗಳಿದ್ದ ಬೀಗ ಹಾಕಲಾಗಿದೆ. ಇದರಿಂದ ಬರುವ ಭಕ್ತರು ಮಳೆಯಲ್ಲಿಯೇ ಊಟ ಮಾಡುವಂತ ಪರಿಸ್ಥಿತಿ ಉದ್ಭವಿಸಿದೆ. ಈ ಬಗ್ಗೆ ತಾಲೂಕಾಡಳಿತದ ಗಮನಕ್ಕೆ ತಂದರೂ ಸಹ ಬೀಗ ತೆರೆಯದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ದರ್ಗಾ ಊರ ಹೊರಗಡೆ ಇರೋದರಿಂದ ಅಕ್ಕಪಕ್ಕದಲ್ಲಿ ಯಾವುದೇ ಪಟ್ಟಣಗಳೂ ಸಹ ಇಲ್ಲ. ಗದಗ ನಗರಕ್ಕೆ ಬರಬೇಕು ಅಂದರೆ ಅಲ್ಲಿ ದುಬಾರಿ ವೆಚ್ಚ ಕೊಟ್ಟು ಲಾಡ್ಜ್​ಗಳಲ್ಲಿ ಉಳಿದುಕೊಳ್ಳಬೇಕಾಗಿದೆ. ಆದರೆ ದರ್ಗಾ ದಲ್ಲಿರುವ ಯಾತ್ರಿನಿವಾಸಿಗಳು ಕಡಿಮೆ ದರಕ್ಕೆ ಸಿಗೋದಿಂದ ಭಕ್ತರಿಗೆ ಅನುಕೂಲವಾಗುತ್ತಿತ್ತು. ಆದರೆ ಈಗ ತಾಲೂಕಾಡಳಿತದ ಬೇಜವಾಬ್ದಾರಿಯಿಂದ ಭಕ್ತರು ಪರದಾಡುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೈಸೂರು ವಿವಿ ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿ ಮೇಲೆ‌ ಅತ್ಯಾಚಾರ ಆರೋಪ: ಪತಿಯನ್ನೇ ಠಾಣೆಗೆ ಕರೆದೊಯ್ದ ಪತ್ನಿ!

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.