ಗದಗ : ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯು ಹಲವು ಅವಾಂತರ ಸೃಷ್ಟಿಸಿದೆ. ಭಾರಿ ಮಳೆಯಿಂದಾಗಿ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಜನ ಪರದಾಡಿದ್ದಾರೆ.
ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಬಾಣಂತಿ, ಹಸುಗೂಸು ಪರದಾಡಿದ್ದಾರೆ. ನರಗುಂದ ತಾಲೂಕು ಆಸ್ಪತ್ರೆಯಲ್ಲಿನ ಸ್ಟಾಫ್ ನರ್ಸ್ ಆಗಿರುವ ಭಾರತಿ ಪಾಟೀಲ, ಸಂಗಮ್ಮ ಚಿತ್ತರಗಿ ಎಂಬುವರ ಮನೆಗಳಿಗೆ ನೀರು ನುಗ್ಗಿದೆ.
ಭಾರತಿ ಪಾಟೀಲರ ಮಗಳು ಸ್ಮೀತಾ ಜಾಧವ ತನ್ನ ಎರಡು ದಿನದ ಹಸುಗೂಸಿನ ಜೊತೆಗೆ ಮನೆಯಲ್ಲಿ ಪರದಾಡಿದ್ದಾರೆ.