ಗದಗ:ಆಕಸ್ಮಿಕವಾಗಿ ಗುಂಡು ತಗುಲಿ ಛತ್ತೀಸ್ಗಡದಲ್ಲಿ ಹುತಾತ್ಮರಾಗಿದ್ದ ಗದಗ ಮೂಲದ ಯೋಧನ ಅಂತ್ಯಕ್ರಿಯೆಯನ್ನು ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರೆವೇರಿಸಲಾಯಿತು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದ ಯೋಧ ಲಕ್ಷ್ಮಣ ಗೌರಣ್ಣವರ್ (30) ಛತ್ತೀಸ್ಗಡದಲ್ಲಿ ಎರಡು ದಿನಗಳ ಹಿಂದೆ ಹುತಾತ್ಮರಾಗಿದ್ದರು. ನಿನ್ನೆ ತಡರಾತ್ರಿ ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಬಂದಿತ್ತು. ಪಾರ್ಥಿವ ಶರೀರ ಬರುತ್ತಿದ್ದಂತೆ ಜೈಘೋಷ ಹಾಕಿ ಗ್ರಾಮಸ್ಥರು ಕಂಬನಿ ಮಿಡಿದಿದ್ದರು. ಇಂದು ಗ್ರಾಮದ ಸರ್ಕಾರಿ ಜಾಗದಲ್ಲಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದನ್ನೂ ಓದಿ: ಮರಳಿ ಬಂದು ತಮ್ಮಂದಿರ ಮದುವೆ ಮಾಡ್ತೀನಿ ಅಂದಿದ್ದ ಯೋಧ... ಛತ್ತೀಸ್ಗಡದಲ್ಲಿ ಹುತಾತ್ಮ
ಯೋಧ ಲಕ್ಷ್ಮಣ ಗೌರಣ್ಣವರ್ ಅವರಿಗೆ ಪತ್ನಿ ಹಾಗೂ ಮೂರು ಮಕ್ಕಳಿದ್ದಾರೆ. ಜೊತೆಗೆ ತಂದೆ, ತಾಯಿ ಮತ್ತು ಇಬ್ಬರು ತಮ್ಮಂದಿರಿದ್ದು ಮನೆಯ ಜವಾಬ್ದಾರಿ ಯೋಧನ ಮೇಲಿತ್ತು. ಆದರೆ, ಈಗ ಮನೆ ಯಜಮಾನನ್ನೇ ಕಳೆದುಕೊಂಡಿದ್ದು, ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.