ಗದಗ: ಪ್ರವಾಹ ಭೀತಿ ಹಿನ್ನೆಲೆ ರಾತ್ರಿ ನಿಮಜ್ಜನವಾಗಬೇಕಿದ್ದ ಗಣೇಶನನ್ನು ಮಧ್ಯಾಹ್ನವೇ ನದಿಗೆ ಬಿಟ್ಟಿರುವ ಘಟನೆ ಜಿಲ್ಲೆಯ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.
ಪ್ರತಿ ವರ್ಷ ಕೊಣ್ಣೂರ ಗ್ರಾಮದಲ್ಲಿ ಐದು ದಿನಗಳ ಕಾಲ ಗಣೇಶ ಪೂಜೆ ನೆರವೇರಿಸಿ ಐದನೇ ದಿನ ರಾತ್ರಿ ನಿಮಜ್ಜನ ಮಾಡಲಾಗುತ್ತದೆ. ಆದರೆ ಈ ಬಾರಿ ಬೆಳಗಾವಿ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ, ಕೊಣ್ಣೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ.
ಹೀಗಾಗಿ ರಾತ್ರಿ ವೇಳೆ ಗ್ರಾಮಕ್ಕೆ ಪ್ರವಾಹ ಬಂದರೆ ಗಣೇಶ ನಿಮಜ್ಜನ ಮಾಡಲು ಸಮಸ್ಯೆಯಾಗಬಹುದು ಎಂದು ಮಧ್ಯಾಹ್ನವೇ ನಿಮಜ್ಜನ ಕಾರ್ಯ ಮುಗಿಸಲಾಗಿದೆ.