ಗದಗ: ಜಿಲ್ಲೆಯಲ್ಲಿಂದು ಮತ್ತೆ ಐದು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 237ಕ್ಕೆ ಏರಿಕೆಯಾಗಿದೆ.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಕರಿಯನ ಓಣಿ ನಿವಾಸಿ 24 ವರ್ಷದ ಮಹಿಳೆ ರೋಗಿ-28299ಯಲ್ಲಿ ಸೋಂಕು ದೃಢಪಟ್ಟಿದೆ. ಗದಗ-ಬೆಟಗೇರಿ ನಗರದ ಕುರಟ್ಟಿಪೇಟ ನಿವಾಸಿ 40 ವರ್ಷದ ಪುರುಷ ರೋಗಿ-28300 ಸೋಂಕು ತಗುಲಿದೆ. ಇವರಲ್ಲಿ ಕೆಮ್ಮು ಹಾಗೂ ಜ್ವರದ ಲಕ್ಷಣ ಕಂಡುಬಂದ ಹಿನ್ನೆಲೆ ಇವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
ಇನ್ನು ಹರ್ತಿ ಗ್ರಾಮದ ನಿವಾಸಿ 22 ವರ್ಷದ ಮಹಿಳೆ ರೋಗಿ-18287 ಸೋಂಕಿತರ ಸಂಪರ್ಕದಿಂದಾಗಿ ಗದಗ-ಬೆಟಗೇರಿ ನಗರದ ಜವಳ ಗಲ್ಲಿ ನಿವಾಸಿ 23 ವರ್ಷದ ಮಹಿಳೆ ರೋಗಿ-28301 ಹಾಗೂ ಎ.ಪಿ.ಎಂ.ಸಿ. ಹಿಂದುಗಡೆ ಹಮಾಲರ ಓಣಿ ನಿವಾಸಿ 35 ವರ್ಷದ ಮಹಿಳೆ ರೋಗಿ-28302 ಇವರಿಗೆ ಸೋಂಕು ದೃಢಪಟ್ಟಿರುತ್ತದೆ. ತೆಲಂಗಾಣ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಗೌರಿ ಓಣಿ ನಿವಾಸಿ 32 ವರ್ಷದ ಪುರುಷ ರೋಗಿ-28303 ಇವರಿಗೆ ಸೋಂಕು ತಗುಲಿದೆ.
ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ತಿಳಿಸಿದ್ದಾರೆ. ಇನ್ನು ಸೋಂಕಿತರ ಪೈಕಿ ನಾಲ್ಕು ಜನ ಮೃತಪಟ್ಟಿದ್ದು, 165 ಜನ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 68 ಕೋವಿಡ್-19 ಸೋಂಕಿನ ಸಕ್ರಿಯ ಪ್ರಕರಣಗಳಿವೆ.