ಗದಗ: ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭವಾಗಿದೆ. ಆದರೆ ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ಪ್ರಯಾಣಿಕರ ಮೇಲೆ ಹೆಜ್ಜೇನು ದಾಳಿ ನಡೆಸಿರುವ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಹೆಜ್ಜೇನಿಗೆ ಬೆದರಿದ ಸಿಬ್ಬಂದಿ ಹಅಗೂ ಪ್ರಯಾಣಿಕರು ಸ್ಥಳದಿಂದ ಕಾಲ್ಕಿತ್ತು ಬಚಾವ್ ಆಗಿದ್ದಾರೆ. ಹೆಜ್ಜೇನು ದಾಳಿಯಿಂದ ಬಸ್ ನಿಲ್ದಾಣದೊಳಕ್ಕೆ ಹೋಗಲು ಪ್ರಯಾಣಿಕರು ಭಯ ಪಡುತ್ತಿದ್ದಾರೆ. ಹೆಜ್ಜೇನು ಬಿಡಿಸಿ ಭಯಮುಕ್ತ ವಾತಾವರಣ ಕಲ್ಪಿಸಲು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಬಹು ದಿನಗಳಿಂದ ಬಸ್ ನಿಲ್ದಾಣದೊಳಗೆ ಬೀಡು ಬಿಟ್ಟಿರುವ ಹೆಜ್ಜೇನು ಇದ್ದಕ್ಕಿದ್ದಂತೆ ದಾಳಿ ನಡೆಸಿದೆ. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ.