ಗದಗ: ಜಿಲ್ಲೆಯಾದ್ಯಂತ ಸಂಜೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು, ಮಿಂಚು, ಬಿರುಗಾಳಿ ಸಹಿತ ವರುಣ ಆರ್ಭಟಿಸಿದ್ದಾನೆ. ಪರಿಣಾಮ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ತೆಂಗಿನಮರ ಹೊತ್ತಿ ಉರಿದಿದೆ.
ಡೋಣಿ ಗ್ರಾಮದ ಹೊರವಲಯದಲ್ಲಿರುವ ಡಿಇಪಿ ಶಾಲೆ ಹತಿರ ಮಲ್ಲಪ ಕಡಕೋಳ ಎಂಬುವವರಿಗೆ ಸೇರಿದ ತೆಂಗಿನಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮರಕ್ಕೆ ಸಿಡಿಲು ಬಡಿಯುತ್ತಿದ್ದಂತೆ ಗ್ರಾಮದಲ್ಲಿ ದೊಡ್ಡ ಶಬ್ದ ಕೇಳಿದ್ದು ಎಲ್ಲರೂ ಬೆಚ್ಚಿಬಿದ್ದಿದ್ದಾರೆ.