ಗದಗ: ಲಕ್ಕಿ ಡ್ರಾ ಹೆಸರಲ್ಲಿ ಮೋಸ ಮಾಡಲಾಗಿದೆ ಎಂದು ಆರೋಪಿಸಿ ಕಂಪನಿಯ ಮಾಲೀಕ, ಏಜೆಂಟರಿಗೆ ಗ್ರಾಹಕರು ಥಳಿಸಿರೋ ಘಟನೆ ರೋಣ ಪಟ್ಟಣದಲ್ಲಿ ನಡೆದಿದೆ.
ಪ್ರಗತಿಬಂಧು ಕಂಪನಿಯ ಹೆಸರಲ್ಲಿ ಸೋಮನಗೌಡ ಪಾಟೀಲ್ ಎನ್ನುವವರು ಬೈಕ್, ಕಾರನ್ನು ಲಕ್ಕಿ ಡ್ರಾ ಮೂಲಕ ನೀಡಲಾಗುತ್ತದೆ ಎಂದು ಹೇಳಿ ತಲಾ ಒಬ್ಬರಿಗೆ 650 ರೂಪಾಯಿಗಳಂತೆ, ಸುಮಾರು 60 ಸಾವಿರ ಜನರಿಂದ ಹಣ ಪಡೆದಿದ್ರು.
ಇದರ ಲಕ್ಕಿ ಡ್ರಾವನ್ನು ಇಂದು ರೋಣ ಪಟ್ಟಣದ ಗುರುಭವನದಲ್ಲಿ ಆಯೋಜನೆ ಮಾಡಲಾಗಿತ್ತು. ಆದ್ರೆ, ಈ ಲಕ್ಕಿ ಡ್ರಾದಲ್ಲಿ ನಮಗೆ ಮೋಸ ಆಗಿದೆಯೆಂದು ಆರೋಪಿಸಿರೋ ಗ್ರಾಹಕರು ಮಾಲೀಕ ಹಾಗೂ ಏಜೆಂಟರಿಗೆ ಹಿಗ್ಗಾಮುಗ್ಗಾ ಗೂಸಾ ನೀಡಿದ್ದಾರೆ.