ETV Bharat / state

ಕಾಂಗ್ರೆಸ್‌ ತೊರೆದು ಕಮಲ ಮುಡಿದ ಕಾರ್ಯಕರ್ತರು.. ಬಿಜೆಪಿ ಪರ ಅನಿಲ್ ಮೆಣಸಿನಕಾಯಿ ಭರ್ಜರಿ ಪ್ರಚಾರ - Congress,activist ,BJP ,

ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ಸೊರಟೂರ, ಎಲಿಶಿರೋರ ಗ್ರಾಮ ಸೇರಿ ಹಲವು ಗ್ರಾಮಗಳಲ್ಲಿ ಶಿವಕುಮಾರ್ ಉದಾಸಿ ಪರ ಪ್ರಚಾರ ನಡೆಸಿದರು.

ಅನಿಲ್ ಮೆಣಸಿನಕಾಯಿ
author img

By

Published : Apr 14, 2019, 8:32 PM IST

ಗದಗ : ನಗರದಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ಇಂದು ಬಿಜೆಪಿ ಪಕ್ಷ ಸೇರ್ಪಡೆಗೊಂಡರು.

ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಕಾರ್ಯಗಳನ್ನ ಮೆಚ್ಚಿ ತಾವು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರೋದಾಗಿ ಅಲ್ಪಸಂಖ್ಯಾತ ಮುಖಂಡರು ಹಾಗೂ ಕಾರ್ಯಕರ್ತರು ಇದೇ ವೇಳೆ ಹೇಳಿದರು.

ಬಿಜೆಪಿ ನಾಯಕ ಅನಿಲ್ ಮೆಣಸಿನಕಾಯಿ

ಹಾವೇರಿ-ಗದಗ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಹ್ಯಾಟ್ರಿಕ್ ಗೆಲುವಿಗೆ ಹಗಲಿರುಳು ಶ್ರಮಿಸುತ್ತೇವೆ ಎಂದು ಇದೇ ವೇಳೆ ಮೆಣಸಿನಕಾಯಿ ಅವರಿಗೆ ಭರವಸೆ ನೀಡಿದರು.

ಉದಾಸಿ ಪರ ಭರ್ಜರಿ ಪ್ರಚಾರ:
ಗದಗ ಮತಕ್ಷೇತ್ರದ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಪರ ಭರ್ಜರಿ ಪ್ರಚಾರ ನಡೆಸಲಾಗುತ್ತಿದೆ. ಸುಡು ಬಿಸಿಲಿಗೆ ಹೆದರಿದ ನಾಯಕರು ಬೆಳ್ಳಂಬೆಳಗ್ಗೆ ಪ್ರಚಾರಕ್ಕಿಳಿದ್ದಿದ್ದಾರೆ. ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ಸೊರಟೂರ, ಎಲಿಶಿರೋರ ಸೇರಿ ಹಲವು ಗ್ರಾಮಗಳಲ್ಲಿ ಬಿಜೆಪಿ ಪ್ರಚಾರ ನಡೆದಿದೆ. ಮನೆಮನೆಗೆ ತೆರಳಿ ಮೋದಿ ಅಭಿವೃದ್ಧಿ ಕೆಲಸ ಹೇಳಿ ಕಮಲದ ಗುರ್ತಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ.

sample description

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.