ಗದಗ: ಪ್ರೀತಿಯ ಶಿಕ್ಷಕನ ವರ್ಗಾವಣೆಯಿಂದ ಬೇಸರಗೊಂಡ ಮಕ್ಕಳು ಕಣ್ಣೀರು ಹಾಕಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದಲ್ಲಿ ನಡೆಯಿತು.
ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜೆ.ಎಸ್.ಮುಲ್ಲಾ ಅವರು ಬೇರೆಡೆ ವರ್ಗಾವಣೆಯಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಗಮನ ಸೆಳೆದಿದ್ದರು. ಆದರೆ ಈಗ ವರ್ಗಾವಣೆಯಾಗಿದ್ದು, ಭಾವುಕ ಮಕ್ಕಳು ಶಿಕ್ಷಕರನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದರು. ಇದೇ ವೇಳೆ ಶಿಕ್ಷಕ ಕೂಡಾ ಕಣ್ಣೀರಾದರು. ಇದೇ ವೇಳೆ, ನೆಚ್ಚಿನ ಶಿಕ್ಷಕನ ವರ್ಗಾವಣೆ ಖಂಡಿಸಿ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ಕೂಡಾ ನಡೆಸಿದ್ದಾರೆ.