ETV Bharat / state

ಕಳಸಾ ಬಂಡೂರಿ ಯೋಜನೆಗೆ ಸಿಕ್ತು ಅನುಮತಿ: ಹೀಗಿದೆ ಹೋರಾಟದ ಹಾದಿ..

ಕರ್ನಾಟಕದ ಬಹುದಿನಗಳ ಬೇಡಿಕೆಯಾಗಿದ್ದ ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಅನುಮೋದನೆ ನೀಡಿದೆ. ರಾಜ್ಯಕ್ಕೆ ಬೇಕಿದ್ದ ಅತ್ಯಂತ ಮಹತ್ವದ ಯೋಜನೆಗೆ ನಡೆದ ಹೋರಾಟದ ಹಾದಿ ಇಲ್ಲಿದೆ.

kalasa banduri
ಕಳಸಾ ಬಂಡೂರಿ
author img

By

Published : Dec 29, 2022, 5:18 PM IST

ಗದಗ: ಕರ್ನಾಟಕದ ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಇಂದು ಒಪ್ಪಿಗೆ ಕೊಟ್ಟಿದೆ. ಇದರಿಂದ ಕಿತ್ತೂರು ಕರ್ನಾಟಕ ಭಾಗದ ಧಾರವಾಡ, ಬೆಳಗಾವಿ ಹಾಗು ಗದಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಸಿಹಿಸುದ್ದಿ ಸಿಕ್ಕಿದಂತಾಗಿದೆ. ಕಳಸಾ ಬಂಡೂರಿಗಾಗಿ ನಡೆದ ಹೋರಾಟದ ಹಾದಿಯನ್ನೊಮ್ಮೆ ನೋಡುವುದಾದರೆ..

1978: ಮಹದಾಯಿ ಯೋಜನೆ ಸಿದ್ಧ

1980: ಆಗಿನ ಸಿಎಂ ಎಸ್.ಆರ್.ಬೊಮ್ಮಾಯಿ ಆಯೋಗದಿಂದ ಯೋಜನೆ ಜಾರಿಗೆ ಸಲಹೆ

1988: ಕರ್ನಾಟಕ ಸರ್ಕಾರದ ಅನುಮೋದನೆ. ಆದರೆ ಗೋವಾ ಸರ್ಕಾರದ ವಿರೋಧದಿಂದ ತಡೆ.

1989: ಎಸ್.ಆರ್.ಬೊಮ್ಮಾಯಿ ಅವರಿಂದ ಗೋವಾ ಸಿಎಂ ಪ್ರತಾಪ್​ಸಿಂಗ್ ರಾಣೆ ಜತೆ ಮಾತುಕತೆ ನಡೆಸಿದ್ದು, 45 ಟಿಎಂಸಿ ನೀರು ಬಳಸಲು ಅನುಮತಿ

2000ರ ಜು.10: ಕಳಸಾ-ಬಂಡೂರಿ ನಾಲೆಗಳ ಯೋಜನೆಗೆ ರಾಜ್ಯ ಅರಣ್ಯ ಇಲಾಖೆಯಿಂದ ಪರಿಸರ ಕುರಿತು ಅನುಮತಿ

2000ರ ಆಗಸ್ಟ್ 22: ಬಂಡೂರಿ ನಾಲಾ ಯೋಜನೆ ಅಂದಾಜು ವೆಚ್ಚ 49.20 ಕೋಟಿ ರೂ., ಕಳಸಾ ನಾಲಾ ಯೋಜನೆ ಅಂದಾಜು ವೆಚ್ಚ 44.78 ಕೋಟಿ ರೂ.ಗೆ ಆಡಳಿತಾತ್ಮಕ ಒಪ್ಪಿಗೆ

2002: ಕೇಂದ್ರದ ಮಂಜೂರಾತಿ ಪಡೆದ ಕರ್ನಾಟಕ ಸರ್ಕಾರ ಕಾರ್ಯಪ್ರವೃತ್ತ

2002ರ ಏಪ್ರಿಲ್ 30: ಕಳಸಾ ಬಂಡೂರಿ ಕಣಿವೆಯಿಂದ 7.56 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಹರಿಸುವ ಕರ್ನಾಟಕದ ಯೋಜನೆಗೆ ಭಾರತ ಸರ್ಕಾರದ ಜಲಸಂಪನ್ಮೂಲ ಸಚಿವಾಲಯದಿಂದ ತಾತ್ವಿಕ ಒಪ್ಪಿಗೆ

2002ರ ಮೇ 5: ಗೋವಾ ತಕರಾರು

2002ರ ಜುಲೈ 9: ನ್ಯಾಯಾಧೀಕರಣ ರಚಿಸಲು ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಗೋವಾ ಸರ್ಕಾರದಿಂದ ಪತ್ರ

2002ರ ಸೆಪ್ಟೆಂಬರ್ 19: ಯೋಜನೆ ಅನುಷ್ಠಾನಕ್ಕೆ ಕೇಂದ್ರ ಜಲ ಆಯೋಗ ನೀಡಿದ್ದ ತಾತ್ವಿಕ ಒಪ್ಪಿಗೆಗೆ ಜಲ ಆಯೋಗದಿಂದಲೇ ತಡೆ

2002ರ ಡಿಸೆಂಬರ್ 20: ಮಹದಾಯಿ ನೀರಿನ ವಿವಾದ ಕುರಿತು ಚರ್ಚಿಸಲು ದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ ಗೋವಾ ಹಾಗೂ ಕರ್ನಾಟಕ ಸಭೆ

2006ರ ಸೆಪ್ಟೆಂಬರ್ 22: ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಕೆ.ಎಸ್.ಈಶ್ವರಪ್ಪ ಅವರಿಂದ ಬೆಳಗಾವಿ ಜಿಲ್ಲೆ ಕಣಕುಂಬಿಯಲ್ಲಿ ಭೂಮಿಪೂಜೆ

2006ರ ನವೆಂಬರ್ 15: ಕರ್ನಾಟಕ ಸರ್ಕಾರದ ಯೋಜನೆಗೆ ತಡೆ ನೀಡುವಂತೆ ಗೋವಾ ಸರ್ಕಾರದಿಂದ ಸವೋಚ್ಚ ನ್ಯಾಯಾಲಯಕ್ಕೆ ಮನವಿ

2006ರ ನವೆಂಬರ್ 27: ಕಾಮಗಾರಿಗೆ ತಡೆ ನೀಡಲು ನಿರಾಕರಣೆ

2010: ಮಹದಾಯಿ ಜಲ ವಿವಾದ ನ್ಯಾಯಾಧೀಕರಣ ನೇಮಕ

2014: ನ್ಯಾಯಾಧೀಕರಣ ತಂಡ ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ

2015: ಜೂನ್​ನಿಂದ ಮತ್ತೆ ಜನರ ಹೋರಾಟ

2016 : ಗದಗ ನರಗುಂದ ಧಾರವಾಡದ ನವಲಗುಂದ ಸೇರಿದಂತೆ ರೈತರ ಪ್ರತಿಭಟನೆಗೆ ನೋವಿನ ವರ್ಷ. ಬಿಜೆಪಿಯ ಮಟ್ಟಣ್ಣನವರ್ ಅವರಿಂದ ನಾಲೆ ಒಡೆಯುವ ಬೆದರಿಕೆ, ವಿಡಿಯೋ ಬಿಡುಗಡೆ

ಜುಲೈ 27: ನ್ಯಾಯಾಧೀಕರಣದಿಂದ ಕರ್ನಾಟಕದ ಮಧ್ಯಂತರ ಅರ್ಜಿ ತಿರಸ್ಕಾರ, ಜುಲೈ 28ರಂದು ಕರ್ನಾಟಕ ಬಂದ್.

ಆಗಸ್ಟ್ 08 : ಧಾರವಾಡದ ಯಮನೂರಿನಲ್ಲಿ ರೈತರ ಮೇಲೆ ನಡೆದ ಲಾಠಿ ಚಾರ್ಜ್‌ಗೆ ಸಂಬಂಧಿಸಿದಂತೆ 6 ಪೊಲೀಸ್ ಕಾನ್ಸ್‌ಟೇಬಲ್‌ಗಳ ಅಮಾನತು.

ಮಹದಾಯಿಗೆ ಸಂಬಂಧಿಸಿ ನ್ಯಾಯಾಧೀಕರಣ ನೀಡಿರುವ ಮಧ್ಯಂತರ ತೀರ್ಪಿನ ಕುರಿತು ಚರ್ಚೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ, ಕೇಂದ್ರಕ್ಕೆ ರಾಜ್ಯದಿಂದ ನಿಯೋಗ ಕರೆದೊಯ್ಯಲು ನಿರ್ಧಾರ.

ಸೆಪ್ಟೆಂಬರ್ 02 : ಮಹದಾಯಿ ನದಿ ನೀರಿನ ವಿವಾದವನ್ನು ಮಾತುಕತೆ ಮೂಲಕ ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳುವಂತೆ ನ್ಯಾಯಮಂಡಳಿ ನೀಡಿರುವ ಸಲಹೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.

2017 ಫೆಬ್ರವರಿ 15: ಮಹದಾಯಿ ನೀರಿಗಾಗಿ ಹೋರಾಟ ನಡೆಸಿದ ರೈತರ ಮೇಲೆ ಹೂಡಿರುವ 94 ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ವಾಪಸ್‌ ಪಡೆದಿದೆ.

ಜುಲೈ 18 : ಮಹದಾಯಿ ನದಿ ವಿವಾದವನ್ನು ಪರಸ್ಪರ ಸೌಹಾರ್ದಯುತ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಮಾಡಿದ್ದ ಮನವಿಯನ್ನು ಗೋವಾ ಸರ್ಕಾರ ತಿರಸ್ಕರಿಸಿದೆ.

ಡಿಸೆಂಬರ್ 20 : ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆ ನೀಡಿದ್ದ ಅನುಮತಿ ಪತ್ರದ ದಾಖಲೆಯನ್ನು ವಿಚಾರಣೆ ವೇಳೆ ಹಾಜರಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಡಿಸೆಂಬರ್ 21: ಮಹದಾಯಿ ಕುರಿತಂತೆ ಸಿಹಿ ಸುದ್ದಿ ನೀಡುವುದಾಗಿ ಬಿಎಸ್ ಯಡಿಯೂರಪ್ಪರಿಂದ ಘೋಷಣೆ.

ಡಿಸೆಂಬರ್ 22: ಬೆಂಗಳೂರಿಗೆ ಆಗಮಿಸಿದ ರೈತರ ಸಮೂಹ, ಬಿಜೆಪಿ ಕಚೇರಿ ಮುಂದೆ ನ್ಯಾಯಕ್ಕಾಗಿ ಅಗ್ರಹ.

ಡಿಸೆಂಬರ್ 27: ಉತ್ತರ ಕರ್ನಾಟಕ ಬಂದ್, 100ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಬಲ.

2018: ಜುಲೈ 24: ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿ ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ನೀರಿನ ದಿಕ್ಕನ್ನು ತಿರುಗಿಸುವ ಉದ್ದೇಶದಿಂದ 5 ಕಿಮೀ ಉದ್ದದ ಸುರಂಗವನ್ನು ಕರ್ನಾಟಕ ನಿರ್ಮಿಸಿದೆ ಎಂದು ಆರೋಪಿಸಿ, ಕರ್ನಾಟಕದ ವಿರುದ್ಧ ಗೋವಾ ಸರ್ಕಾರವು ನ್ಯಾಯಾಧೀಕರಣಕ್ಕೆ ದೂರು ನೀಡಿದೆ.

ಆಗಸ್ಟ್ 14: ರಾಜ್ಯಕ್ಕೆ ಒಟ್ಟು 13.5 ಟಿಎಂಸಿ ಅಡಿ ನೀರು ದೊರೆತಿದೆ. ಕುಡಿಯಲು 5.5 ಟಿಎಂಸಿ ಅಡಿ ನೀರು, ನೀರಾವರಿಗೆ 8 ಟಿಎಂಸಿ ಅಡಿ ನೀರು, ವಿದ್ಯುತ್‌ಗೆ 8.2 ಟಿಎಂಸಿ ಅಡಿ, ಕಳಸಾ ಯೋಜನೆಗೆ 1.12, ಬಂಡೂರಿ ನಾಲಾ ಯೋಜನೆಗೆ 2.18 ನೀರು ವಿತರಣೆ ಮಾಡಲಾಗಿದೆ. ಮಹದಾಯಿ ನೀರಿನಿಂದ 4 ಟಿಎಂಸಿ ಅಡಿ ನೀರನ್ನು ಮಲಪ್ರಭಾ ಅಣೆಕಟ್ಟೆಗೆ ಹರಿಸುವಂತೆಯೂ ತೀರ್ಪಿನಲ್ಲಿ ಹೇಳಲಾಗಿದೆ.

ಇದನ್ನೂಓದಿ: ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಅನುಮೋದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.