ETV Bharat / state

ಜಿಮ್ಸ್​​ ಹೊರ ಗುತ್ತಿಗೆ ಸಿಬ್ಬಂದಿಯ ಸಂಬಳ ಪಾವತಿಸುವಂತೆ ಸಚಿವ ಸಿ.ಸಿ.ಪಾಟೀಲ್​ ಖಡಕ್​ ಸೂಚನೆ - Gadag District Collector's Hall

ಗ್ರೂಪ್ ಡಿ ಹಾಗೂ ನರ್ಸ್ ಸಿಬ್ಬಂದಿಗೆ ವೇತನ ಬಿಡುಗಡೆ ಆಗಿರದ ಹಿನ್ನೆಲೆ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್​ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಭೆ ನಡೆಸಿದರು.

Gadag
ಜಿಲ್ಲಾಧಿಕಾರಿಗಳ ಸಭಾಂಗಣ
author img

By

Published : May 19, 2020, 10:31 AM IST

ಗದಗ: ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಸಿಬ್ಬಂದಿಗೆ ಸಂಬಳ ವಿಳಂಬ ಮಾಡದೆ ಪಾವತಿಸುವಂತೆ ಸಚಿವ ಸಿ.ಸಿ.ಪಾಟೀಲ್ ಖಡಕ್ ಸೂಚನೆ ಕೊಟ್ಟಿದ್ದಾರೆ.

ಗ್ರೂಪ್ ಡಿ ಹಾಗೂ ನರ್ಸ್ ಸಿಬ್ಬಂದಿಗೆ ವೇತನ ಬಿಡುಗಡೆ ಆಗಿರುವುದಿಲ್ಲ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್​ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಭಾಗವಹಿಸಿದ್ದ ಜಿಮ್ಸ್​​ ನಿರ್ದೇಶಕ ಡಾ. ಪಿ.ಎಸ್.ಭೂಸರೆಡ್ಡಿ ಮಾಹಿತಿ ನೀಡಿ, ಹೊರ ಗುತ್ತಿಗೆ ಸಿಬ್ಬಂದಿ ಕುರಿತಂತೆ 2020ರ ಜನವರಿಯಲ್ಲಿ 289 ಸಿಬ್ಬಂದಿ ಪೈಕಿ 277 ಸಿಬ್ಬಂದಿಗೆ ವೇತನ ಪಾವತಿಯಾಗಿದೆ ಎಂದರು.

ಫೆಬ್ರವರಿಯಲ್ಲಿ 290ರ ಪೈಕಿ 276 ಜನರಿಗೆ ಹಾಗೂ ಮಾರ್ಚ್​ನಲ್ಲಿ 296 ಜನರ ಪೈಕಿ 275 ಜನರಿಗೆ ವೇತನ ಪಾವತಿಯಾಗಿದೆ. 42 ಜನ ಸಿಬ್ಬಂದಿಯ ವೇತನ ಪಾವತಿಯಾಗಿಲ್ಲ. ಇದಲ್ಲದೇ 104 ಜನ ಸಿಬ್ಬಂದಿ ದಾಖಲೆ ನೀಡದಿರುವ ಕಾರಣ ವೇತನ ಬಾಕಿ ಉಳಿದಿದೆ ಎಂದು ಗುತ್ತಿಗೆ ಸಂಸ್ಥೆ ತಿಳಿಸಿದೆ.

ಜಿಮ್ಸ್​​​ನಲ್ಲಿ ಕೆಲಸಕ್ಕೆ ತೆಗೆದುಕೊಂಡಿದ್ದ ಹೊರ ಗುತ್ತಿಗೆ ಆಧಾರದ ಮೇಲೆ ನರ್ಸ್​ ಸಿಬ್ಬಂದಿ ಕುರಿತಂತೆ ಮಾರ್ಚ್​ ತಿಂಗಳಲ್ಲಿ 6 ಜನರು ನೇಮಕಗೊಂಡಿದ್ದಾರೆ. ಏಪ್ರಿಲ್​​ ತಿಂಗಳಲ್ಲಿ 16 ಜನರು ನೇಮಕವಾಗಿದ್ದು, ಅವರ 30 ದಿನದ ವೇತನ ಮಾತ್ರ ಬಾಕಿ ಇರುತ್ತದೆ. ಸಿಬ್ಬಂದಿಯನ್ನು ಒದಗಿಸುವ ಗುತ್ತಿಗೆ ಸಂಸ್ಥೆಗೆ ಸಂಬಳ ಬಾಕಿ ಇರುವ ಪ್ರಕರಣಗಳಿಗೆ ಈಗಾಗಲೇ ಮೂರು ಬಾರಿ ಕಾರಣ ಕೇಳುವ ನೋಟಿಸ್​ ನೀಡಲಾಗಿದೆ ಎಂದು ಜಿಮ್ಸ್​​ ನಿರ್ದೇಶಕರು ವಿವರಣೆ ನೀಡಿದರು.

ಇನ್ನು ಕೋವಿಡ್-19 ಸೋಂಕು ನಿಯಂತ್ರಣ ಸಂಕಷ್ಟ ಪರಿಸ್ಥಿತಿಯಲ್ಲಿ ವೈದ್ಯಕೀಯ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಸಂಬಳ ವಿಳಂಬವಾಗಬಾರದು. ಇವರನ್ನು ನೀಡಿರುವ ಗುತ್ತಿಗೆ ಸಂಸ್ಥೆ ಒಂದು ವಾರದಲ್ಲಿ ಸಿಬ್ಬಂದಿಯ ಬಾಕಿ ಸಂಬಳವನ್ನು ಪಾವತಿಸದಿದ್ದಲ್ಲಿ ಅವರ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.