ETV Bharat / state

ಶ್ರೀಬನಶಂಕರಿ ದೇವಿ ರಥೋತ್ಸವಕ್ಕೆ ಹಗ್ಗ ಕೊಂಡೊಯ್ದ ಎತ್ತು ಹೃದಯಾಘಾತದಿಂದ ಸಾವು.. - ಹಗ್ಗ ಕೊಂಡೊಯ್ದಿದ್ದ ಎತ್ತು ಹೃದಯಾಘಾತದಿಂದ ಸಾವು

ಸುಮಾರು 15 ಕ್ವಿಂಟಾಲ್​ಗೂ ಅಧಿಕ ಬಾರದ ಹಗ್ಗವನ್ನು ಹೊತ್ತು ಮಲಪ್ರಭಾ ನದಿ ದಾಟಿದ್ದ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಅನ್ನಪ್ಪ ಮೇಟಿ ಎಂಬುವರಿಗೆ ಸೇರಿದ ಎತ್ತು ಇಂದು ಸಾವನ್ನಪ್ಪಿದೆ.

ಎತ್ತು ಹೃದಯಾಘಾತದಿಂದ ಸಾವು
ox died of a heart attack at Gadag
author img

By

Published : Jan 13, 2020, 5:19 PM IST

ಗದಗ : ಬಾದಾಮಿಯ ಶ್ರೀಬನಶಂಕರಿ ದೇವಿಯ ರಥೋತ್ಸವಕ್ಕೆ ಹಗ್ಗ ತೆಗೆದುಕೊಂಡು ಹೋಗಿದ್ದ ಎತ್ತೊಂದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಎತ್ತು ಹೃದಯಾಘಾತದಿಂದ ಸಾವು

ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಅನ್ನಪ್ಪ ಮೇಟಿ ಎಂಬುವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ. ಶ್ರೀ ಬನಶಂಕರಿಯ ರಥೋತ್ಸವ ಮುಗಿದು ವಾಪಸ್​ ಬರುವಾಗ ಎತ್ತು ಹೃದಯಾಘಾತದಿಂದ ಸಾವನ್ನಪ್ಪಿದೆ.‌

18ನೇ ಶತಮಾನದಿಂದ ಬನಶಂಕರಿ ದೇವಿಯ ರಥಕ್ಕೆ ಮಾಡಲಗೇರಿ ಗ್ರಾಮದಿಂದಲೇ ಹಗ್ಗ ಪೂರೈಸುವೆ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ 15 ಕ್ವಿಂಟಾಲ್​ಗೂ ಅಧಿಕ ಬಾರದ ಹಗ್ಗವನ್ನು ಹೊತ್ತುಕೊಂಡು ಮಲಪ್ರಭಾ ನದಿ ದಾಟಿತ್ತು. ಆದರೆ, ಇದೀಗ ರಥೋತ್ಸವದ ಕಾರ್ಯ ಮುಗಿಸಿ ವಾಪಸ್‌ ಆಗುವಾಗ ಎತ್ತು ಸಾವನ್ನಪ್ಪಿರುವುದು ಮಾಡಲಗೇರಿ ಗ್ರಾಮಸ್ಥರಲ್ಲಿ ದುಃಖ ಮನೆ ಮಾಡಿದೆ.

Intro:ಬನಶಂಕರಿ ದೇವಿಯ ರಥೋತ್ಸವಕ್ಕೆ ಹಗ್ಗವನ್ನು ತೆಗೆದುಕೊಂಡು ಹೋಗಿದ್ದ ಎತ್ತು ಹೃದಯಾಘಾತದಿಂದ ಸಾವು...

ಆ್ಯಂಕರ್- ಬಾದಾಮಿಯ ಶ್ರೀ ಬನಶಂಕರಿ ದೇವಿಯ ರಥೋತ್ಸವಕ್ಕೆ ಹಗ್ಗವನ್ನು ತೆಗೆದುಕೊಂಡು ಹೋಗಿದ್ದ ಎತ್ತು ಹೃದಯಾಘಾತದಿಂದ ಸಾವನ್ನಪ್ಪಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಅನ್ನಪ್ಪ ಮೇಟಿ ಎನ್ನುವವರಿಗೆ ಸೇರಿದ ಎತ್ತು ಇದಾಗಿದ್ದು ಬನಶಂಕರಿಯ ರಥೋತ್ಸವವನ್ನು ಮುಗಿಸಿಕೊಂಡು ವಾಪಾಸ್ಸ ಬರುವಾಗ ಎತ್ತು ಹೃದಯಾಘಾತದಿಂದ
ಸಾವನ್ನಪ್ಪಿದೆ.‌ ಮೊನ್ನೆ ತಾನೆ ಜಾತ್ರೆಯ ರಥೋತ್ಸವಕ್ಕೆ 15 ಕ್ವಿಂಟಾಲ್ ಗೂ ಅಧಿಕ ಬಾರದ ಹಗ್ಗವನ್ನು ಹೊತ್ತುಕೊಂಡು ಮಲಪ್ರಭಾ ನದಿಯನ್ನು ದಾಟಿತ್ತು ಈ ಎತ್ತು. ಮಾಡಲಗೇರಿಯಿಂದ‌ ರಥೋತ್ಸವದ ಹಗ್ಗವನ್ನು ಬನಶಂಕರಿ ಜಾತ್ರೆಗೆ ತಲುಪಿಸಿತ್ತು.‌ ಸುಮಾರು 18 ನೇ ಶತಮಾನದಿಂದ ಬನ ಶಂಕರಿ ದೇವಿಯ ರಥಕ್ಕೆ ಮಾಡಲಗೇರಿ ಗ್ರಾಮದಿಂದಲೇ ಹಗ್ಗ ಪೂರೈಕೆಯಾಗುವ ಸಂಪ್ರದಾಯವಿದೆ.‌ ಆದರೆ ಇದೀಗ ರಥೋತ್ಸವದ ಕಾರ್ಯ ಸಂಪನ್ನಗೊಳಿಸಿ ಎತ್ತು ಸಾವನ್ನಪಿರುವದರಿಂದ ಮಾಡಲಗೇರಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದ್ದು ಗ್ರಾಮಸ್ಥರಲ್ಲಿ ದುಃಖ ಮನೆ ಮಾಡಿದೆ...Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.