ETV Bharat / state

ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಬಡ್ಡಿ ದಂಧೆ ; ಚಿತ್ರಹಿಂಸೆ ನೀಡಿ ಯುವಕನನ್ನು ಕೊಂದ ಕಿರಾತಕರು! - Victim mruthyunjaya Baramagowda

ಮೃತ್ಯುಂಜಯನ ಮೇಲೆ ಹಲ್ಲೆಯಾದ ಮೇಲೆ ಬೆಟಗೇರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ರೌಡಿಶೀಟರ್ ಉಮೇಶ ಸುಂಕದ, ಉದಯ ಸುಂಕದ ಹಾಗೂ ವಿಕ್ರಮ ಎನ್ನುವ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ..

Three Accused
ಮೂವರು ಆರೋಪಿಗಳು
author img

By

Published : Apr 24, 2022, 9:41 AM IST

Updated : Apr 24, 2022, 12:42 PM IST

ಗದಗ : ಆ ಅವಳಿ ನಗರದಲ್ಲಿ ಬಡ್ಡಿ ದಂಧೆ ಅಟ್ಟಹಾಸ ಮೀತಿಮಿರಿದೆ. ಬಡ್ಡಿ ಹಣಕ್ಕಾಗಿ ಒತ್ತೆಯಾಳಾಗಿ ಇಟ್ಟುಕೊಂಡು, ಚಿತ್ರಹಿಂಸೆ ನೀಡಿ, ಯುವಕನನ್ನು ಕೊಲೆ ಮಾಡಿರುವ ಘಟನೆ ಗದಗದಲ್ಲಿ ನಡೆದಿದೆ. ಮಗನ ಮದುವೆ ಮಾಡಬೇಕು ಎಂದು ಕನಸು ಕಂಡಿದ್ದ ತಾಯಿ ಎದುರಲ್ಲೇ ಮುದ್ದಿನ ಮಗ ನರಳಿ ನರಳಿ ಸಾವನ್ನಪ್ಪಿದ್ದಾನೆ. ಗದಗ ನಗರದ ಕೆಸಿರಾಣಿ ರಸ್ತೆಯ ನಿವಾಸಿಯಾದ ಮೃತ್ಯುಂಜಯ ಭರಮಗೌಡರ್ ಬಡ್ಡಿ ದಂಧೆಕೋರರ ಅಟ್ಟಹಾಸಕ್ಕೆ ಸಿಲುಕಿ ಕೊಲೆಯಾದವನು.

ಅಕ್ರಮ ಬಡ್ಡಿ ದಂಧೆ- ಚಿತ್ರಹಿಂಸೆ ನೀಡಿ ಯುವಕನನ್ನು ಕೊಂದ ಕಿರಾತಕರು

ಸ್ನೇಹಿತನಿಂದ ಸಾಲ : ಮೃತ ಯುವಕ ಮೃತ್ಯುಂಜಯ ಭರಮಗೌಡರ್​ನ ಸ್ನೇಹಿತನಾದ ರೌಡಿಶೀಟರ್ ಉಮೇಶ್‌ ಸುಂಕದನ ಬಳಿ 2 ಲಕ್ಷ ರೂ. ಬಡ್ಡಿ ರೂಪದಲ್ಲಿ ಹಣ ಪಡೆದಿದ್ದ. ಅದಕ್ಕೆ ಒಂದು ಲಕ್ಷ ರೂಪಾಯಿ ಹಣ ವಾಪಸ್‌ ನೀಡಿದ್ದನು. ಆದರೂ ಉಮೇಶ ಸುಂಕದ, 1 ಲಕ್ಷ ರೂಪಾಯಿ ಬಡ್ಡಿಗೆ ಸಮವಾಗಿದೆ. ಇನ್ನೂ 2 ಲಕ್ಷ ರೂಪಾಯಿ ಹಣ ನೀಡಬೇಕು ಎಂದು ಕಿರುಕುಳ ನೀಡುತ್ತಿದ್ದ.

ಚಿತ್ರಹಿಂಸೆ ಮಾಡಿ ಕೊಂದ ಕಿರಾತಕರು : ಮಾರ್ಚ 23 ಬಡ್ಡಿ ಹಣಕ್ಕಾಗಿ ಮೃತ್ಯುಂಜಯ ಭರಮಗೌಡರ್​ನನ್ನು, ರೌಡಿಶೀಟರ್ ಉಮೇಶ್‌ ಸುಂಕದ, ಸಹೋದರ ಉದಯ ಸುಂಕದ್, ಇನ್ನೋರ್ವ ವಿಕ್ರಮ ಎಂಬುವರು ಸೇರಿಕೊಂಡು ಮನೆಯಿಂದ ಕರೆದ್ಯೊಯ್ದು ಜಮೀನೊಂದರಲ್ಲಿ ಮನಸ್ಸೋ ಇಚ್ಛೆ ಥಳಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಅಷ್ಟಕ್ಕೆ ಸಮಾಧಾನವಾಗದೆ ಮೂರು ದಿನ ಒತ್ತೆಯಾಳಾಗಿ ಇಟ್ಟುಕೊಂಡು ಜಮೀನು ಹಾಗೂ ಮನೆಯಲ್ಲಿ ಚಿತ್ರಹಿಂಸೆ ನೀಡಿ ಮನಬಂದಂತೆ ಥಳಿಸಿದ್ದಾರೆ. ಎದೆ, ಹೊಟ್ಟೆ, ಕೈಕಾಲು, ಹೀಗೆ ಎಲ್ಲೆಂದರಲ್ಲಿ ಹಲ್ಲೆ ಮಾಡಿದ್ದರು. ಕಳೆದ ಒಂದು ತಿಂಗಳಿಂದ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವನು ಚಿಕಿತ್ಸೆಗೆ ಸ್ಪಂದಿಸದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಲೆದಿದ್ದಾನೆ.

ಪೊಲೀಸರ ನಿರ್ಲಕ್ಷ್ಯ : ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬೆಟಗೇರಿ ಬಡಾವಣೆ ಪೊಲೀಸ್​ ಠಾಣೆಯಲ್ಲಿ ಇನ್​ಸ್ಪೆಕ್ಟರ್ ಸುಬ್ಬಾಪೂರಮಠ ದಂಧೆಕೋರರ ವಿರುದ್ಧ ಕ್ರಮಕೈಗೊಳ್ಳವುದು ಬಿಟ್ಟು ರಾಜಿ ಸಂಧಾನ ಮಾಡಿದ್ದರು. ಆಗಲೇ ಬಡ್ಡಿ ಹಣಕ್ಕೆ ಕಿರುಕುಳ ನೀಡುತ್ತಿದ್ದ ರೌಡಿಶೀಟರ್ ಉಮೇಶ ಸುಂಕದನಿಗೆ ತಕ್ಕ ಪಾಠವನ್ನು ಕಲಿಸಿದ್ದಿದ್ರೆ, ನನ್ನ ಸಹೋದರ ಇಂದು ಸಾಯುತ್ತಿರಲಿಲ್ಲ ಎಂದು ಸಹೋದರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಪೊಲೀಸರ ನಿರ್ಲಕ್ಷ್ಯ ಕೂಡ ಎದ್ದು ಕಾಣುತ್ತಿದೆ ಎಂಬ ಆರೋಪವೂ ಇದೆ.

ಮೃತ್ಯುಂಜಯನ ಮೇಲೆ ಹಲ್ಲೆಯಾದ ಮೇಲೆ ಬೆಟಗೇರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ರೌಡಿಶೀಟರ್ ಉಮೇಶ ಸುಂಕದ, ಉದಯ ಸುಂಕದ ಹಾಗೂ ವಿಕ್ರಮ ಎನ್ನುವ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉದಯ ಸುಂಕದನಿಗೆ ಜಾಮೀನು ಸಿಕ್ಕಿದೆ. ಕೊಲೆಗೆ ಕಾರಣವಾದ ಮೂವರಿಗೂ ತಕ್ಕ ಪಾಠವನ್ನು ಕಲಿಸಬೇಕು, ನಮಗೆ ನ್ಯಾಯ ಕೊಡಿಸಿ ಎಂದು ಸಹೋದರ ಒತ್ತಾಯಿಸಿದ್ದಾರೆ.

ಅವಳಿ ನಗರದಲ್ಲಿ ಮೀಟರ್ ಬಡ್ಡಿ, ಚಕ್ರ ಬಡ್ಡಿ ಸೇರಿ ಅಕ್ರಮ ವ್ಯವಹಾರ ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನು ತಡೆಯಬೇಕಾದ ಪೊಲೀಸರು ರಾಜಿ ಸಂಧಾನ ಮಾಡಿ ದಂಧೆಕೋರರಿಗೆ ರಕ್ಷಣೆ ನೀಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ. ಹೀಗಾಗಿ, ಯುವಕನ ಸಾವಿಗೆ ಪೊಲೀಸರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ‌. ಸಂಸಾರದ ಜವಾಬ್ದಾರಿ ಹೊತ್ತಿದ್ದ ಮಗ ತಾಯಿ ಮುಂದೆ ಸಾವನ್ನಪ್ಪಿದ್ದು, ತಾಯಿಗೆ ಅತೀವ ದುಃಖವನ್ನು ತಂದಿದೆ.

ಇದನ್ನೂ ಓದಿ: ದಲಿತ ಯುವಕನ ಮೇಲೆ ಹಲ್ಲೆ; ಬಲವಂತವಾಗಿ ಮೂತ್ರ ಮಿಶ್ರಿತ ಮದ್ಯ ಕುಡಿಸಿದ ದುಷ್ಕರ್ಮಿಗಳು

Last Updated : Apr 24, 2022, 12:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.