ಗದಗ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಟಿ. ರುದ್ರೇಶಪ್ಪ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರುದ್ರೇಶಪ್ಪ ಅವರ ದಾವಣಗೆರೆ ಜಿಲ್ಲೆಯ ಚನ್ನಗಿರಿಯ ತೋಟದ ಮನೆ, ಶಿವಮೊಗ್ಗದಲ್ಲಿರುವ ಚಾಲುಕ್ಯ ನಗರದ 4ನೇ ತಿರುವಿನಲ್ಲಿರುವ ಮನೆ ಹಾಗೂ ಗದಗದ ಬಾಡಿಗೆ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಇನ್ನು ರುದ್ರೇಶಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು 8 ಕ್ಕೂ ಅಧಿಕ ಸಿಬ್ಬಂದಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.