ಗದಗ: ಮಹದಾಯಿ ಮತ್ತು ಕಳಸಾ ಬಂಡೂರಿ ಹೋರಾಟ ಆರಂಭವಾಗಿ ಇಂದಿಗೆ ನಾಲ್ಕು ವರ್ಷ ಪೂರೈಸಿ 5ನೇ ವರ್ಷಕ್ಕೆ ಕಾಲಿಟ್ಟಿದ್ದು, ಇಂದಿಗೂ ಉತ್ತರ ಕರ್ನಾಟಕ ಮಂದಿಯ ಹೋರಾಟಕ್ಕೆ ಫಲ ಸಿಕ್ಕಿಲ್ಲ.
ಇನ್ನೂ ಹೋರಾಟಕ್ಕೆ 5 ವರ್ಷ ತುಂಬಿದ ಹಿನ್ನೆಲೆ ಬಂಡಾಯದ ನೆಲ ನರಗುಂದದಲ್ಲಿ ಸಾವಿರಾರು ರೈತರು ಸೇರುವ ನಿರೀಕ್ಷೆ ಇದ್ದು,14 ಆಗಸ್ಟ್ 2018 ರಂದು ಮಹದಾಯಿಗಾಗಿ ನ್ಯಾಯಾಧೀಕರಣ ತೀರ್ಪು ಪ್ರಕಟಿಸಿತ್ತು. ರಾಜ್ಯಕ್ಕೆ 13.5 ಟಿಎಂಸಿ ನೀರು ಕೊಡುವಂತೆ ಆದೇಶಿಸಿತ್ತು. ಆದ್ರೆ 11 ತಿಂಗಳು ಗತಿಸಿದರು ಈ ತನಕ ಅಧಿಸೂಚನೆ ಹೊರಡಿಸುವ ಕಾರ್ಯವಾಗಿಲ್ಲ.
ಮಹದಾಯಿ ಕುರಿತು ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಮಹದಾಯಿ ಹೋರಾಟದಲ್ಲಿನ ವ್ಯತ್ಯಾಸ ಕುರಿತು ಇಂದು ಹಲವು ಮಹತ್ವದ ನಿರ್ಣಯಗಳನ್ನ ರೈತರು ತೆಗೆದುಕೊಳ್ಳುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದ ಬಹುಬೇಡಿಕೆಯ ಎರಡು ಯೋಜನೆಗಳಿವು. ಈ ಭಾಗದ 5 ಜಿಲ್ಲೆಯ ರೈತರು ಹಾಗೂ ರೈತಸೇನಾ ಸಂಘಟನೆಯಿಂದ ಸತತವಾಗಿ ಹೋರಾಟ ಮಾಡಲಾಗುತ್ತಿದೆ.