ಗದಗ : ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಹಾಗೂ ಕೊರೊನಾ ಸೋಂಕಿತನಾಗಿದ್ದ 21 ವರ್ಷದ ಯುವಕನೋರ್ವ ಮೃತಪಟ್ಟಿದ್ದಾನೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ.
ಭಜಂತ್ರಿ ಓಣಿಯ ನಿವಾಸಿ 21 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಇವರ ತಂದೆ ಜಿಮ್ಸ್ ಆಸ್ಪತ್ರೆಯಲ್ಲಿ ಸುಪರ್ವೈಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಮನೆಯಲ್ಲಿ ಯಾರಿಗೂ ಕೊರೊನಾ ಸೋಂಕು ತಗುಲಿರಲಿಲ್ಲ. ಇವರ ತಂದೆಗೆ ಒಟ್ಟು ಮೂವರ ಮಕ್ಕಳ ಪೈಕಿ ಮೃತ ಯುವಕ ಎರಡನೇ ಮಗನಾಗಿದ್ದಾನೆ.
ಡೆಂಗ್ಯೂನಿಂದ ಬಳಲುತ್ತಿದ್ದ ಯುವಕನಿಗೆ ಪ್ಲೇಟ್ಲೆಟ್ಸ್ ಕೊರತೆಯಾಗಿತ್ತು, ಇದರ ಜೊತೆಗೆ ಎರಡು ದಿನಗಳ ಹಿಂದೆ ಕೊರೊನಾ ಇರುವುದು ದೃಢಪಟ್ಟಿತ್ತು.
ಈ ಕುರಿತು ಯುವಕನ ತಂದೆ ಈ ಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.