ETV Bharat / state

ಪಾದಾರಾಯನಪುರ ಗಲಭೆಯಲ್ಲಿ ಜಮೀರ್​​ ಕೈವಾಡ: ಪ್ರಮೋದ್​ ಮುತಾಲಿಕ್​​ ಆರೋಪ - ಪಾದರಾಯನಪುರ ಗಲಾಟೆ

ನಿನ್ನೆ ರಾತ್ರಿ ನಡೆದ ಪಾದಾರಾಯನಪುರ ಗಲಭೆಯಲ್ಲಿ ಶಾಸಕ ಜಮೀರ್​ ಅಹ್ಮದ್​ ಕೈವಾಡವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಕೂಡಲೇ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಈ ಕೂಡಲೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಮೋದ್ ಮುತಾಲಿಕ್​ ಆಗ್ರಹಿಸಿದ್ದಾರೆ.

Pramod Muthalik
ಪ್ರಮೋದ್​ ಮುತಾಲಿಕ್​​
author img

By

Published : Apr 20, 2020, 3:00 PM IST

ಧಾರವಾಡ: ಪಾದರಾಯನಪುರ ಗಲಾಟೆಯ ಹಿಂದೆ ಜಮೀರ್ ಅಹ್ಮದ್ ಕೈವಾಡ ಇದೆ. ಗಲಭೆ ಮಾಡಿದವರನ್ನು ಅದೇ ಏರಿಯಾದಲ್ಲಿ ಬೆತ್ತಲೆ ಮೆರವಣಿಗೆ ಮಾಡಿ, ಅವರ ಆಸ್ತಿ-ಪಾಸ್ತಿಯನ್ನು ಜಪ್ತಿ ಮಾಡಬೇಕು. ಈ ಗಲಾಟೆಗೆ ಜಮೀರ್​ ಅಹ್ಮದ್​​ ಕಾರಣೀಕರ್ತರಾಗಿದ್ದಕ್ಕೆ ಎಲ್ಲಿಯೂ ಹೊರಗೆ ಬರುತ್ತಿಲ್ಲ ಎಂದು ಪ್ರಮೋದ್​ ಮುತಾಲಿಕ್ ಆರೋಪ ಮಾಡಿದ್ದಾರೆ.

ಧಾರವಾಡದಲ್ಲಿ ಈ ಕುರಿತು ಮಾತನಾಡಿರುವ ಮುತಾಲಿಕ್​, ಪಾದರಾಯನಪುರದಲ್ಲಿ ನಡೆದ ಘಟನೆ ಅಸಹ್ಯಕರವಾಗಿದ್ದು, ಇದೊಂದು ದೇಶದ್ರೋಹದ ಪ್ರಕರಣ. ಇದನ್ನು ಅಷ್ಟು ಸುಲಭವಾಗಿ ಬಿಡದೆ, ಗಂಭಿರವಾಗಿ ಸರ್ಕಾರ ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ.

ಪ್ರಮೋದ್​ ಮುತಾಲಿಕ್​​

ಇದು ಕೇವಲ ಪುಂಡ ಪೋಕರಿಗಳ ಗಲಭೆ ಅಲ್ಲ, ಇದೊಂದು ವ್ಯವಸ್ಥಿತ ಸಂಚು. ಇದರ ಹಿಂದೆ ಶಾಸಕ ಜಮೀರ್ ಅಹ್ಮದ್​ ಕೈವಾಡವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ದೂರಿದ್ದಾರೆ.

ಇಷ್ಟೆಲ್ಲ ಅವಾಂತರಗಳು ನಡೆದಿದ್ದರೂ ಸಹ ಜಮೀರ್ ಅಹ್ಮದ್ ಮಾತ್ರ ಹೊರ ಬರುತ್ತಿಲ್ಲ, ಈ ಘಟನೆಗೆ ಜಮೀರ್​​ ಕಾರಣವಾದ್ದರಿಂದ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರಮೋದ್​ ಮುತಾಲಿಕ್​ ಕಿಡಿಕಾರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.