ETV Bharat / state

ವಿದ್ಯುತ್ ಸ್ಪರ್ಶವಾಗಿ ಯುವತಿ ಸಾವು - ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಯುವತಿ ಸಾವು

ಮನೆಯಲ್ಲಿ ಸ್ವಿಚ್ ಬದಲಿಸುತ್ತಿದ್ದ ವೇಳೆ, ವಿದ್ಯುತ್ ಸ್ಪರ್ಶವಾಗಿ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ.

Young woman dies as touch of power
ವಿದ್ಯುತ್ ಸ್ಪರ್ಶವಾಗಿ ಯುವತಿ ಸಾವು.
author img

By

Published : Jul 7, 2020, 5:52 PM IST

ಧಾರವಾಡ: ವಿದ್ಯುತ್ ಸ್ಪರ್ಶಿಸಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.

ಮಂಜುಳಾ ಪೂಜಾರ (21) ಎಂಬ ಯುವತಿ ಸಾವನ್ನಪ್ಪಿದ್ದು, ಮೃತ ಯುವತಿ ದಾಸನಕೊಪ್ಪ ಗ್ರಾಮದವಳಾಗಿದ್ದು ನರೇಂದ್ರ ಗ್ರಾಮದ ತನ್ನ ದೊಡ್ಡಪ್ಪನ ಮನೆಯಲ್ಲಿದ್ದಳು.

ಮನೆಯಲ್ಲಿ ಸ್ವಿಚ್ ಬದಲಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶವಾಗಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದಳು. ತಕ್ಷಣ ಆಕೆಯನ್ನು ಧಾರವಾಡದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.

ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.