ಹುಬ್ಬಳ್ಳಿ: ರಾಮನಗರದ ಸರ್ಕಾರಿ ಹೆಣ್ಣು ಮಕ್ಕಳ ಹರಿಜನ ಪ್ರಾಥಮಿಕ ಶಾಲೆಯನ್ನು ಗಾಂಧಿವಾಡ ಕೋ ಅಪ್ ರೇಟಿವ್ ಸೊಸೈಟಿ ಅವರು ಮುಚ್ಚಿಸಲು ಮುಂದಾಗಿದ್ದು, ಶಾಲೆಯ ಉಳಿವಿಗಾಗಿ ಕಾನೂನು ಹೊರಾಟ ಮಾಡುತ್ತೆವೆ ಎಂದು ಇಲ್ಲಿನ ಸ್ಥಳೀಯರು ಚಂದ್ರಶೇಖರ ಯಾದವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿ ಅವರು ಶಾಲೆಯ ಮಕ್ಕಳನ್ನು ಮತ್ತು ಪೀಠೋಪಕರಣಗಳನ್ನು ಹೊರ ಹಾಕಿದ್ದಾರೆ. ಶಾಲಾ ಆಡಳಿತದೊಂದಿಗೆ ಸೇರಿಕೊಂಡು ಕೆಲವರು ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೊಂದು ಸರ್ಕಾರಿ ಅನುದಾನಿತ ಶಾಲೆಯಾಗಿದ್ದರೂ ಕೂಡ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿ ಹೆಸರಿನಲ್ಲಿ ನಕಲಿ ಸದಸ್ಯತ್ವ ಮಾಡಿಕೊಂಡಿದ್ದಾರೆ. ನಾವು ಶಾಲೆ ಬೇಕೆಂದು ದಾಖಲೆ ತೆಗೆದುಕೊಂಡು ಕಾನೂನು ಮೂಲಕ ಹೋರಾಡಿ ಪಡೆಯುತ್ತೇವೆ ಎಂದರು.