ಹುಬ್ಬಳ್ಳಿ: ಬಸ್‌ನಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಯಾತ್ರೆ ನಡೆಯಲಿದೆ. ಮಹದಾಯಿ ವಿಚಾರದಲ್ಲಿ ಜನವರಿ 2 ರಂದು ಹುಬ್ಬಳ್ಳಿಯಲ್ಲಿ ಹೋರಾಟ ಸಮಾವೇಶ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯವರ ಬಸ್ ಯಾತ್ರೆಗೆ ಕಂಡೀಷನ್ ಹಾಕಲಾಗಿದೆ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರೂ ಕಂಡೀಷನ್ ಹಾಕಿಲ್ಲಾ, ಪಕ್ಷದ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.
ಪ್ರತಿ ವಿಚಾರದಲ್ಲೂ ಸಿದ್ದರಾಮಯ್ಯ, ಹರಿಪ್ರಸಾದ್ ಸೇರಿದಂತೆ ಕಾರ್ಯಾಧ್ಯಕ್ಷರ ಜತೆಗೆ ಚರ್ಚಿಸುತ್ತಿದ್ದೇನೆ. ಈ ಬಾರಿ ಗೆಲ್ಲುವವರಿಗೆ ಪಕ್ಷದಿಂದ ಟಿಕೆಟ್ ಕೊಡಲಾಗುತ್ತಿದೆ. ಕಷ್ಟ ಕಾಲದಲ್ಲಿ ನಮ್ಮೊಂದಿಗೆ ಇದ್ದವರಿಗೆ ಮಾತ್ರ ಟಿಕೆಟ್ ಕೊಡುತ್ತೇವೆ ಎಂದು ತಿಳಿಸಿದರು.
ಭಯೋತ್ಪಾದನೆ ವಿರೋಧಿಸುವ ಕಾಂಗ್ರೆಸ್: ಸಿದ್ದರಾಮಯ್ಯ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದಾರೆ ಎಂಬ ವಿಚಾರ ಕುರಿತಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ್ ಜತೆ ಇಂದು ಆ ಎಲ್ಲ ವಿಷಯಗಳ ಕುರಿತು ಚರ್ಚೆ ಮಾಡ್ತಿವಿ. ಕುಕ್ಕರ್ ಬ್ಲಾಸ್ಟ್ ವಿಚಾರದಲ್ಲಿ ನನ್ನ ಬಗ್ಗೆ ಯಾರು ಬೇಕಾದ್ರೂ, ಏನಾದ್ರೂ ಅಪಪ್ರಚಾರ ಮಾಡಲಿ, ನಮ್ಮದು ಕಾಂಗ್ರೆಸ್ ಪಕ್ಷ, ಭಯೋತ್ಪಾದನೆ ವಿರೋಧಿಸುತ್ತ ಬಂದಿದೆ. ಅಧಿಕಾರದಲ್ಲಿ ಇದ್ದಾಗೆಲ್ಲಾ ದೇಶದಲ್ಲಿ ಭಯೋತ್ಪಾದನೆ ದಮನ ಮಾಡಿದ್ದೇವೆ. ಮಂಗಳೂರು ಭಯೋತ್ಪಾದನೆ ದಾಳಿಯನ್ನು ಖಂಡಿಸಿದ್ದೇವೆ ಎಂದರು.
ಭ್ರಷ್ಟಾಚಾರ ಮುಚ್ಚಿಕೊಳ್ಳಲು ಕುಕ್ಕರ್ ಪ್ರಕರಣ: ಶಂಕಿತ ಉಗ್ರ ಶಾರಿಕ್ಗೆ ಪ್ರಜ್ಞೆ ಬರೋವರೆಗೆ ಏನೂ ಹೇಳಲಿಕ್ಕೆ ಆಗೊಲ್ಲಾ ಅಂತಾ ಪೊಲೀಸ್ ಕಮೀಷನರ್ ಹೇಳಿದ್ರು. ಮಂಗಳೂರು ಪೊಲೀಸರು ಅದರ ಹಿನ್ನೆಲೆ ತಿಳ್ಕೊಬೇಕು ಅಂತಾ ಮೊದಲು ಹೇಳಿಕೆ ಕೊಟ್ರು. ‘ಆದರೆ ಡಿಜಿಪಿ ಈ ಘಟನೆಗೆ ಭಯೋತ್ಪಾದನೆಯ ಬಣ್ಣ ಕೊಟ್ರು. ಬಿಜೆಪಿಯ ಭ್ರಷ್ಟಾಚಾರ, ಮತಗಳ್ಳತನ, ಬೋಗಸ್ ವೋಟರ್ ಐಡಿ ಪ್ರಕರಣ ಮುಚ್ಚುವ ಯತ್ನವಿದು ಎಂದು ಡಿಕೆಶಿ ಆರೋಪಿಸಿದರು.
ಬಿಜೆಪಿಯವರು ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲಿಕ್ಕೆ ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ಮುಂದೆ ತಂದಿದ್ದಾರೆ. ಗೃಹ ಸಚಿವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಡಿಕೆಶಿ ಟಾಂಗ್ ಕೊಟ್ಟರು.
ಅಶೋಕ್ಗೆ ಸವಾಲ್: ಕಂದಾಯ ಸಚಿವ ಆರ್ ಅಶೋಕ್ ನನಗೆ ಅಮಾಯಕನ ಅವಾರ್ಡ್ ಕೊಡುವುದಾಗಿ ಹೇಳಿದ್ದಾರೆ. ಅಮಾಯಕರ ಅವಾರ್ಡ್ ತೆಗೆದುಕೊಳ್ಳಲು ನಾನು ಸಿದ್ಧನಿದ್ದೇನೆ. ಅಶೋಕ್ ಡೇಟ್, ಟೈಮ್ ಫಿಕ್ಸ್ ಮಾಡಲಿ ಎಂದು ಸವಾಲ್ ಹಾಕಿದರು.
ಇದನ್ನೂಓದಿ:ಡಿ ಕೆ ಶವಕುಮಾರ್‌ಗೆ ನೊಬೆಲ್ ಪ್ರಶಸ್ತಿ ಕೊಡ್ಬೇಕು: ಸಚಿವ ಆರ್ ಅಶೋಕ್ ವ್ಯಂಗ್ಯ