ETV Bharat / state

3 ಕೋಟಿ ರೂ.ವೆಚ್ಚದ ಧ್ವಜ ತಯಾರಿಸಲು ಚಿಂತನೆ: ವಿನಯ್ ಕುಮಾರ್ ಸಕ್ಸೆನಾ - Vinay Kumar Saxena press conference at Dharwad

ಪ್ರಧಾನಿ ನರೇಂದ್ರ ಮೋದಿ ಅವರ ಆದೇಶ ಹಾಗೂ ನಿರ್ದೇಶನದ ಮೇರೆಗೆ ಈ ಬಾರಿ 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 3 ಕೋಟಿ ರೂ. ವೆಚ್ಚದ ಪ್ಲ್ಯಾಗ್ ತಯಾರಿಸುವದರ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ವಿನಯ್ ಕುಮಾರ್ ಸಕ್ಸೆನಾ ತಿಳಿಸಿದರು.

Vinay Kumar Saxena  press conference
ವಿನಯ್ ಕುಮಾರ್ ಸಕ್ಸೆನಾ ಸುದ್ದಿಗೋಷ್ಠಿ
author img

By

Published : Apr 6, 2021, 7:44 AM IST

ಹುಬ್ಬಳ್ಳಿ: 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 3 ಕೋಟಿ ರೂ. ವೆಚ್ಚ ಖಾದಿ ಧ್ವಜ ಖರೀದಿ ಹಾಗೂ ಖಾದಿ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ಬೆಳೆಸಲು ಹುಬ್ಬಳ್ಳಿ-ಧಾರವಾಡದಲ್ಲಿನ ಖಾದಿ ಉದ್ಯೋಗ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿರುವುದಾಗಿ ರಾಷ್ಟ್ರೀಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೆನಾ ಹೇಳಿದರು.

ವಿನಯ್ ಕುಮಾರ್ ಸಕ್ಸೆನಾ ಸುದ್ದಿಗೋಷ್ಠಿ

ನಗರದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆದೇಶ ಹಾಗೂ ನಿರ್ದೇಶನದ ಮೇರೆಗೆ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 3 ಕೋಟಿ ರೂ. ವೆಚ್ಚದ ಧ್ವಜ ತಯಾರಿಸುವದರ ಬಗ್ಗೆ ಚಿಂತನೆ ನಡೆಸಲಾಗಿದೆ. ಕೊರೊನಾ ಮಹಾಮಾರಿಯಿಂದ ಅದೆಷ್ಟೋ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ನಂಬಿ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲು ಸಂಸ್ಥೆ ಸನ್ನದ್ಧವಾಗಿದೆ. ಇನ್ನೂ ಹೆಚ್ಚು ಹೆಚ್ಚು ಖಾದಿ ಉತ್ಪಾದನೆ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಖಾದಿ ಬಳಕೆಯಲ್ಲಿ ಬಹಳಷ್ಟು ಅಂದರೆ ಶೇ. 50ರಷ್ಟು ಹೆಚ್ಚಳವಾಗಿದೆ. ಅದರ ಜೊತೆಗೆ ಕೇಂದ್ರ ಸರ್ಕಾರ ಅದ್ದೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಮಾಡುವುದರ ಬಗ್ಗೆ ತಿಳಿಸಿರುವುದರಿಂದ ರಾಷ್ಟ್ರೀಯ ಬಾವುಟವನ್ನು ನಿರ್ಮಾಣ ಮಾಡುವುದರ ಬಗ್ಗೆ ಎಲ್ಲ ಖಾದಿ ಜಿಲ್ಲೆ ಗ್ರಾಮೋದ್ಯೋಗ ಕೇಂದ್ರ ಅಧ್ಯಕ್ಷರ ಜೊತೆ ಚರ್ಚೆ‌‌ ಮಾಡಿದ್ದೇವೆ. ಅದರ ಜೊತೆಗೆ ಜೇನು ಸಾಕಣೆ ಬಗ್ಗೆ ತರಬೇತಿ ಹಾಗೂ ಮಹಿಳೆಯರಿಗೆ ಸ್ವಯಂ ಉದ್ಯೋಗ ಮಾಡಲು ಬಡ್ಡಿ ರಹಿತ ಸಾಲ ನೀಡುತ್ತಿದ್ದೇೆವೆ ಎಂದು ತಿಳಿಸಿದರು.

ಇದನ್ನೂ ಓದಿ: ತ್ರಿವರ್ಣ ಧ್ವಜಕ್ಕೆ ಇಂದಿಗೆ 100 ವರ್ಷ.. ಹೀಗಿತ್ತು ಬಾವುಟದ ತಯಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.