ETV Bharat / state

ಸಿದ್ಧರಾಮಯ್ಯನವರೇ ನಿಮಗೆ ಎರಡನೇ ಬಾರಿ ಸಿಎಂ ಮಾಡಲ್ಲ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ - Union Minister Pralhad Joshi

ಮೋದಿ ಸರ್ಕಾರ ಬಂದ ಮೇಲೆ ದೇಶದಲ್ಲಿ ಕಣ್ಣಿಗೆ ಕಾಣುವ ಅಭಿವೃದ್ಧಿ ಆಗಿದೆ. ಮೋದಿ ಅವರ ನಾಯಕತ್ವವನ್ನು ಬಸವರಾಜ್ ಹೊರಟ್ಟಿ ಅವರು ಒಪ್ಪಿದ್ದಾರೆ ಎಂದು ಜೋಶಿ ಹೇಳಿದರು.

union-minister-pralhad-joshi
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
author img

By

Published : May 26, 2022, 8:15 PM IST

ಧಾರವಾಡ: ಸಿದ್ಧರಾಮಯ್ಯ ಅವರೇ ನಿಮಗೆ ಎರಡನೇ ಬಾರಿ ಸಿಎಂ ಮಾಡಲ್ಲ. ನೀವು ಚುನಾವಣೆಯಲ್ಲಿ ಗೆಲ್ಲಲ್ಲ. ನಿಮ್ಮ ಪಕ್ಷದ ಕಚ್ಚಾಟದಲ್ಲೇ ನೀವು ಮುಳುಗಿ ಹೋಗುತ್ತೀರಿ ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ವಾಗ್ದಾಳಿ ನಡೆಸಿದರು.

ಧಾರವಾಡ ಕಲಾಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ರಾಹುಲ್ ಗಾಂಧಿಯ ಮುಂದೆ ಕೈ ಕಟ್ಡಿ ನಿಲ್ಲುತ್ತಿರಿ. ನಾನು ನಿಮಗೆ ಪ್ರಶ್ನೆ ಮಾಡುತ್ತೆನೆ. 58 ವರ್ಷದಲ್ಲಿ ಅಧಿಕಾರದಲ್ಲಿದ್ದೀರಿ. ನೀವು ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್​ ಅವರ ಹೆಸರು ಎಷ್ಟು ಯೋಜನೆಗೆ ಇಟ್ಟಿದ್ದೀರಿ ಎಂಬುದನ್ನ ಹೇಳಿ. ದೆಹಲಿಯೊಂದದರಲ್ಲೇ ಇಂದಿರಾ ಗಾಂಧಿ ನೆಹರೂ, ರಾಜೀವ್ ಗಾಂಧಿ ಹೆಸರಿನಲ್ಲಿ 298 ಯೋಜನೆಗಳಿಗೆ ಹೆಸರು ಇಟ್ಟಿದ್ದಿರಿ ಎಂದು ಟೀಕಿಸಿದರು.

ಮೋದಿ ಸರ್ಕಾರ ಬಂದ ಮೇಲೆ ದೇಶದಲ್ಲಿ ಕಣ್ಣಿಗೆ ಕಾಣುವ ಅಭಿವೃದ್ಧಿ ಆಗಿದೆ. ಮೋದಿ ಅವರ ನಾಯಕತ್ವವನ್ನು ಬಸವರಾಜ್ ಹೊರಟ್ಟಿ ಅವರು ಒಪ್ಪಿದ್ದಾರೆ. ಹೊಸ ಶಿಕ್ಷಣ ನೀತಿಯಲ್ಲಿ ಹೊಸ ಕೌಶಲ್ಯದಲ್ಲಿ ವಿದ್ಯಾರ್ಥಿಗಳಿಗೆ ತಯಾರಿ ಮಾಡಬೇಕು.‌ ಈಗ ಸರ್ವ ಸಮ್ಮತ ಇರುವ ಪಾಲಿಸಿ ಅದು. ನಾವು ಎನ್​ಇಪಿ ತರುವಲ್ಲಿ ಆಂದೋಲನದ ರೀತಿಯಲ್ಲಿ ಕೆಲಸ ಮಾಡುತಿದ್ದೇವೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಧಿಕೃತವಾಗಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಹಲವಾರು ಚುನಾವಣೆಯಲ್ಲಿ ಬಿಜೆಪಿ ಹಾಗೂ ಹೊರಟ್ಟಿ ವಿರುದ್ಧ ಚುನಾವಣೆ ನಡೆಯುತ್ತಿತ್ತು. ಈ ಬಾರಿ ಹೊರಟ್ಟಿ ಅವರು ಬಿಜೆಪಿಗೆ ಸೇರಿರೊದರಿಂದ ಹೆಚ್ಚಿನ ಶಕ್ತಿ ಪಡೆದಿದೆ. ಎಂಟನೇ ಬಾರಿ ಗೆಲ್ಲುವ ಮೂಲ ಹೊಸ ದಾಖಲೆ ನಿರ್ಮಾಣ ಮಾಡುತ್ತಾರೆ ಎಂದರು.

ಇಡೀ ದೇಶದಲ್ಲಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಬಿಜೆಪಿ ಅತೀ ಹೆಚ್ಚು ರಾಜ್ಯಗಳಲ್ಲಿ ಸಿಎಂ, ಶಾಸಕರನ್ನು ಹೊಂದಿದ್ದು, ಬಿಜೆಪಿ ಯಾವುದೇ ಕಪ್ಪುಚುಕ್ಕಿ ಇಲ್ಲದೇ ಆಡಳಿತ ಮಾಡುತ್ತಿರೊದು ಪ್ರಧಾನಿ ನರೇಂದ್ರ‌ ಮೋದಿ ಅವರು. 2016 ರಲ್ಲಿ ಬಿಜೆಪಿ ಗೆ ಬನ್ನಿ ಎಂದು ಕರೆಯಲಾಗಿತ್ತು ಆಗ ಹೊರಟ್ಟಿ ಅವರು ಬಂದಿರಲಿಲ್ಲ ಈಗ ಬಿಜೆಪಿ ಪಕ್ಷಕ್ಕೆ‌ ಬಂದಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಮಾತನಾಡಿ, 1975-76ರ ಹೋರಾಟ ಮೂಲಕ ಮೇಲೆ ಬಂದಿದ್ದೇನೆ. ಶಿಕ್ಷಕರಿಗೆ ಆದ ಅನ್ಯಾಯ ಬಗ್ಗೆ ಹೋರಾಟ ಮುಂದುವರೆಯಿತು. ಶಿಕ್ಷಕರನ್ನೇ ಎಲೆಕ್ಷನ್​ಗೆ ನಿಲ್ಲಲು ತೀರ್ಮಾನ ಮಾಡಲಾಯಿತು. ಸೇವೆಯಲ್ಲೇ ಇರುವಾಗಲೇ ಎಲೆಕ್ಷನ್​ಗೆ ನಿಂತೆವು ಎಂದರು.

ನಂಬಿಕೆ ವಿಶ್ವಾಸ ಇಟ್ಟಂತ ಶಿಕ್ಣಕರಿಂದ ಒಂದು ರೂಪಾಯಿ ತೆಗೆದುಕೊಂಡಿಲ್ಲ ನಾನು ಕೇವಲ ಈ ಕ್ಷೇತ್ರದ ಪ್ರತಿನಿಧಿ ಅಲ್ಲ. ಇಡೀ ರಾಜ್ಯದ ಶಿಕ್ಷಕರ ಪ್ರತಿನಿಧಿ ಆಗಿದ್ದೇನೆ. ಶಿಕ್ಷಕರು ನಮ್ಮ ಪರವಾಗಿ ಸರ್ವಸ್ವ ತ್ಯಾಗ ಮಾಡಿ ಕೆಲಸ ಮಾಡುತ್ತೇನೆ. ನಾನು ಎಂಟನೇ ಬಾರಿ ಎಲೆಕ್ಷನ್​ಗೆ ನಿಲ್ಲುತ್ತಿದ್ದೇನೆ. ಎಲ್ಲ ರೀತಿಯಿಂದ ಶಿಕ್ಷಕರ ಸಮಸ್ಯೆ ಸ್ಪಂದನೆ ಮಾಡುತ್ತೇನೆ. ಎಲ್ಲ ಸಂಘಟನೆಗಳು ನನಗೆ ಬೆಂಬಲ ಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ: ಡಿಕೆಶಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿರುವುದಕ್ಕೆ ಹೆದರುವ ಅಗತ್ಯವಿಲ್ಲ : ಡಿ ಕೆ ಸುರೇಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.