ಹುಬ್ಬಳ್ಳಿ: ನೇಪಾಳ ಪ್ರವಾಸದಲ್ಲಿದ್ದ ಹುಬ್ಬಳ್ಳಿಯ ಮಹಿಳೆಯೊಬ್ಬರು ಮರದ ಕೊಂಬೆ ಬಿದ್ದು ಸಾವಿಗೀಡಾದ ಘಟನೆ ನೇಪಾಳದ ಕಟ್ಮುಂಡವಿನಲ್ಲಿ ನಡೆದಿದೆ.
ಹುಬ್ಬಳ್ಳಿಯ ರಾಧಾಕೃಷ್ಣಗಲ್ಲಿ ನಿವಾಸಿ ನಂದಾ ಮಲ್ಲಿಕಾರ್ಜುನ ಡಂಬಳ (68) ಮೃತ ಮಹಿಳೆ. ಕಳೆದ ತಿಂಗಳು ಬಳ್ಳಾರಿ ಜಿಲ್ಲಾ ಶಿರಗುಪ್ಪಾ ವೆಂಕಟೇಶ್ವರ ಟ್ರಾವೆಲ್ಸ್ ಮುಖಾಂತರ 25 ಜನರ ತಂಡದೊಂದಿಗೆ ಪ್ರವಾಸ ಕೈಗೊಂಡಿದ್ದರು.
ಪ್ರವಾಸ 1 ತಿಂಗಳದ್ದಾಗಿತ್ತು. ಅದರಲ್ಲಿ 10 ದಿನ ಪೂರೈಸಿದ್ದು, ಇನ್ನೂ 20 ದಿನಗಳ ಪ್ರವಾಸವಿತ್ತು. ಆದರೆ, ಕಟ್ಮಂಡುವಿನ ಇಸ್ಕಾನ್ ದೇವಸ್ಥಾನದಲ್ಲಿ ಏಕಾಏಕಿ ಮರದ ಕೊಂಬೆ ಬಿದ್ದು ಎರಡು ದಿನಗಳ ಹಿಂದೆ ಸಾವಿಗೀಡಾಗಿದ್ದಾರೆ. ಇವರ ಮೃತದೇಹ ಎರಡು ದಿನಗಳ ಬಳಿಕ ನಗರಕ್ಕೆ ಆಗಮಿಸಲಿದೆ ಎನ್ನಲಾಗಿದೆ.