ಹುಬ್ಬಳ್ಳಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೊಸ ಪಕ್ಷದ ಕುರಿತು ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಬಿಜೆಪಿ ಸಹ ಅವರನ್ನು ಕೈ ಬಿಡುವುದಿಲ್ಲ, ಪಕ್ಷದಲ್ಲಿಯೇ ಉಳಿಸಿಕೊಳ್ಳುವ ವಿಶ್ವಾಸವಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮಲು ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಖಂಡರಾದ ಜನಾರ್ದನ ರೆಡ್ಡಿ ಸಾರ್ವಜನಿಕರ ಬದುಕಲ್ಲಿ ಬರಬೇಕು ಎಂದು ಅಷ್ಟೇ ಹೇಳಿದ್ದಾರೆಯೇ ಹೊರತು ಪಕ್ಷವನ್ನು ಮೀರಿ, ಪಕ್ಷಕ್ಕೆ ತೊಂದರೆ ಮಾಡುವ ಕೆಲಸ ಎಂದು ಮಾಡಿಲ್ಲ. ಈ ಕುರಿತು ನಾನು ಸಹ ಪಕ್ಷದ ಹಿರಿಯರ ಜೊತೆ ಚರ್ಚೆಮಾಡಿದ್ದೇನೆ. ಮುಖ್ಯಮಂತ್ರಿ ಅವರು ಸಹ ಅವರೊಂದಿಗೆ ಮಾತನಾಡಿದ್ದಾರೆ. ಜನಾರ್ದನ ರೆಡ್ಡಿ ಅವರೊಂದಿಗೆ ಯಾವುತ್ತು ಸ್ನೇಹ ಕಳೆದುಕೊಳ್ಳುಲು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದಾರೆ.
ನನಗೆ ಪಕ್ಷ ರಾಜಕೀಯವಾಗಿ ಸ್ಥಾನ, ಮಾನ ನೀಡಿದೆ. ಸ್ನೇಹ ಹಾಗೂ ಪಕ್ಷ ಬಿಡಲಾರದ ಸಂದರ್ಭದಲ್ಲಿ ಪಕ್ಷದ ನಾಯಕರ ಜೊತೆ ಮಾತನಾಡಿದ್ದೇನೆ. ಅವರೇ ಪರಿಹಾರ ಒದಗಿಸುತ್ತಾರೆ ಎಂದು ಹೇಳಿದರು. ಮುಂದೆ, ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಸೂದೆ ಕುರಿತು ಸದಸದಲ್ಲಿ ಚರ್ಚೆ ನಡೆಸಲಿದೆ. ರಪಾಂಟ ಮಾಡುವುದು ಬೇಡ, ಎಲ್ಲರೂ ಒಮ್ಮತದಿಂದ ಮಸೂದೆ ಪಾಸ್ ಮಾಡಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಮುಂದುವರೆದು, ಉತ್ತರ ಕರ್ನಾಟಕದ ಅನೇಕ ವಿಷಯಗಳ ಬಗ್ಗೆ ಸದಸನದಲ್ಲಿ ಚರ್ಚೆ ನಡೆಸಬೇಕಿತ್ತು. ಆದರೆ ಸಣ್ಣಪುಟ್ಟ ವಿಚಾರಕ್ಕೆ ವಿರೋಧ ಪಕ್ಷದವರು ಸದನವನ್ನೇ ನಡೆಯದಂತೆ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಲಾ ಕಾಲೇಜು ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಬಸ್ ಸೌಲಭ್ಯ ಒದಗಿಸುವ ಕಾರ್ಯ ನಾನು ಮಾಡುತ್ತೇನೆ. ಯಾವ ಹಳ್ಳಿಗಳಿಗೆ ರಸ್ತೆ ಹಾಗೂ ಸಾರಿಗೆ ಸಂಪರ್ಕವಿಲ್ಲ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುನ್ನಡೆದರು.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರ ಬಸ್ ಅಪಘಾತ ಹಿನ್ನೆಲೆ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಹಾಲಪ್ಪ