ಧಾರವಾಡ: ಅಯೋಧ್ಯೆಯಲ್ಲಿ ನಾಳೆ ರಾಮಮಂದಿರ ಶಿಲಾನ್ಯಾಸ ಹಿನ್ನೆಲೆಯಲ್ಲಿ ಮರಳಿನಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗಿದೆ.
ಕೆಲಗೇರಿ ಗಾಯತ್ರಿಪುರ ಕಲಾವಿದ ಮಂಜುನಾಥ ಹಿರೇಮಠ ಅವರು ಜನಜಾಗೃತಿ ಸಂಘ ಹಾಗೂ ದೊಡ್ಡ ನಾಯಕನಕೊಪ್ಪದ ನಿವಾಸಿಗಳ ಸಹಯೋಗದಲ್ಲಿ ದೊಡ್ಡ ನಾಯಕನ ಕೊಪ್ಪದ ಬಸ್ ನಿಲ್ದಾಣದ ಹತ್ತಿರ ರಾಮಮಂದಿರ ನಿರ್ಮಾಣ ಮಾಡಲಾಗಿದೆ.
ಸುಮಾರು ಆರು ಅಡಿ ಎತ್ತರ ಹತ್ತು ಅಡಿ ಅಗಲ ಹಾಗೂ ಒಂದು ಟಿಪ್ಪರ್ ಮರಳಿನಲ್ಲಿ ಬಳಸಿ ರಾಮಮಂದಿರ ಕಲಾಕೃತಿ ರಚಿಸಲಾಗಿದೆ. ಬೆಳಿಗ್ಗೆ 5.30 ರಿಂದ ಪ್ರಾರಂಬಿಸಿ 10 ಗಂಟೆ ಸುಮಾರಿಗೆ ರಾಮಮಮಂದಿರ ಕಲಾಕೃತಿ ರಚನೆ ಕಾರ್ಯ ಮುಗಿಸಲಾಗಿದೆ. ದೊಡ್ಡ ನಾಯಕನ ಕೊಪ್ಪದ ನಿವಾಸಿಗಳು ಆಗಮಿಸಿ ರಚಿಸಿದ ಕಲಾಕೃತಿ ಮಂದಿರಕ್ಕೆ ಪೂಜೆ ಸಲ್ಲಿಸಿದರು.
ಒಟ್ಟಿನಲ್ಲಿ ಧಾರವಾಡದ ದೊಡ್ಡ ನಾಯಕನಕೊಪ್ಪದ ನಿವಾಸಿಗಳು ನಾಳೆ ನಡೆಯುವ ಐತಿಹಾಸಿಕ ರಾಮಮಂದಿರದ ಕಲಾಕೃತಿ ರಚಿಸಿ ಅದಕ್ಕೆ ಪೂಜೆ ಸಲ್ಲಿಸಿ, ರಾಮನಾಮವನ್ನು ಜಪಿಸಿದ್ದಾರೆ.