ETV Bharat / state

ಸಮಯಪ್ರಜ್ಞೆ ತೋರಿ ಅವಘಡ ತಪ್ಪಿಸಿದ ಮೂವರು ರೈಲ್ವೇ ಸಿಬ್ಬಂದಿಗೆ ಸನ್ಮಾನ - ರೈಲ್ವೆ ಸಿಬ್ಬಂದಿಗಳಿಗೆ ಸನ್ಮಾನ

ಮೂರು ರೈಲ್ವೆ ಸಿಬ್ಬಂದಿಗೆ ರೈಲ್ ಸೌಧದ ಕಛೇರಿಯಲ್ಲಿ ನಡೆದ ಸುರಕ್ಷತಾ ಸಭೆಯಲ್ಲಿ ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರು ಸನ್ಮಾನಿಸಿದರು.

Tribute to Railway Staff
ರೈಲ್ವೆ ಸಿಬ್ಬಂದಿಗಳಿಗೆ ಸನ್ಮಾನ
author img

By

Published : Apr 5, 2023, 9:36 PM IST

ಹುಬ್ಬಳ್ಳಿ : ಕರ್ತವ್ಯದಲ್ಲಿ ಸಮಯ ಪ್ರಜ್ಞೆ ತೋರಿದ ರೈಲ್ವೆ ಉದ್ಯೋಗಿಗಳಿಗೆ ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರಿಂದು ರೈಲ್ ಸೌಧದ ಕಛೇರಿಯಲ್ಲಿ ನಡೆದ ಸುರಕ್ಷತಾ ಸಭೆಯಲ್ಲಿ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು. ದಾವಣಗೆರೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿರುವ ಅನಿಲ್ ಕುಮಾರ್ ಸಿ.ಎಂ ಅವರು ಫೆಬ್ರವರಿ 12, 2023 ರಂದು ಕರ್ತವ್ಯದಲ್ಲಿದ್ದಾಗ ಗೂಡ್ಸ್ ರೈಲಿಗೆ ಸಿಗ್ನಲ್ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಬ್ರೇಕ್ ಬೈಂಡಿಂಗ್ ವೀಕ್ಷಿಸಿದ್ದಾರೆ. ತ್ವರಿತವಾಗಿ ಮಾಹಿತಿ ನೀಡಿದ ಪರಿಣಾಮ ಅಮರಾವತಿ ನಿಲ್ದಾಣದಲ್ಲಿ ರೈಲು ನಿಲ್ಲುವಂತೆ ಮಾಡುವ ಮೂಲಕ ಮುಂದಿನ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರು. ಇದರಿಂದ ಭಾರಿ ಅನಾಹುತ ತಪ್ಪಿತ್ತು.

ಇದನ್ನೂ ಓದಿ : ನೈಋತ್ಯ ರೈಲ್ವೆ ಸಿಬ್ಬಂದಿಯಿಂದ ಬೆಂಗಳೂರು ಮೈಸೂರು ಮಾರ್ಗದಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ..

ಕ್ಯಾಸಲ್ ರಾಕ್‌ನಲ್ಲಿ ಟೆಕ್ನಿಷಿಯನ್ ಆಗಿ ವಿಕಾಸ್ ಕುಮಾರ್ ಬರೋಡಿಯಾ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಎಂದಿನಂತೆ ಗೂಡ್ಸ್ ರೈಲು ತಪಾಸಣೆ ರೋಲಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ರೈಲಿನ ವ್ಯಾಗನ್‌ನಲ್ಲಿ ಕರ್ಕಶ ಶಬ್ದ ಕೇಳಿದ ತಕ್ಷಣ ರೈಲು ನಿಲ್ಲಿಸಲು ಸೂಚಿಸಿದ್ದಾರೆ. ಇದರ ಪರಿಣಾಮ ತಾಂತ್ರಿಕ ತಂಡವು ಅಗತ್ಯ ಪರೀಕ್ಷೆ ನಡೆಸಿ ಮುಂದಾಗುವ ಸಂಭವನೀಯ ಅವಘಡ ತಪ್ಪಿಸಿದ್ದರು.

ಇದನ್ನೂ ಓದಿ : ವಿಶ್ವದ ಅತಿ ಉದ್ದದ ಹುಬ್ಬಳ್ಳಿ ರೈಲ್ವೆ ಪ್ಲಾಟ್‌ಫಾರ್ಮ್‌ ವೀಕ್ಷಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್

ಮತ್ತೊಬ್ಬ ರೈಲ್ವೆ ಸಿಬ್ಬಂದಿ ಕೀ ಮ್ಯಾನ್ ವಾಸುದೇವ ನಾಯ್ಕ್ ಅವರು ಫೆಬ್ರವರಿ 21, 2023 ರಂದು, ರೈಲ್ ಇಂಡಿಯಾ ಟೆಕ್ನಿಕಲ್ & ಎಕನಾಮಿಕ್ ಸರ್ವಿಸ್ (ಆರ್​ಐಟಿಇಎಸ್) ಬಾಗೇಶಪುರ ಮತ್ತು ಹಬ್ಬನಘಟ್ಟ ನಡುವಿನ ಫ್ಲ್ಯಾಷ್ ಬಟ್ ವೆಲ್ಡ್ ಜಾಯಿಂಟ್‌ಗಳಲ್ಲಿ ಓವರ್ ಹೆಡ್ ಇಕ್ಯೂಪ್‌ಮೆಂಟ್ (ಓಹೆಚ್) ಸ್ಟ್ರಕ್ಚರ್ ಬಾಂಡ್‌ಗಾಗಿ ರಂಧ್ರಗಳನ್ನು ಕೊರೆದಿದ್ದರು. ಇದನ್ನು ಗಮನಿಸಿದ ವಾಸುದೇವ ನಾಯ್ಕ್ ಅವರು ಕೂಡಲೇ ಸರಿಪಡಿಸಲು ಹಾಸನದ ರೈಲ್ವೆ ಹಿರಿಯ ವಿಭಾಗೀಯ ಇಂಜಿನಿಯರ್‌ಗೆ ವರದಿ ಸಲ್ಲಿಸಿದ್ದರು.

ಇಂತಹ ತುರ್ತು ಸಂದರ್ಭಗಳಲ್ಲಿ ಸುರಕ್ಷತೆಯ ಸಮಯ ಪ್ರಜ್ಞೆ ತೋರಿದ ಮೂವರು ಉದ್ಯೋಗಿಗಳಿಗೆ ಇಂದು ಪ್ರಧಾನ ವ್ಯವಸ್ಥಾಪಕರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಅಲೋಕ್ ಕುಮಾರ್ ಸಹ ಉಪಸ್ಥಿತರಿದ್ದರು ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಮುಂತಾದ ಅಧಿಕಾರಿಗಳು ಉಪಸ್ಥಿತರಿದರು.

ಇದನ್ನೂ ಓದಿ : ಮೆಮು ವಿಶೇಷ ರೈಲುಗಳ ಸಂಚಾರ ರದ್ದು: ನೈಋತ್ಯ ರೈಲ್ವೆ ಇಲಾಖೆ ಪ್ರಕಟಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.