ETV Bharat / state

RSS ವ್ಯಕ್ತಿ ದೇಶಕ್ಕಾಗಿ ಪ್ರತಿ ದಿನ ಚಿಂತನೆ ಮಾಡ್ತಾನೆ, ಮದುವೆಯಾಗದೆ ಚಾಪೆಯಲ್ಲಿ ಮಲಗ್ತಾನೆ.. ಅಡ್ಡಂಡ ಕಾರ್ಯಪ್ಪ - ಪ್ರಗತಿಪರರ ವಿರುದ್ಧ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಾಗ್ದಾಳಿ

ಗಿರೀಶ್​ ಕಾರ್ನಾಡ್ ಸಹ ರಾಜಕೀಯ ಮಾಡಿದ್ದಾರೆ. ಅರ್ಬಲ್‌ ನಕ್ಸಲ್ ಅಂತಾ ಬೋರ್ಡ್ ಹಾಕಿಕೊಂಡು ಕುಳಿತ್ತಿದ್ದರು. ಸಿದ್ದರಾಮಯ್ಯ ಸರ್ಕಾರವಿದ್ದಾಗ ಸಾಹಿತಿಗಳು ಅವರ ಮನೆ ಬಾಗಿಲಿನಲ್ಲೇ ಇದ್ದರು. ರಾಜಕೀಯ ಅಂದರೆ ಹೊಲಸು ಅಲ್ಲ. ರಾಜಕೀಯವೂ ಬೇಕು. ಸಂವಿಧಾನದ ಅಡಿಯಲ್ಲಿಯೇ ರಾಜಕೀಯ ನಡೆಯುತ್ತಿದೆ. ರಾಜಕಾರಣ, ಧರ್ಮ, ರಂಗಭೂಮಿ ಬಿಟ್ಟು ಇರುವುದಿಲ್ಲ..

addanda-cariappa
ಅಡ್ಡಂಡ ಕಾರ್ಯಪ್ಪ
author img

By

Published : Mar 30, 2022, 3:25 PM IST

Updated : Mar 30, 2022, 4:48 PM IST

ಧಾರವಾಡ : ಪ್ರಗತಿಪರರ ವಿರುದ್ಧ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಾಗ್ದಾಳಿ ನಡೆಸಿದ್ದಾರೆ. ಧಾರವಾಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಆರ್‌ಎಸ್‌ಎಸ್ ವ್ಯಕ್ತಿಯನ್ನು ಗೌರವಿಸುತ್ತೇನೆ. ಆದರೆ, ಮಹಾ ಬುದ್ಧಿಜೀವಿಯಾಗಿ ಮಹಾ ಕಳ್ಳನಾದವರಿಗೆ ಗೌರವ ಕೊಡಬೇಕಾ?. ಆರ್‌ಎಸ್‌ಎಸ್ ವ್ಯಕ್ತಿ ದೇಶಕ್ಕಾಗಿ ಚಿಂತನೆ ಮಾಡುತ್ತಾನೆ. ಮದುವೆಯಾಗದೆ, ಚಾಪೆಯಲ್ಲಿ ಮಲಗುತ್ತಾನೆ. ಪ್ರತಿದಿನ ದೇಶಕ್ಕಾಗಿ ಚಿಂತನೆ ಮಾಡುತ್ತಾನೆ. ಅವನನ್ನು ನಾನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ ಎಂದರು.

ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿರುವುದು..

ಆದರೆ, ನಾನು ಮಹಾ ಪ್ರಗತಿಪರ ಎಂದು ಹೇಳಿಕೊಂಡು ಸರ್ಕಾರದ ಹಣ ಕೊಳ್ಳೆಹೊಡೆದು, ಮಹಾಮೋಸಗಾರನಾಗಿ ಲೋಕಕ್ಕೆಲ್ಲ‌ ಮಹಾ ಬುದ್ದಿಜೀವಿಯಾಗಿ, ಮಹಾಕಳ್ಳನಾಗಿದ್ದರೆ ನಾವು ಅವರಿಗೆ ಗೌರವ ಕೊಡಬೇಕಾ? ಎಂದು ಪ್ರಶ್ನಿಸಿದರು. ರಂಗಭೂಮಿಯಲ್ಲಿ ರಾಜಕಾರಣ ವಿಚಾರಕ್ಕೆ ಮಾತನಾಡಿದ ಅವರು, ಗಿರೀಶ್​ ಕಾರ್ನಾಡ್​ ಸಹ ರಾಜಕಾರಣ ಮಾಡಿದವರೇ. ಸಾಹಿತಿಗಳು ಸಿದ್ದರಾಮಯ್ಯ ಮನೆ ಬಾಗಿಲಿನಲ್ಲಿ ನಿಲ್ಲುತ್ತಿದ್ದರು ಎಂದು ಅಡ್ಡಂಡ ಕಾರ್ಯಪ್ಪ ಆರೋಪಿಸಿದರು.

ರಂಗಭೂಮಿಯಲ್ಲಿ ರಾಜಕಾರಣ ಮೊದಲಿನಿಂದ ಇದೆ. ಈಗ ಬಂದಿದೆ ಎನ್ನುವುದು ಸುಳ್ಳೇ?. ಈಗ ಸರ್ಕಾರದ ಭಾಗ ಅಲ್ಲದವರಿಗೆ ಆಗಿನದು ಅಲ್ಲ ಅನಿಸುತ್ತಿದೆ. ಸರ್ಕಾರದ ಭಾಗ ಆಗಿದ್ದಾಗ ರಾಜಕೀಯವಾಗಿಯೇ ಇದ್ದರು. ಹಿರಿಯ ಸಾಹಿತಿ ಮರುಳಸಿದ್ದಪ್ಪ ಸೇರಿ ಅನೇಕರು ಕಾಂಗ್ರೆಸ್ ಕರಪತ್ರ ಹಂಚಿದ್ದಾರೆ.‌ ಬೇಕಾದಾಗ ಅವರಿಗೆ ರಾಜಕೀಯ. ಬೇಡವಾದಾಗ ವೃದ್ಧನಾರಿ ಪ್ರತಿವ್ರತ ಆಗಿ ಬಿಡುತ್ತಾರೆ. ಎಲ್ಲರೂ ರಾಜಕೀಯ ಮಾಡಿದ್ದಾರೆ ಎಂದು ದೂರಿದರು.

ಗಿರೀಶ್​ ಕಾರ್ನಾಡ್ ಸಹ ರಾಜಕೀಯ ಮಾಡಿದ್ದಾರೆ. ಅರ್ಬನ್‌ ನಕ್ಸಲ್ ಅಂತಾ ಬೋರ್ಡ್ ಹಾಕಿಕೊಂಡು ಕುಳಿತ್ತಿದ್ದರು. ಸಿದ್ದರಾಮಯ್ಯ ಸರ್ಕಾರವಿದ್ದಾಗ ಸಾಹಿತಿಗಳು ಅವರ ಮನೆ ಬಾಗಿಲಿನಲ್ಲೇ ಇದ್ದರು. ರಾಜಕೀಯ ಅಂದರೆ ಹೊಲಸು ಅಲ್ಲ. ರಾಜಕೀಯವೂ ಬೇಕು. ಸಂವಿಧಾನದ ಅಡಿಯಲ್ಲಿಯೇ ರಾಜಕೀಯ ನಡೆಯುತ್ತಿದೆ. ರಾಜಕಾರಣ, ಧರ್ಮ, ರಂಗಭೂಮಿ ಬಿಟ್ಟು ಇರುವುದಿಲ್ಲ ಎಂದರು.

ಪರ್ವ ರಂಗ ಪ್ರಯೋಗಕ್ಕೆ ವಿರೋಧ ಹಿನ್ನೆಲೆ ಪರ್ವ ಓದಿದವರೂ ರಂಗ ಪ್ರಯೋಗಕ್ಕೆ ವಿರೋಧ ಮಾಡಿದ್ದರು. ಭೈರಪ್ಪನವರ ವಿರೋಧದ ಕಾರಣಕ್ಕೆ ಇದಕ್ಕೂ ವಿರೋಧ ಮಾಡಿದ್ದರು. ಭೈರಪ್ಪ ಬಲಪಂಥಕ್ಕೆ ವಾಲಿದವರು ಅಂತಾ ತಿಳಿದಿದ್ದಾರೆ. ಪ್ರಗತಿಪರ ಚಿಂತಕರಲ್ಲಿ ಭೈರಪ್ಪ ನಮ್ಮ ಕಡೆಯವರಲ್ಲ ಅಂತಿದೆ. ಅನೇಕ ಸಾಹಿತಿಗಳ ವರ್ಗ ಇಂದಿಗೂ ಭೈರಪ್ಪ ವಿರೋಧಿಸುತ್ತಿದೆ. ಮೈಸೂರು ದಸರಾಗೂ ಕರೆದಿರಲಿಲ್ಲ. ರಂಗಾಯಣಕ್ಕೂ ಅವರನ್ನು ಇಲ್ಲಿಯವರೆಗೆ ಕರೆದಿರಲಿಲ್ಲ. ನಾನು ಬಂದ ಬಳಿಕವೇ ಕರೆಯಲಾಗಿದೆ. ಕೂಗಳತೆ ದೂರದಲ್ಲಿದ್ದರೂ ಕರೆದಿರಲಿಲ್ಲ. ಭೈರಪ್ಪನವರ ಧೋರಣೆಯಿಂದಾಗಿ ವಿರೋಧ ಮಾಡಿದ್ದಾರೆ ಎಂದು ಹರಿಹಾಯ್ದರು.

ನಾಟಕ ನೋಡಿದ ಬಳಿಕವೇ ಪರ್ವದ ಬಗ್ಗೆ ವಿರೋಧಿಸುವವರಿಗೆ ಗೊತ್ತಾಗಿದೆ. ನೋಡುವ ಮೊದಲೇ ವಿರೋಧ ಮಾಡಿದರೇ ಹೇಗೆ?. ಸರ್ಕಾರ ತನಗೆ ಬೇಕಾದವರನ್ನು ಬೇಕಾದಲ್ಲಿ ನೇಮಕ ಮಾಡುತ್ತದೆ. ಎಲ್ಲ ಸರ್ಕಾರ ಇದನ್ನೇ ಮಾಡಿದೆ. ಯಾವುದೇ ನಿಗಮ, ಅಕಾಡೆಮಿ, ರಂಗಾಯಣಕ್ಕೆ ಹಾಗೆಯೇ ನೇಮಕ ಆಗಿದೆ. ಹಾಗೆಯೇ ನಾವೂ ಬಂದಿದ್ದೇವೆ ಎಂದರು.

ಓದಿ: ಹಿಂದೂ ಯುವಕರು ಮಟನ್ ಸ್ಟಾಲ್ ಇಡಲು ನಾನೇ ಹಣ ನೀಡುತ್ತೇನೆ: ರೇಣುಕಾಚಾರ್ಯ

Last Updated : Mar 30, 2022, 4:48 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.