ETV Bharat / state

ಕೆರೆಯಲ್ಲಿ ಶವ ಪತ್ತೆ ಹಿನ್ನೆಲೆ: ನೀರಿಗಾಗಿ ಪರದಾಡುವ ಸಂದರ್ಭದಲ್ಲೂ ಕೆರೆ ಖಾಲಿ ಮಾಡಿಸಿದ ಗ್ರಾಮಸ್ಥರು - The villagers emptied the lake

ಕೆರೆಯಲ್ಲಿ ಮೃತದೇಹ ಪತ್ತೆಯಾದ ಹಿನ್ನೆಲೆ ನೀರನ್ನು ಖಾಲಿ ಮಾಡುತ್ತಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಉಮಚಗಿ ಎಂಬ ಗ್ರಾಮದಲ್ಲಿ ನಡೆದಿದೆ.

the-villagers-emptied-the-lake-after-finding-a-dead-body-in-the-lake
ಕೆರೆಯಲ್ಲಿ ಶವ ಪತ್ತೆ ಹಿನ್ನೆಲೆ: ನೀರಿಗಾಗಿ ಪರದಾಡುವ ಸಂದರ್ಭದಲ್ಲೂ ಕೆರೆ ಖಾಲಿ ಮಾಡಿಸಿದ ಗ್ರಾಮಸ್ಥರು
author img

By

Published : May 29, 2023, 5:47 PM IST

ಹುಬ್ಬಳ್ಳಿ: ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಕಾರಣ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮಸ್ಥರು ಕೆರೆ ನೀರು ಕುಡಿಯಲು ಜನರು ಹಿಂದೇಟು ಹಾಕಿದ್ದರು. ಹೀಗಾಗಿ ಗ್ರಾಮಸ್ಥರ ಪಟ್ಟಿಗೆ ಮಣಿದ ಜಿಲ್ಲಾಡಳಿತ ಕೆರೆಯ ನೀರನ್ನು ಪಂಪಸೆಟ್​ಗಳ ಮುಖಾಂತರ ಕೆರೆ ನೀರನ್ನು ಹೊರ ಹಾಕಲಾಗುತ್ತಿದೆ. ಆದರೆ, ಈಗ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಎರಡು ಕೊಡ ನೀರಿಗಾಗಿ ಇಡೀ ದಿನ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆರೆಯಲ್ಲಿ ಪತ್ತೆಯಾದ ಮೃತದೇಹ ಮೂರ್‍ನಾಲ್ಕು ದಿನಗಳ ಕಾಲ ಕೆರೆಯಲಿದ್ದು, ಮೀನು ಇತರ ಕೀಟಗಳು ದೇಹವನ್ನು ಸಂಪೂರ್ಣ ಕಚ್ಚಿದ್ದವು. ಹೀಗಾಗಿ ಇಂತಹ ನೀರನ್ನು ಕುಡಿಯಲು ಸಾಧ್ಯವಿಲ್ಲ. ಹೀಗಾಗಿ ಕೆರೆಯ ನೀರನ್ನು ಹೊರಕ್ಕೆ ಹರಿಸುವಂತೆ ಗ್ರಾಮಸ್ಥರು ಪಟ್ಟುಹಿಡಿದಿದ್ದರು. ಆದರೆ, ಮುಂದೆ ಮಳೆ ಸಮಸ್ಯೆಯಾದರೆ ಇರುವ ಇತರ ಬಳಕೆ, ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾದರೆ ಮತ್ತೂಂದು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಗ್ರಾಮಸ್ಥರ ಮನವೋಲಿಸಲು ಪ್ರಯತ್ನ ಪಟ್ಟರಾದರು.

ಮುಂದೆ ಚೆನ್ನಾಗಿ ಮಳೆಯಾಗುತ್ತದೆ ಈ ನೀರನ್ನು ಹೊರ ಹಾಕದೇ ಹೊರತು ನಾವು ಈ ಕೆರೆ ನೀರನ್ನು ಕುಡಿಯಲು ಬಳಸಲ್ಲ. ಅಲ್ಲಿಯವರೆಗೆ ಟ್ಯಾಂಕರ್‌ ನೀರು ಪೂರೈಸಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಹೇಳಿದ್ದಾರೆ.

ಕೆರೆಯಲ್ಲಿ ಮೃತದೇಹ ದೊರೆತ ಮಾರನೇ ದಿನವೇ ಕೆರೆ ನೀರಿನ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆದರೆ, ನೀರಿನಲ್ಲಿ ಯಾವುದೇ ಹಾನಿಕಾರಕ ಅಂಶ ಅಥವಾ ಕುಡಿಯಲು ಯೋಗ್ಯವಲ್ಲದ ಬ್ಯಾಕ್ಟಿರಿಯಾಗಳು ಇಲ್ಲ ಎಂದು ಪ್ರಯೋಗಾಲಯ ವರದಿ ಬಂದಿದೆ. ಪುನಃ ಮತ್ತೊಮ್ಮೆ ನೀರು ಪರೀಕ್ಷೆ ಮಾಡಿಸಿದಾಗಲೂ ಅದೇ ಫಲಿತಾಂಶ ಬಂದಿದೆ. ಅಲ್ಲದೆ ವೈಜ್ಞಾನಿಕವಾಗಿ ವೈದ್ಯರು ಹಾಗೂ ತಂತ್ರಜ್ಞರ ಸಮಕ್ಷಮದಲ್ಲಿ ಔಷಧಿ ಸಿಂಪರಣೆ ನಿರ್ವಹಿಸಲಾಗಿದೆ.

ಇದನ್ನೂ ಓದಿ: ಪಂಚಾಯ್ತಿ ಮಟ್ಟದಲ್ಲಿ ನವೋದಯ ಶಾಲೆ ಆರಂಭಿಸುವ ಪ್ರಸ್ತಾಪ: ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದ ಡಿಕೆಶಿ

ಅಧಿಕಾರಿಗಳು ಆ ನೀರನ್ನು ಕುಡಿದು ಧೈರ್ಯ ಹೇಳಿದರೂ ಗ್ರಾಮಸ್ಥರು ಮಾತ್ರ ಬಳಕೆಗೆ ಹಿಂದೇಟು ಹಾಕಿ. ಕಣ್ಣಾರೆ ಕಂಡ ನಂತರ ಅಂತಹ ನೀರು ಕುಡಿಯಲು ಹೇಗೆ ಸಾಧ್ಯ. ಟ್ಯಾಂಕರ್‌ ನೀರು ಒದಗಿಸಿ ಎಂದು ಕೇಳಿಕೊಂಡಿದ್ದರು. ಆದರೆ, ಈಗ ಎರಡು ಕೊಡ ನೀರಿಗಾಗಿ ಇಡೀ ದಿನ ಟ್ಯಾಂಕರ್​ಗಾಗಿ ಕಾಯುವ ಪರಿಸ್ಥಿತಿ ಗ್ರಾಮಸ್ಥರಿಗೆ ಎದುರಾಗಿದೆ. ಪಕ್ಕದ ರೊಟ್ಟಿಗವಾಡ ಗ್ರಾಮಸ್ಥರು ಇದೇ ಕೆರೆಯ ನೀರನ್ನು ಕುಡಿಯಲು ಬಳಸುತ್ತಿದ್ದರು. ಇತ್ತೀಚೆಗೆ ನಡೆದ ಘಟನೆಯಿಂದ ಎರಡೂ ಗ್ರಾಮದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಉಮ್ಮಚಗಿ-ರೊಟ್ಟಿಗವಾಡ ಗ್ರಾಮದ ನಡುವೆ ಒಂದು ಸಣ್ಣ ಕೆರೆಯಿದ್ದು, ಈ ನೀರಿಗಾಗಿ ಇಡೀ ದಿನ ಬಡಿದಾಡುವಂತಾಗಿದೆ. ಬೇಸಿಗೆ ಪರಿಣಾಮ ಅಲ್ಲಿಯೂ ನೀರು ಸಂಪೂರ್ಣ ಬತ್ತಿದ್ದು, ಗಂಟೆಗೆ ಎರಡು ಕೊಡ ನೀರು ದೊರೆಯುವುದೇ ದುಸ್ತರವಾಗಿರುವಾಗ ನೀರಿಗಾಗಿ ಇಡೀ ದಿನ ಕಾಯುವಂತಹ ಪರಿಸ್ಥಿತಿಯನ್ನು ಗ್ರಾಮಸ್ಥರು ತಂದೊಡಿಕೊಂಡಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಜಾರಿ ಸಂಬಂಧ ಸಿಎಂ ಮಹತ್ವದ ಸಭೆ: ಗೃಹಲಕ್ಷ್ಮಿ ಯೋಜನೆಗೆ ವಾರ್ಷಿಕ 12,038 ಕೋಟಿ ಹೊರೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.