ಅಳ್ನಾವರ(ಧಾರವಾಡ): ಸರ್ಕಾರದ ನಿರ್ದೇಶನದಂತೆ ಇಲ್ಲಿನ ವ್ಯಾಪಾರಸ್ಥರ ತ್ವರಿತ ಆ್ಯಂಟಿಜೆನ್ ಪರೀಕ್ಷೆ ಮಾಡಲಾಯಿತು. 89 ಜನರಲ್ಲಿ ಐವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರನ್ನು ಕೊರೊನಾ ಕೇರ್ ಸೆಂಟರ್ಗೆ ಕಳುಹಿಸಲಾಗಿದೆ ಎಂದು ತಹಶೀಲ್ದಾರ್ ಅಮರೇಶ ಪಮ್ಮಾರ ಹೇಳಿದರು.
ಪಟ್ಟಣ ಪಂಚಾಯತ್ ಕಚೇರಿ ಪಕ್ಕದ ಜಾಗದಲ್ಲಿ ಧಾರವಾಡದಿಂದ ಬಂದ ಆರೋಗ್ಯ ಇಲಾಖೆ ಸಿಬ್ಬಂದಿ, ವ್ಯಾಪಾರಸ್ಥರ ಗಂಟಲು ದ್ರವ ಸಂಗ್ರಹಿಸಿ ಅರ್ಧ ಗಂಟೆಯಲ್ಲಿ ಪರೀಕ್ಷಾ ವರದಿ ನೀಡಿದ್ದಾರೆ.
ಸೋಂಕು ದೃಢಪಟ್ಟವರ ಅಂಗಡಿಗಳು ಹಾಗೂ ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಈ ತಪಾಸಣೆ ಒಂದು ವಾರ ಕಾಲ ನಡೆಯಲಿದೆ. ವ್ಯಾಪಾರಸ್ಥರು ಹಾಗೂ ಸಾರ್ವಜನಿಕರನ್ನು ತಪಾಸಣೆಗೆ ಒಳಪಡಿಸುವ ಗುರಿ ತಾಲೂಕು ಆಡಳಿತ ಹೊಂದಿದೆ.