ETV Bharat / state

ಮಾಜಿ ಸಚಿವ ಕುಲಕರ್ಣಿ ವಶಕ್ಕೆ ಪಡೆಯುವ ಮುನ್ನ ಸಿಬಿಐ ಕೋರ್ಟ್​ಗೆ ಸಲ್ಲಿಸಿದ ಅಫಿಡವಿಟ್ ವರದಿಯಲ್ಲಿ ಏನಿದೆ ಗೊತ್ತಾ..?

ಯೋಗೇಶ್​ ಗೌಡ ಕೊಲೆ ಪ್ರಕರಣದಿಂದ ಪಾರಾಗಲು ಮಾಜಿ ಸಚಿವ ವಿನಯ್​ ಕುಲಕರ್ಣಿ ಹಲವು ಸಾಕ್ಷ್ಯ ನಾಶಪಡಿಸಿದ್ದಾರೆ ಎಂಬುದನ್ನು ಸಿಬಿಐ ವರದಿಯಲ್ಲಿ ಉಲ್ಲೇಖಿಸಿದ್ದು, ಸಿಬಿಐ ಸಲ್ಲಿಸಿದ ಅಫಿಡವಿಟ್ ಈಟಿವಿ ಭಾರತ್​ಗೆ ಲಭ್ಯವಾಗಿದೆ.

Vinay Kulkarni
ವಿನಯ್​ ಕುಲಕರ್ಣಿ
author img

By

Published : Nov 7, 2020, 6:37 PM IST

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯತ್​ ಸದಸ್ಯ ಯೋಗೇಶ್​ ಗೌಡ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಬಂಧಿತ ಆರೋಪಿಗಳ ಹೇಳಿಕೆ ವಿನಯ್ ಕುಲಕರ್ಣಿಗೆ ಮುಳುವಾಗಿದೆ‌. ಅಲ್ಲದೇ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪಾತ್ರವನ್ನು ಎಳೆ ಎಳೆಯಾಗಿ ಸಿಬಿಐ ಕೋರ್ಟ್​ಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಹೌದು. ವಿನಯ ಕುಲಕರ್ಣಿಯವರು ಪ್ರಕರಣದಿಂದ ಪಾರಾಗಲು ಹಲವು ಸಾಕ್ಷ್ಯ ನಾಶಪಡಿಸಿದ್ದಾರೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿದ್ದು ಸಿಬಿಐ ಸಲ್ಲಿಸಿದ ಅಫಿಡವಿಟ್ ಈಟಿವಿ ಭಾರತ್​ಗೆ ಲಭ್ಯವಾಗಿದೆ.

affidavit
ಅಫಿಡವಿಟ್ ಪ್ರತಿ

ಸಿಬಿಐ ಮಾಹಿತಿಯನ್ನು ಕಲೆಹಾಕಿದ್ದು, ಸಿಬಿಐ ಮಾಹಿತಿಯಲ್ಲಿ ಬೆಂಗಳೂರಿನ ಮೌರ್ಯ ಹೊಟೇಲ್ ನಲ್ಲಿ ವಿನಯ್ ಕುಲಕರ್ಣಿ ರೂಂ ನಂಬರ್ 555 ನ್ನು 8 ಜೂನ್ 2016 ರಿಂದ 20 ಜೂನ್ 2016 ರ ತನಕ ಬುಕ್ ಮಾಡಿದ್ದರು. ತನ್ನ ಶಿಷ್ಯಂದಿರಿಗಾಗಿ ರೂಂ ಬುಕ್ ಮಾಡಿ ಬಿಟ್ಟಿದ್ದ. ಇನ್ನು ಕೊಲೆಯಾದ ನಂತರ ಬಸವರಾಜ ಮುತ್ತಗಿ ಮತ್ತು ಗ್ಯಾಂಗ್ ವಿನಯ್ ಭೇಟಿಯಾಗಿದೆ ಎಂಬುವಂತ ಮಾಹಿತಿಗಳು ಕೂಡ ಲಭ್ಯವಾಗಿದೆ.

affidavit
ಅಫಿಡವಿಟ್ ಪ್ರತಿ

16 ಜೂನ್ 2016 ರಂದು ಬಸವರಾಜ್ ಮುತ್ತಗಿ ಮತ್ತು ಗ್ಯಾಂಗ್ ನಿಂದ ಭೇಟಿ ಮಾಡಿ ಬೆಂಗಳೂರಿನ ಸದಾಶಿವನಗರದಲ್ಲಿ ಮಧ್ಯಾಹ್ನ 1:30ಕ್ಕೆ ಮಾತುಕತೆ ನಡೆದಿದ್ದು,ಇನ್ನೂ ಆರೋಪಿಗಳ ಹೇಳಿಕೆಯಲ್ಲಿ ಈ ಅಂಶಗಳು ಈಗ ಬಹಿರಂಗವಾಗಿವೆ. ಅಲ್ಲದೇ ಸಿಬಿಐ ಎದುರು ವಿನಯ ಪಾತ್ರದ ಬಗ್ಗೆ ಆರೋಪಿಗಳು ಏಳೆ ಏಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇಷ್ಟಾದ ಬಳಿಕ ಕುಲಕರ್ಣಿ ಎ1 to ಎ6ನ ಸರೆಂಡರ್ ಮಾಡಿಸಲು ವ್ಯವಸ್ಥೆ ಮಾಡಲಾಗಿದೆ‌. ಕೊಲೆ ಮಾಡಿದ ಎ7 ಟೂ ಎ14 ಬದಲಾಗಿ, ಎ1 ಟೂ ಎ6 ಸರಂಡರ್ಗೆ ವ್ಯವಸ್ಥೆ ಮಾಡಲಾಗಿತ್ತು. ಅದರಂತೆ 17 ಜೂನ್ ಎ1 ಟೂ ಎ5 ಲೋಕಲ್ ಪೊಲೀಸರ ಮುಂದೆ ಸರಂಡರ್ ಮತ್ತೇ ಎ6, 20 ಜೂನ್ 2016 ರಂದು ಲೋಕಲ್ ಪೊಲೀಸರ ಮುಂದೆ ಸರಂಡರ್ ಮಾಡಿದ್ದು, ಇದಕ್ಕೆ ವಿನಯ್ ಕುಲಕರ್ಣಿ ಮತ್ತು ಆರೋಪಿಗಳ ನಡುವಿನ ಸಿಡಿಆರ್ ಪೊಲೀಸ್ ಇಲಾಖೆಗೆ ಉನ್ನತ ಮೂಲಗಳ ಮಾಹಿತಿ ಲಭ್ಯವಾಗಿದೆ.

ಕೊಲೆ ಕೇಸ್​ನಿಂದ ತಪ್ಪಿಸಿಕೊಳ್ಳಲು ವಿನಯ್ ಕುಲಕರ್ಣಿ ಮೆಗಾ ಪ್ಲಾನ್ ಮಾಡಿದ್ದರು ಎಂಬುವಂತ ಅನುಮಾನ ಸೃಷ್ಟಿಯಾಗಿದ್ದು, ಯೋಗೆಶ್​ ಗೌಡ ಕೊಲೆ ಹಿಂದಿನ ದಿನ ಮತ್ತು ಮುಂದಿನ ದಿನ ದೆಹಲಿಯಲ್ಲಿ ಇದ್ದಿದ್ದಾಗಿ ಸಾಕ್ಷಿಗಳ ಸೃಷ್ಟಿಸಿದ್ದು, ಕೊಲೆಗೂ ಮುನ್ನ ಎರಡು ದಿನ ಮತ್ತು ಕೊಲೆಯಾದ ಬಳಿಕ 3 ದಿನದ ಸಾಕ್ಷಿ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಕೊಲೆ ಮುನ್ನ ದೆಹಲಿಗೆ ಹೋಗಿ ಬಂದಿದ್ದರೂ, ಅಲ್ಲೇ ಇದ್ದಿದ್ದಾಗಿ ಸಾಕ್ಷಿ ಸೃಷ್ಟಿಸಿರುವ ಮಾಹಿತಿಯನ್ನು ಸಿಬಿಐ ಕಲೆ ಹಾಕಿದೆ.

12 ಜೂನ್ ಬೆಳಗ್ಗೆ 11:30ಕ್ಕೆ ಹೋಗಿ 13 ಜೂನ್ ಬೆಳಗ್ಗೆ 1:40ಕ್ಕೆ ಬಂದಿದ್ದ ವಿನಯ್‌‌ ಮತ್ತೆ 16 ಜೂನ್ ದೆಹಲಿಗೆ ಹೋಗಿ 18 ಜೂನ್ ವಾಪಸ್ಸು ಬಂದಿದ್ದ. ಇನ್ನೂ ಟಿಕೆಟ್ ಬುಕ್ ಮಾಡಿದ್ದಕ್ಕೆ ಸಾಕ್ಷಿಯನ್ನ ಸೃಷ್ಟಿ ಮಾಡಿರೋದು ಪತ್ತೆಯಾಗಿದೆ.

ಈ ಎಲ್ಲಾ ಅಂಶಗಳನ್ನು ಕೋರ್ಟಗೆ ಸಿಬಿಐ ಸಲ್ಲಿಸಿದ್ದು, ಇದರ ಆಧಾರದ ಮೇಲೆ ವಿಚಾರಣೆ ನಡೆಸಲು ‌ಕೋರ್ಟ್ ಅನುಮತಿ ಕೇಳಿದ್ದು, ಕೋರ್ಟ್ ಮೂರು ದಿನಗಳ ವಿಚಾರಣೆಗೆ ಅನುಮತಿ‌ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.