ಧಾರವಾಡ: ಕೊರೊನಾ ನಿಯಂತ್ರಣ ಸಲುವಾಗಿ ಭಾನುವಾರ ಲಾಕ್ಡೌನ್ ವಿಧಿಸಿದ್ದ ರಾಜ್ಯ ಸರ್ಕಾರವು ಸದ್ಯ ಲಾಕ್ಡೌನ್ ತೆರವುಗೊಳಿಸಿದ್ದು, ಧಾರವಾಡದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ನಗರದ ಬಹುತೇಕ ರಸ್ತೆಗಳಲ್ಲಿ ಆಟೋ, ಬೈಕ್ ಸೇರಿದಂತೆ ವಾಹನ ಓಡಾಟ ಜೋರಾಗಿದ್ದು, ಅಂಗಡಿಗಳು ತೆರೆದು ವ್ಯಾಪಾರ ವಹಿವಾಟುಗಳು ಸಹಜವಾಗಿ ಸಾಗುತ್ತಿವೆ.