ETV Bharat / state

ಚುನಾವಣಾ ಪೈಪೋಟಿ.. ಟ್ವೀಟ್​ ವಾರ್​ ಬಳಿಕ ರಾಹುಲ್​ ವಿರುದ್ಧ ಕಟೀಲ್ ವಿವಾದಾತ್ಮಕ ಹೇಳಿಕೆ - ಸಬ್ ಕಾ ಸಾಥ್ ಸಬ್ ಕಾ ವಿಕಾಸ್

ಹಾನಗಲ್​ ಹಾಗೂ ಸಿಂದಗಿ ಕ್ಷೇತ್ರಗಳಲ್ಲಿ ಸದ್ಯ ಬೈ ಎಲೆಕ್ಷನ್ ಪ್ರಚಾರ ಅಬ್ಬರ ಜೋರಾಗಿದೆ. ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷದ ನಾಯಕರ ಆರೋಪ-ಪ್ರತ್ಯಾರೋಪ, ಟೀಕೆ ಟಿಪ್ಪಣಿ ಸದ್ದು ಮಾಡ್ತಿವೆ. ಸಿದ್ದರಾಮಯ್ಯ ಮುಸ್ಲಿಂ ಸಮುದಾಯದ ಓಲೈಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಆರೋಪಿಸಿದ್ದಾರೆ.

ಕಟೀಲು
ಕಟೀಲು
author img

By

Published : Oct 19, 2021, 3:33 PM IST

Updated : Oct 19, 2021, 4:08 PM IST

ಹುಬ್ಬಳ್ಳಿ : ನರೇಂದ್ರ ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂದ್ರೆ, ಸಿದ್ದರಾಮಯ್ಯ ವೋಟಿಗಾಗಿ ಬೇರೆಯದ್ದನ್ನೇ ಜಪ ಮಾಡ್ತಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ವ್ಯಂಗ್ಯವಾಡಿದ್ದಾರೆ.

‘ಕಾಂಗ್ರೆಸ್ ಎರಡು ಹೋಳಾಗಿ ಚುನಾವಣೆಗೆ ಹೋಗುತ್ತದೆ’

ಹುಬ್ಬಳ್ಳಿಯಲ್ಲಿಂದು ವಿಧಾನ ಪರಿಷತ್ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಸ್ಲಿಂ ಸಮುದಾಯದ ಓಲೈಕೆ ಮಾಡುತ್ತಿದ್ದಾರೆ. ಉಗ್ರಪ್ಪನವರು ಜೀವಮಾನದಲ್ಲಿಯೇ ಪಿಸುಮಾತಿನಲ್ಲಿ ಹೀಗೆ ಮಾತನಾಡಿರಲಿಲ್ಲ. ಸಿದ್ದರಾಮಯ್ಯ ಮಾತಾನಾಡಿಸಿದ್ದರಿಂದ ಉಗ್ರಪ್ಪ ಮಾತನಾಡಿದ್ದಾರೆ. ಕಾಂಗ್ರೆಸ್ ಮುಂದಿನ ಚುನಾವಣೆಗೆ ಒಟ್ಟಾಗಿ ಹೋಗಲ್ಲ. ಮುಂದಿನ ಚುನಾವಣೆ ವೇಳೆ ಕಾಂಗ್ರೆಸ್ ಎರಡು ಹೋಳಾಗಿ ಹೋಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಮುಂದಿನ ದಿನಗಳಲ್ಲಿ 29 ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆಯನ್ನು ನಾವು ಸವಾಲಾಗಿ ಸ್ವೀಕರಿಸಬೇಕಿದೆ. ಈ ದೃಷ್ಟಿಯಿಂದ ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕ್ರಮಗಳು ನಡೆದಿವೆ. ಹೊಸ ಮತದಾರರ ಪಟ್ಟಿ, ಹೊಸ ಮತದಾರರ ಸೇರ್ಪಡೆ ಆಗಬೇಕಿದೆ ಎಂದರು.

ವೋಟಿಗಾಗಿ ಸಿದ್ದರಾಮಯ್ಯ ಸಾಬ್​ ಕ ಸಾಥ್​.. ಸಾಬ್​ ಕಾ ವಿಕಾಸ್ ಅಂತಿದ್ದಾರೆ: ಕಟೀಲು

‘ಜೆಡಿಎಸ್​​- ಕಾಂಗ್ರೆಸ್​ನಿಂದ ಚಿಲ್ಲರೆ ರಾಜಕೀಯ’

ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಬಹುಸಂಖ್ಯಾತರ ವೋಟ್ ಸಿಗಲ್ಲ ಅನ್ನೋದು ಗೊತ್ತಾಗಿದೆ. ಹೀಗಾಗಿ ಆರ್​ಎಸ್​ಎಸ್​ಗೆ ಬೈಯುವ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಕುಂಟುಂಬ ರಾಜಕೀಯ ಮಾಡುತ್ತಾ ಹಾಳಾಗಿದೆ‌. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಎರಡು ಪಕ್ಷಗಳು ಸೋಲುತ್ತವೆ. ಮತ್ತೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಆಡಳಿತಕ್ಕೆ ಜನರ ಮೆಚ್ಚುಗೆ ಸಿಕ್ಕಿದೆ. ಕಾಂಗ್ರೆಸ್ ಸಂವಿಧಾನದ ಮೇಲಿನ ನಂಬಿಕೆ ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

‘ಪಕ್ಷ ಸಂಭಾಳಿಸಲು ರಾಹುಲ್, ಸೋನಿಯಾಗೆ ಆಗುತ್ತಿಲ್ಲ’

ರಾಹುಲ್​ ಗಾಂಧಿ, ಸೋನಿಯಾ ಗಾಂಧಿಗೆ ಪಕ್ಷವನ್ನು ಸಂಭಾಳಿಸಲು ಆಗುತ್ತಿಲ್ಲ. ಇಂಥವರು ನಮ್ಮ ಪ್ರಧಾನಿಯ ಬಗ್ಗೆ ಟೀಕೆ ಮಾಡುತ್ತಾರೆ. ಕಾಂಗ್ರೆಸ್​ನವರು ಪಕ್ಷ ಕಟ್ಟಲು ವಿಲವಿಲ ಒದ್ದಾಡುತ್ತಿದ್ದಾರೆ. ನಮ್ಮ ಪ್ರಧಾನಿಯವರು ಏಳು ವರ್ಷದ ಆಡಳಿತದಲ್ಲಿ ಬಲಿಷ್ಠ ರಾಷ್ಟ್ರ ಕಟ್ಟಿದ್ದಾರೆ. ಜತೆಗೆ ನೆರೆಯ ರಾಷ್ಟ್ರಗಳಾದ ಚೀನಾ, ಪಾಕಿಸ್ತಾನಕ್ಕೂ ತಕ್ಕ ಉತ್ತರ ಕೊಟ್ಟಿದ್ದಾರೆ. ಜಗತ್ತಿನಲ್ಲಿ ಗೌರವಿಸಲ್ಪಟ್ಟ ರಾಷ್ಟ್ರ ಭಾರತ. ವಿಶ್ವದಾದ್ಯಂತ ನಮ್ಮ ಪ್ರಧಾನಿಯವರು ಗೌರವಿಸಲ್ಪಡುತ್ತಾರೆ ಎಂದು ಹೇಳಿದರು.

'ರಾಹುಲ್​ ಗಾಂಧಿ ಡ್ರಗ್​ ಪೆಡ್ಲರ್​'

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ವಿರುದ್ಧ ಕಿಡಿಕಾರಿದ ಕಟೀಲ್​, ರಾಹುಲ್​ ಗಾಂಧಿ ಓರ್ವ ಡ್ರಗ್​ ಪೆಡ್ಲರ್​ ಅನ್ನೋ ಸುದ್ದಿಗಳು ಹಡಿದಾಡ್ತಿವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು. ಇದೇ ವೇಳೆ ಕಾಂಗ್ರೆಸ್​ನಲ್ಲಿ ರಾಷ್ಟ್ರೀಯ ಅಧ್ಯಕ್ಷರು ಯಾರು ಅಂತಾ ಹೇಳಿ? ಸೋನಿಯಾ, ರಾಹುಲ್ ಗಾಂಧಿಯವರೇ ಅಧ್ಯಕ್ಷಗಿರಿಗೆ ಪೈಪೋಟಿ ನಡೆಸುತ್ತಿದ್ದಾರೆ ಎಂದು ಕಟೀಲ್​ ಟೀಕಿಸಿದರು.

‘ಸ್ವಾಭಿಮಾನದ ರಾಷ್ಟ್ರ ಭಾರತ’

ಕೋವಿಡ್ ನಿರ್ವಹಣೆಯಲ್ಲಿ ಭಾರತ ಮುಂದಿದ್ದು, ದೇಶ ಸ್ವಾಭಿಮಾನದಿಂದ ಮುನ್ನಡೆಯುತ್ತಿದೆ. ಕಾಶ್ಮೀರದಲ್ಲಿ ದಾಳಿ ನಡೆದರೆ, ಪ್ರಧಾನಿ ಮನಮೋಹನ್ ಸಿಂಗ್ ಒಂದು ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಈಗ ಮೋದಿ ಅಧಿಕಾರಕ್ಕೆ ಬಂದ ನಂತರ ಕಾಶ್ಮೀರದಲ್ಲಿ ಪ್ರತಿದಾಳಿ ಮಾಡುವ ಕಾರ್ಯ ನಡೆದಿದೆ ಎಂದು ಕಾಂಗ್ರೆಸ್​ಗೆ ತಿರುಗೇಟು ಕೊಟ್ಟರು.

‘ಮುಂದಿನ ಚುನಾವಣೆವರೆಗೂ ಡಿಕೆಶಿ-ಸಿದ್ದರಾಮಯ್ಯ ಜಗಳ ನಡೆಯುತ್ತದೆ’

ಇಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಡಿಕೆಶಿ ಬಿಡುತ್ತಿಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯ ಜಗಳ ಮುಂದಿನ ಚುನಾವಣೆವರೆಗೂ ಮುಂದುವರೆಯತ್ತದೆ. ವಿಧಾನ ಪರಿಷತ್, ವಿಧಾನಸಭೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಭವಿಷ್ಯ ನುಡಿದರು.

Last Updated : Oct 19, 2021, 4:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.