ETV Bharat / state

ನಾನು ಮೊದಲಿಂದಲೂ ಆರ್​​ಎಸ್​ಎಸ್ ವಿರೋಧಿ: ಸಿದ್ದರಾಮಯ್ಯ ಕಿಡಿ - ಹುಬ್ಬಳ್ಳಿಯಲ್ಲಿ ಆರ್​ಎಸ್​ಎಸ್​ ಕುರಿತು ಸಿದ್ದರಾಮಯ್ಯ ಕಿಡಿ

ರಾಜ್ಯಸಭೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ನಾವು ಅಲ್ಪಸಂಖ್ಯಾತರಿಗೆ ಸೀಟು ನೀಡಿದ್ದೇವೆ. ಕೋಮುವಾದಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಸಿದ್ಧರಾಮಯ್ಯ
ಸಿದ್ಧರಾಮಯ್ಯ
author img

By

Published : Jun 6, 2022, 8:52 PM IST

Updated : Jun 6, 2022, 9:25 PM IST

ಹುಬ್ಬಳ್ಳಿ: ನಾನು ಮೊದಲಿಂದಲೂ ಆರ್​ಎಸ್​ಎಸ್​ ವಿರೋಧಿ. ಅವರ ಕೆಲಸವನ್ನು ನಾನು ವಿರೋಧಿಸುತ್ತೇನೆ. ನನ್ನ ಪ್ರಶ್ನೆಗೆ ಅವರು ಯಾರು, ಯಾಕೆ ಉತ್ತರ ನೀಡಲ್ಲ ಅಂದ್ರೆ ಸತ್ಯವನ್ನು ಅಷ್ಟು ಸುಲಭವಾಗಿ ತಳ್ಳಿಹಾಕೋಕೆ ಆಗಲ್ಲ. ಹೀಗಾಗೇ ಆರ್​ಎಸ್​ಎಸ್​ ನವರು ಮಾತನಾಡುತ್ತಿಲ್ಲ. 1920 ರಿಂದ RSS ನಲ್ಲಿ ಸರಸಂಗ ಸಂಚಾಲಕರು ಯಾರಾಗಿದ್ದಾರೆ. ಇಲ್ಲಿಯವರೆಗೂ ಒಂದೇ ಜಾತಿಯವರಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿದರು

ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಎಸ್​ವೈ ನಾನೂ ಆಕಸ್ಮಿಕವಾಗಿ ಭೇಟಿಯಾಗಿದ್ದೇವೆ. ಇಬ್ಬರ ಮಧ್ಯೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದರು. ರಾಜ್ಯಸಭೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ನಾವು ಅಲ್ಪಸಂಖ್ಯಾತರಿಗೆ ಸೀಟು ನೀಡಿದ್ದೇವೆ. ಕೋಮುವಾದಿ ಪಕ್ಷದ ಅಭ್ಯರ್ಥಿ ಸೋಲಿಸುವುದೇ ನಮ್ಮ ಗುರಿ. ದೇವೇಗೌಡರು ನಿಂತಾಗ ನಾವು ಅಭ್ಯರ್ಥಿ ಹಾಕಲಿಲ್ಲ. ಅವರು ಗೆಲ್ಲುವ ಸಲುವಾಗಿ ಹಾಗೆ ಮಾಡಿದ್ದೆವು. ಈಗ ಅವರು ಕ್ಯಾಂಡಿಡೇಟ್​ ಹಾಕಬಾರದಿತ್ತು. ಕೋಮುವಾದಿ ಬಿಜೆಪಿಯನ್ನು ಸೋಲಿಸುವುದಕ್ಕೆ ನಮ್ಮನ್ನು ಬೆಂಬಲಿಸಬೇಕಿತ್ತು ಎಂದು ಹೇಳಿದರು.

ನಾನು ಒಂದು ಕಲ್ಲಲ್ಲಿ ಎರಡೂ ಹಕ್ಕಿಯನ್ನು ಹೊಡೆದಿಲ್ಲ. ಒಂದು ಹಕ್ಕಿನೂ ಹೊಡೆದಿಲ್ಲ ಎಂದು ಹೆಚ್​ಡಿಕೆ ಮಾತಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಮಗೆ ಬಿಜೆಪಿ-ಜೆಡಿಎಸ್ ಆತ್ಮಸಾಕ್ಷಿ ಮತ ಬರುತ್ತವೆ. ನಾವೇ ಮೊದಲು ಅಭ್ಯರ್ಥಿಯನ್ನ ಹಾಕಿದ್ದೆವು. ನಮ್ಮನ್ನ ನೋಡಿ ಅಭ್ಯರ್ಥಿ ಹಾಕಬಾರದಿತ್ತು ಎಂದು ಅವರು ಕಿಡಿಕಾರಿದರು.

ಆರ್​ಎಸ್​ಎಸ್​ ಬಗ್ಗೆ ಮಾತನಾಡಿದ್ರೆ ಸಿದ್ದು ಸುಟ್ಟು ಹೋಗ್ತಾರೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನೇನು ಸುಟ್ಟು ಹೋಗಲ್ಲ ಎಂದು ವ್ಯಂಗ್ಯವಾಡಿದರು.

ಓದಿ: ಪೂಜಾರಹಳ್ಳಿ ಕೆರೆ ಮೇಲೆ ಭೂ ನುಂಗಣ್ಣರ ವಕ್ರದೃಷ್ಟಿ.. ಸಿಡಿದೆದ್ದ ಗ್ರಾಮಸ್ಥರು!

Last Updated : Jun 6, 2022, 9:25 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.