ಹುಬ್ಬಳ್ಳಿ: ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಲಾಕ್ಡೌನ್ ವೇಳೆ ನಿಗದಿತ ಸಮಯ ಮುಗಿದ ಬೆನ್ನಲ್ಲೇ ಕಿರಾಣಿ ಅಂಗಡಿಯನ್ನ ಬಂದ್ ಮಾಡಿಸಲು ಹೋಗಿದ್ದ ಪೊಲೀಸರೊಬ್ಬರ ಮೇಲೆ ಹಲ್ಲೆ ನಡೆಸಿದ ನಾಲ್ವರನ್ನ ನಗರ ಗ್ರಾಮೀಣ ಠಾಣೆ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಬೆಳಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ಮಾತ್ರ ಅಂಗಡಿಗಳನ್ನ ತೆಗೆಯಬೇಕೆಂಬ ನಿಯಮವಿದ್ದರೂ ಕೂಡಾ, ಅದನ್ನ ಮೀರಿ ಅಂಗಡಿ ತೆಗೆದಿದ್ದ ಈರಣ್ಣ ಹನುಮಸಾಗರ ಎಂಬಾತರಿಗೆ ಪೊಲೀಸ್ ಗಿರೀಶ ತಿಪ್ಪಣ್ಣನವರ ಬಂದ್ ಮಾಡುವಂತೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಂಜುನಾಥ ಕಿರಾಣಿ ಅಂಗಡಿ ಮಾಲೀಕ ಈರಣ್ಣ ಹನುಮಸಾಗರ ಮತ್ತು ಆತನ ಮೂವರು ಮಕ್ಕಳು ಪೊಲೀಸ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಲ್ಲದೇ ಹಲ್ಲೆ ಮಾಡಿರುವ ಆರೋಪದ ಮೇಲೆ ಪ್ರಕರಣವನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ದಾಖಲು ಮಾಡಿಕೊಂಡು, ನಾಲ್ವರನ್ನ ಬಂಧಿಸಿದ್ದಾರೆ.
ಓದಿ: ಟಗ್ ಬೋಟ್ ಮಾಸ್ಟರ್ ಎನ್ಎಂಪಿಟಿಗೆ ಮಾಹಿತಿ ನೀಡಿರಲಿಲ್ಲ: ಡಾ.ವೆಂಕಟರಮಣ ಅಕ್ಕರಾಜು