ಹುಬ್ಬಳ್ಳಿ: ಸಿಆರ್ಪಿಎಫ್ ಯೋಧ ಸೇರಿ ಐವರಿಗೆ ಕೊರೊನಾ ಕಾಣಿಸಿಕೊಂಡ ಧಾರವಾಡ ಜಿಲ್ಲೆಯ ಅಣ್ಣಿಗೇರಿಯನ್ನು ಸೀಲ್ಡೌನ್ ಮಾಡಿದರೂ, ಜನರು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ.
ಯೋಧನಿಂದ ಮೂವರಿಗೆ ಮತ್ತು ರಾಜಸ್ತಾನದಿಂದ ಅಣ್ಣಿಗೇರಿಗೆ ಬಂದವರಿಬ್ಬರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ, ಆ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ಆದರೂ ಅದಕ್ಕೆ ಕ್ಯಾರೆ ಎನ್ನದೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಲಾಗಿದೆ. ಇಷ್ಟಾದರೂ ತಾಲೂಕಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.