ETV Bharat / state

ಕಲಘಟಗಿಯಲ್ಲಿ ಮಳೆಯ ಅಬ್ಬರ: ರಸ್ತೆ ಸಂಚಾರ ಸ್ಥಗಿತ

author img

By

Published : Aug 17, 2020, 11:50 PM IST

ಕಲಘಟಗಿ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮುಂಜಾಗೃತಾ ಕ್ರಮ ವಹಿಸುವಂತೆ ಇಲ್ಲಿನ ಜನತೆಗೆ ಪೊಲೀಸರು ಸೂಚನೆ ನೀಡಿದ್ದಾರೆ.

ಕಲಘಟಗಿಯಲ್ಲಿ ಮಳೆ
ಕಲಘಟಗಿಯಲ್ಲಿ ಮಳೆ

ಕಲಘಟಗಿ: ತಾಲೂಕಿನಲ್ಲಿ‌ ಸತತ ಮೂರು ದಿನಗಳಿಂದ ಮಳೆರಾಯ ಅಬ್ಬರಿಸುತ್ತಿದ್ದು, ಬಿಸರಳ್ಳಿ- ಹಿರೆಹೊನ್ನಳ್ಳಿ‌ ರಸ್ತೆ ಸಂಚಾರ ಬಂದ್ ಆಗಿದೆ.

ಕಳೆದ ಕೆಲ‌ವು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ‌ ಹಳ್ಳ, ಕೆರೆಗಳು ತುಂಬಿ ಹರಿಯುತ್ತಿವೆ. ಇದರಿಂದ ರಸ್ತೆ ಸಂಪರ್ಕ ಬಂದ್​ ಆಗಿದೆ. ಇನ್ನು ಮುಂಜಾಗೃತ ಕ್ರಮ ಕೈಗೊಂಡಿರುವ ಪೊಲೀಸರು, ಬಿಸರಳ್ಳಿ- ಹಿರೆಹೊನ್ನಳ್ಳಿ‌ ರಸ್ತೆಯಲ್ಲಿ ಜನರು ಸಂಚಾರ ಮಾಡದಂತೆ ಕ್ರಮಕೈಗೊಂಡಿದ್ದಾರೆ.

ಅಷ್ಟೇ ಅಲ್ಲದೆ, ಮಳೆ ಪ್ರಮಾಣ ಕಡಿಮೆ ಆಗುವವರೆಗೂ ಸಾರ್ವಜನಿಕರಿಗೆ ಎಚ್ಚರಿಕೆಯಿಂದಿರುವಂತೆ ಪೋಲೀಸರು ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.