ETV Bharat / state

ರಾತ್ರೋರಾತ್ರಿ ಕೆ.ಎಚ್.ಪಾಟೀಲರ ಮೂರ್ತಿ ತೆರವು: ಕೈ ಮುಖಂಡರಿಂದ ಹೋರಾಟಕ್ಕೆ ನಿರ್ಧಾರ - ಕೆ ಹೆಚ್​ ಪಾಟೀಲ್​ ಅವರ ಪ್ರತಿಮೆ ತೆರವು

ತಮ್ಮ ಗಮನಕ್ಕೆ ತಾರದೇ ಕೆ.ಹೆಚ್.ಪಾಟೀಲ್​ ಅವರ ಪ್ರತಿಮೆ ತೆರವುಗೊಳಿಸಿರುವ ಕುರಿತು ಕಾಂಗ್ರೆಸ್​ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

removal of k h patila statue
ರಾತ್ರೋರಾತ್ರಿ ಕೆ ಎಚ್ ಪಾಟೀಲ ಮೂರ್ತಿ ತೆರವು
author img

By

Published : Feb 2, 2023, 4:26 PM IST

Updated : Feb 2, 2023, 5:30 PM IST

ಕೆ.ಎಚ್.ಪಾಟೀಲರ ಮೂರ್ತಿ ತೆರವು ವಿವಾದ

ಹುಬ್ಬಳ್ಳಿ: ಸಹಕಾರಿ ಭೀಷ್ಮ ಕೆ.ಎಚ್.ಪಾಟೀಲ್ ಅವರ ಪ್ರತಿಮೆಯನ್ನು ರಾತ್ರಿ ವೇಳೆ ತೆರವುಗೊಳಿಸಿದ್ದಕ್ಕೆ ಪ್ರತಿಷ್ಠಾನದ ಪ್ರಮುಖರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇಲ್ಲಿನ ಮಹಾನಗರ ಪಾಲಿಕೆ ಈಜುಕೊಳದ ಮುಂಭಾಗದಲ್ಲಿ ಕಳೆದ 31 ವರ್ಷಗಳ ಹಿಂದೆ ಸಹಕಾರಿ ಭೀಷ್ಮ ಕೆ.ಎಚ್.ಪಾಟೀಲರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿಷ್ಠಾನದ ಗಮನಕ್ಕೆ ತರದೆಯೇ ತೆರವುಗೊಳಿಸಿ ಇಂದಿರಾ ಗಾಜಿನ ಮನೆಯಲ್ಲಿರಿಸಿದ್ದ ವಿಷಯ ತಿಳಿದ ಕೈ ನಾಯಕರು ಹಾಗೂ ಪ್ರತಿಷ್ಠಾನದ ಪ್ರಮುಖರು ಸ್ಥಳಕ್ಕೆ ಆಗಮಿಸಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ವಿರುದ್ಧ ಅಸಮಾಧಾನ ಹೊ ಹಾಕಿದರು.

ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎ.ಎಮ್. ಹಿಂಡಸಗೇರಿ ಮಾತನಾಡಿ, "ಅಭಿವೃದ್ಧಿ ವಿಚಾರಕ್ಕೆ ಎಂದೂ ವಿರೋಧ ವ್ಯಕ್ತಪಡಿಸಿಲ್ಲ. ಕಾಮಗಾರಿಗೆ ಪ್ರತಿಮೆಗೆ ಒಂದು ವೇಳೆ ಅಡಚಣೆ ಆಗಿದ್ದರೆ, ನಮಗೆ ತಿಳಿಸಿದರೆ ನಾವೇ ವಿಧಿವಿಧಾನದ ಮೂಲಕ ತೆರವುಗೊಳಿಸುತ್ತಿದ್ದೆವು. ಆದರೆ ಕಳ್ಳರಂತೆ ರಾತ್ರೋ ರಾತ್ರಿ ಸಹಕಾರಿ ಧುರೀಣರ ಪ್ರತಿಮೆಯನ್ನು ತೆರವುಗೊಳಿಸುವ ಮೂಲಕ ಸಹಕಾರಿ ರಂಗಕ್ಕೆ ಅವಮಾನ ಮಾಡಿದ್ದಾರೆ. ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಮಹಾನ್ ವ್ಯಕ್ತಿಗಳ ಇತಿಹಾಸ ಸಾಧನೆ ಅರಿಯದೇ ಹೊಲಸು ರಾಜಕಾರಣ ಮಾಡುತ್ತಿರುವುದು ದುರದೃಷ್ಟಕರ" ಎಂದರು.

ಕಾಂಗ್ರೆಸ್ ಮುಖಂಡ ವಸಂತ ಲದ್ವಾ ಮಾತನಾಡಿ, "ಇದು ರಾಜಕೀಯ ದುರುದ್ದೇಶದಿಂದ ಮಾಡಿರುವ ಕೃತ್ಯ. ಕಾಂಗ್ರೆಸ್ ಪಕ್ಷ ಹಾಗೂ ಸಹಕಾರಿಗಳು ಈ ನಡೆಯನ್ನು ಉಗ್ರ ಹೋರಾಟದ ಮೂಲಕ ಖಂಡಿಸುತ್ತೇವೆ. ಕಾನೂನು ಬಾಹಿರವಾಗಿ ತೆರವುಗೊಳಿಸಿರುವ ಅಧಿಕಾರಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಶೀಘ್ರದಲ್ಲೇ ಈ ಬಗ್ಗೆ ಚರ್ಚಿಸಿ ಹೋರಾಟಕ್ಕೆ ಅಣಿಯಾಗುತ್ತೇವೆ" ಎಂದು ಎಚ್ಚರಿಕೆ ನೀಡಿದರು.

ಶಾಸಕಿ ಕುಸುಮಾವತಿ ಹಾಗೂ ಅರವಿಂದ ಕಟಗಿ ಮಾತನಾಡಿ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸಹಾಯಕ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ಆಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, "ಏಳು ತಿಂಗಳ ಹಿಂದೆ ಈ ಕುರಿತು ಸಭೆ ಆಗಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಆಯುಕ್ತ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿದಂತೆ ಹಲವರು ಭಾಗಿಯಾಗಿದ್ದು ಮೂರ್ತಿ ತೆರವಿಗೆ ನಿರ್ಧಾರ ಮಾಡಲಾಗಿತ್ತು. ಅದರಂತೆ ಮೂರ್ತಿಗಳನ್ನು ತೆರವು ಮಾಡಲಾಗುತ್ತಿದೆ" ಎಂದರು. ಇದಕ್ಕೆ ಮತ್ತಷ್ಟು ಕೆರಳಿದ ನಾಯಕರು, "ತೆರವುಗೊಳಿಸುವ ಮುನ್ನ ನಮ್ಮ ಗಮನಕ್ಕೆ ಯಾಕೆ ತರಲಿಲ್ಲ? ನೀವು ಬಿಜೆಪಿ ಏಜೆಂಟ್​ಗಳಂತೆ ವರ್ತಿಸುತ್ತಿದ್ದೀರಿ" ಎಂದು ಹರಿಹಾಯ್ದರು.

ಸಭೆಯ ನಡಾವಳಿ ಪ್ರತಿಯನ್ನು ನೀಡಬೇಕು ಮತ್ತು ಪಾಲಿಕೆ ಆಯುಕ್ತರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಆದರೆ ಪಾಲಿಕೆ ಆಯುಕ್ತರು ತರಬೇತಿ ನಿಮಿತ್ತ ಬೇರೆಡೆಗೆ ಹೋಗಿರುವ ವಿಷಯ ತಿಳಿದು ಹೋರಾಟದ ನಿರ್ಧಾರಕ್ಕೆ ಪ್ರತಿಷ್ಠಾನದ ಮುಖಂಡರು ಒಮ್ಮತ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹಾಸನದಲ್ಲಿ ಗಾಂಧಿ ಪ್ರತಿಮೆ ವಿರೂಪ : ಸಾರ್ವಜನಿಕರಿಂದ ಆಕ್ರೋಶ

Last Updated : Feb 2, 2023, 5:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.