ETV Bharat / state

ಜೋಶಿ, ಬಿಎಸ್​​ವೈ ಹಾಗೂ ಬೊಮ್ಮಾಯಿ ಉತ್ತಮ ನಾಯಕರು: ರಾಜೀವ್‌ ಪ್ರತಾಪ್ ರೂಡಿ - ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಪ್ರಹ್ಲಾದ್ ಜೋಶಿ ಒಬ್ಬ ಉತ್ತಮ ನಾಯಕ. ಹಾಗೆ ಬೊಮ್ಮಾಯಿ, ಬಿಎಸ್​ವೈ ಕೂಡ ನಮ್ಮ ಪಕ್ಷದ ಉತ್ತಮ ನಾಯಕರು- ಹುಬ್ಬಳ್ಳಿಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜೀವ್‌ ಪ್ರತಾಪ್ ರೂಡಿ ಹೇಳಿಕೆ.

Rajiv Pratap Rudy
ರಾಜೀವ್‌ ಪ್ರತಾಪ್ ರೂಡಿ ಸುದ್ದಿಗೋಷ್ಟಿ
author img

By

Published : Feb 6, 2023, 10:21 AM IST

ರಾಜೀವ್‌ ಪ್ರತಾಪ್ ರೂಡಿ ಸುದ್ದಿಗೋಷ್ಟಿ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ನಾಯಕರು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜೀವ್‌ ಪ್ರತಾಪ್ ರೂಡಿ ಹೇಳಿದರು. ನಗರದಲ್ಲಿ ನಿನ್ನೆ(ಭಾನುವಾರ) ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮುಂದಿನ ಸಿಎಂ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಎಂದು ಕುಮಾರಸ್ವಾಮಿ ಹೇಳಿಕೆ ಕುರಿತು ಕರ್ನಾಟಕ ರಾಜ್ಯದಲ್ಲಿ ಏನು ರಾಜಕೀಯ ಬೆಳವಣಿಗೆ ಆಗುತ್ತಿವೆಯೋ ನನಗೆ ಗೊತ್ತಿಲ್ಲ. ಪ್ರಹ್ಲಾದ್ ಜೋಶಿ ಒಬ್ಬ ಉತ್ತಮ ನಾಯಕರು. ಹಾಗೆ ಬೊಮ್ಮಾಯಿ, ಬಿಎಸ್​ವೈ ಕೂಡ ನಮ್ಮ ಪಕ್ಷದ ಉತ್ತಮ ನಾಯಕರು ಎಂದು ಹೇಳಿದರು.

ಜನಪರ ಬಜೆಟ್: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡಿರುವ ಕೇಂದ್ರ ಬಜೆಟ್ ಎಲ್ಲಾ ವರ್ಗದ ಜನರಿಗೆ ಪ್ರೋತ್ಸಾಹದಾಯಕವಾಗಿದೆ. ಕಳೆದ ಎಲ್ಲಾ ಬಜೆಟ್‌ಗಳಿಗಿಂತ ಈ ಬಾರಿಯ ಬಜೆಟ್ ಗಾತ್ರ ದೊಡ್ಡದಿದೆ. ಎಲ್ಲಾ ವಿಭಾಗಗಳಿಗೂ ಈ ಬಾರಿ ಹೆಚ್ಚಿನ ಅನುದಾನವನ್ನು ಒದಗಿಸಲಾಗಿದೆ. ಕರ್ನಾಟಕಕ್ಕೂ ಹೆಚ್ಚಿನ ಅನುದಾನ ಬಂದಿದೆ. ಪ್ರಧಾನಿಗಳ ಮಾರ್ಗದರ್ಶನದಲ್ಲಿ ವಿತ್ತ ಸಚಿವರು ಜನಪರ ಬಜೆಟ್ ಮಂಡಿಸಿದ್ದಾರೆ. ಮಧ್ಯಮ ವರ್ಗದ ಜನರಿಗೆ ಹಿಂದೆಂದೂ ಸಿಗದಷ್ಟು ಆದಾಯ ತೆರಿಗೆ ವಿನಾಯತಿ ಸಿಕ್ಕಿದೆ. ಬಜೆಟ್ ಗಾತ್ರ ಕಡಿಮೆ ಅನ್ನುವ ವಿರೋಧಿಗಳ ಟೀಕೆಗೆ ಯಾವುದೇ ಆಧಾರಗಳಿಲ್ಲ ಎಂದು ಅವರು ತಿರುಗೇಟು ನೀಡಿದರು.

ಇದನ್ನೂ ಓದಿ: ಮೋದಿ ಸರ್ಕಾರದಿಂದ ಭಾರತದ ಭವಿಷ್ಯಕ್ಕೆ ಭದ್ರ ತಳಹದಿ: ಸಂಸದ ತೇಜಸ್ವಿ ಸೂರ್ಯ

ಹೆಚ್​​ಡಿಕೆ ಹೇಳಿದ್ದೇನು?: ಕುಮಾರಸ್ವಾಮಿ ದಾಸರಹಳ್ಳಿ ಕ್ಷೇತ್ರದಲ್ಲಿನ ಪಂಚರತ್ನ ಯಾತ್ರೆ ವೇಳೆ ಮಾತನಾಡುತ್ತ, 'ಪ್ರಹ್ಲಾದ್ ಜೋಶಿಯವರನ್ನು ಮುಂದಿನ ಸಿಎಂ ಮಾಡಲು ಆರ್​​ಎಸ್ಎಸ್ ನಿರ್ಧಾರ ಮಾಡಿದೆ. ಜೋಶಿಯವರನ್ನ ಸಿಎಂ ಮಾಡಿ, 8 ಮಂದಿ ಉಪ ಮುಖ್ಯಮಂತ್ರಿ ಮಾಡುವ ಪ್ಲಾನ್ ಆರ್​​ಎಸ್​​ಎಸ್ ದೆಹಲಿ ಕಚೇರಿಯಲ್ಲಿ ಚರ್ಚೆ ನಡೆದಿದೆ. ಹೀಗಾಗಿ ನಿನ್ನೆಯಿಂದ ನಮ್ಮ ಮೇಲೆ ಗಧಾ ಪ್ರಹಾರ ಶುರು ಮಾಡಿದ್ದಾರೆ. ಅವರು ಶೃಂಗೇರಿ ಮಠ ಧ್ವಂಸ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಸೇರಿದವರು. ಅವರಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ ಬೇಕಿಲ್ಲ. ನಮ್ಮ ಭಾಗದ ಹಳೆ ಮೈಸೂರು ಭಾಗದ ಬ್ರಾಹ್ಮಣ ವರ್ಗಕ್ಕೆ ಸೇರಿದವರಲ್ಲ ಎಂದು ವಾಗ್ದಾಳಿ ನಡೆಸಿದ್ದರು.

ಜೆಡಿಎಸ್‌ ಪಂಚರತ್ನ ಯಾತ್ರೆಯಲ್ಲ, ಕುಟುಂಬದ ನವಗ್ರಹ ಯಾತ್ರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, "ನಮ್ಮ ಹಳೆ ಮೈಸೂರು ಭಾಗದ ಬ್ರಾಹ್ಮಣರು 'ಸರ್ವೇ ಜನಾಃ ಸುಖಿನೋ ಭವಂತು' ಎನ್ನುವವರು. ಆದರೆ ಜೋಶಿಯವರು ಮಹಾರಾಷ್ಟ್ರದ ಪೇಶ್ವೆ ವಂಶಕ್ಕೆ ಸೇರಿದವರು. ಅವರಿಗೆ ಸಂಸ್ಕೃತಿ ಇಲ್ಲ. ಅವರಿಗೆ ದೇಶ ಒಡೆಯುವಂತದ್ದು, ಕುತಂತ್ರ ರಾಜಕಾರಣ ಮಾಡುವಂತದ್ದು, ದೇಶಭಕ್ತಿಯ ಹೆಸರಲ್ಲಿ ದೇಶಕ್ಕೆ ಕೊಡುಗೆ ಕೊಟ್ಟಂತವರನ್ನು ಮಾರಣಹೋಮ ಮಾಡುವಂತದ್ದು ಈ ವರ್ಗದವರಿಂದ ಬಂದವರ ಕೃತ್ಯ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಬದಲು ಸಿಡಿ ಯಾತ್ರೆ ಮಾಡಲಿ: ಹೆಚ್​​ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.