ಹುಬ್ಬಳ್ಳಿ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಅಪಾರ ಬೆಳೆ ಹಾನಿ ಸಂಭವಿಸಿದೆ. ಬೆಳೆದ ಹತ್ತಿ, ಜೋಳ, ಹೆಸರು ಬೆಳೆ ಹಾನಿಯಾಗಿದೆ. ಕುಂದಗೋಳ ತಾಲೂಕಿನ ಗುಡೇಕಟ್ಟಿ, ಕಲಘಟಗಿ ತಾಲೂಕಿನಲ್ಲಿ ಮಳೆಯಿಂದ ಜಮೀನುಗಳೆಲ್ಲ ನೀರು ನಿಂತುಕೊಂಡು ಕೆರೆಯಂತಾಗಿವೆ. ಇದರಿಂದ ಬೆಳೆದ ಬೆಳೆಗಳೆಲ್ಲ ನೀರಿನಲ್ಲಿ ಮುಳುಗಿವೆ.
ಸಾಲಸೋಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಅನ್ನದಾತ ಕಳೆದುಕೊಂಡು ಕಂಗಾಲಾಗಿದ್ದಾನೆ. ಕಳೆದ ವರ್ಷದ ಪ್ರವಾಹಕ್ಕೆ ಮುಂಗಾರು, ಹಿಂಗಾರು ಬೆಳೆಗಳನ್ನು ಕಳೆದುಕೊಂಡಿದ್ದ ರೈತ, ಈ ಬಾರಿಯೂ ಅತಿಯಾದ ಮಳೆಯಿಂದ ಮುಂಗಾರು ಬೆಳೆಯನ್ನು ಕಳೆದುಕೊಂಡಿದ್ದಾನೆ.ಒಟ್ಟಾರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವಂತಾಗಿದೆ.