ಹುಬ್ಬಳ್ಳಿ: ಕೊರೊನಾ ಎಂಬ ಮಹಾಮಾರಿಯಿಂದ ಗ್ರಂಥಾಲಯ ಸಂಪೂರ್ಣವಾಗಿ ಬಂದ್ ಆಗಿದ್ದವು. ಸಾರ್ವಜನಿಕ ಕೇಂದ್ರ ಗ್ರಂಥಾಲಯ ಮತ್ತೆ ಆರಂಭವಾಗಿದ್ದು, ಎಂದಿನಂತೆ ಓದುಗರು ಗ್ರಂಥಾಲಯದ ಕಡೆ ಮುಖ ಮಾಡಿದ್ದಾರೆ.
ಕಳೆದ ಆರು ತಿಂಗಳಿನಿಂದ ಕೊರೊನಾ ಹಿನ್ನೆಲೆಯಲ್ಲಿ ನಗರದ ಬಹುತೇಕ ಗ್ರಂಥಾಲಯ ಬಂದ್ ಆಗಿರುವ ಪರಿಣಾಮ ಹಲವಾರು ವಿದ್ಯಾರ್ಥಿಗಳು ಹಾಗೂ ಓದುಗರು ತೊಂದರೆ ಅನುಭವಿಸಿದ್ದರು. ಆದರೆ ಕಳೆದ ಹದಿನೈದು ದಿನಗಳಿಂದ ಮತ್ತೆ ನಗರದ ಲ್ಯಾಮಿಂಗಟನ್ ರಸ್ತೆಯಲ್ಲಿರುವ ಕೇಂದ್ರ ಗ್ರಂಥಾಲಯ ಆರಂಭವಾಗಿದ್ದು, ಕೊರೊನಾ ಭಯ ಬಿಟ್ಟು ಎಂದಿನಂತೆ ವಿದ್ಯಾರ್ಥಿಗಳು ಹಾಗೂ ಓದುಗರು ಆಗಮಿಸಿದ್ದಾರೆ.
ಇನ್ನೂ ಗ್ರಂಥಾಲಯದಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸ್ಯಾನಿಟೈಸರ್ ಹಾಗೂ ಮಾಸ್ಕ್ ಕಡ್ಡಾಯ ಮಾಡಿದೆ. ಇದರಿಂದ ಎಲ್ಲರೂ ಸಹ ಮಾಸ್ಕ್ ಬಳಸಿ ಗ್ರಂಥಾಲಯಕ್ಕೆ ಬರುತ್ತಿದ್ದಾರೆ. ಅಷ್ಟೇ ಅಲ್ಲದೇ ಓದುಗರು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದಕ್ಕೆ ಮೇಲ್ವಿಚಾರಕರು ಹಾಗೂ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ.