ETV Bharat / state

ಹುಬ್ಬಳ್ಳಿ... ಬಿಜೆಪಿ ನಾಯಕರ ಮಾರ್ಕ್ಸ್ ಕಾರ್ಡ್ ನನಗೆ ಬೇಕಿಲ್ಲ : ಪ್ರಸಾದ್​ ಅಬ್ಬಯ್ಯ - Etv Bharat Kannada

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ನನ್ನ ವಿರುದ್ಧ ಬಿಜೆಪಿ ನಾಯಕರ ಸುಳ್ಳು ಆರೋಪ - ನನ್ನ ಎರಡು ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳ ಪುಸ್ತಕ ಜನರ ಕೈಲ್ಲಿಡುವೆ - ಕಾಂಗ್ರೆಸ್​ ಶಾಸಕ ಪ್ರಸಾದ್​ ಅಬ್ಬಯ್ಯ ಹೇಳಿಕೆ.

prasad-abbayya
ಪ್ರಸಾದ್​ ಅಬ್ಬಯ್ಯ
author img

By

Published : Jan 24, 2023, 5:44 PM IST

ಹುಬ್ಬಳ್ಳಿ: ಹು - ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಎರಡು ಅವಧಿಯಲ್ಲಿ ಸರಿ ಸುಮಾರು 1200 ಕೋಟಿಗೂ ಅಧಿಕ ಅನುದಾನ ತಂದಿದ್ದೇನೆ. ಆದರೆ ಅಭಿವೃದ್ಧಿ ಮರೆತಿರುವ ಬಿಜೆಪಿ ನಾಯಕರಿಗೆ ನನ್ನ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯಗಳಿಲ್ಲ, ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಲು ಬಿಜೆಪಿಯವರು ಹೆಣಗಾಡುತ್ತಿದ್ದಾರೆಂದು ಶಾಸಕ ಪ್ರಸಾದ್ ಅಬ್ಬಯ್ಯ ಬಿಜೆಪಿಯ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನನ್ನ ವಿರುದ್ಧ ವಿನಾಕಾರಣ ಬಿಜೆಪಿಯ ಕೆಲನಾಯಕರು ಪ್ರತಿಭಟನೆ ನಡೆಸಿ ಸುಳ್ಳು ಆರೋಪ ಮಾಡಿದ್ದಾರೆ. ಎರಡು ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಸಂಪೂರ್ಣ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಜನರ ಕೈಯಲ್ಲಿ ನೀಡುತ್ತೇನೆ. ಅಭಿವೃದ್ಧಿ ಮರೆತು ಕೇವಲ ಧರ್ಮ, ಜಾತಿ ಭಾವನೆಗಳ ಮೇಲೆ ರಾಜಕಾರಣ ಮಾಡುವ ಬಿಜೆಪಿ ನಾಯಕರ ಮಾರ್ಕ್ಸ್ ಕಾರ್ಡ್ ನನಗೆ ಬೇಕಿಲ್ಲ, ಅವರ ಪಕ್ಷದ ಮುಖ್ಯಮಂತ್ರಿ ಆದಿಯಾಗಿ ಅವರ ಪಕ್ಷದ ಹಿರಿಯ ನಾಯಕರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಬಹಿರಂಗ ಕಾರ್ಯಕ್ರಮಗಳಲ್ಲಿಯೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ಅವರು ಈ ಹಿಂದೆ ಕ್ಷೇತ್ರಕ್ಕೆ ಏನೂ ಕೊಡುಗೆ ನೀಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಅವರ ಅವಧಿಯಲ್ಲಿ ಐದು ವರ್ಷ ನಿದ್ದೆ ಮಾಡಿ ಎದ್ದು ಹೋಗಿದ್ದೆ ಅವರ ಸಾಧನೆ. ಕನಿಷ್ಠ ಪಕ್ಷ ಅವರ ಸಮಾಜದ ಜನರಿಗೆ ನ್ಯಾಯ ಕೊಡಲು ಆಗಲಿಲ್ಲ, ಆದರೆ, ಕ್ಷೇತ್ರದ ಇಂದಿರಾನಗರ, ಎಸ್.ಎಮ್.ಕೃಷ್ಣ ನಗರ ಸೇರಿದಂತೆ ಮುಂತಾದ ಕಡೆಗಳಲ್ಲಿನ ಸಮಾಜದ ಪಂಚ ಕಮಿಟಿಯವರೇ ನನ್ನ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿ ಹಾಲರವಿ ಅವರನ್ನು ತೆಗಳಿದ ನಿದರ್ಶನಗಳಿವೆ ಎಂದು ಕುಟುಕಿದರು.

ಕ್ಷೇತ್ರದಲ್ಲಿ ಅನೇಕ ಆಸ್ಪತ್ರೆ ನಿರ್ಮಾಣ: ರಾಜಕೀಯಕ್ಕೆ ಸದ್ಯ ಕಾಲಿಡುತ್ತಿರುವ ಡಾ.ಕ್ರಾಂತಿಕಿರಣ ಶಾಲಾ - ಕಾಲೇಜು, ಆಸ್ಪತ್ರೆ ತಂದಿಲ್ಲ ಎಂದು ಆರೋಪಿಸಿದ್ದಾರೆ. ನಾನು ಕ್ಷೇತ್ರದಲ್ಲಿ ಅನೇಕ ಆಸ್ಪತ್ರೆ ನಿರ್ಮಾಣ ಮಾಡಿದ್ದೇನೆ. ಇರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿದ್ದೇನೆ. ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಅನುದಾನ ಕೊಡದೇ ಸತಾಯಿಸಿದ್ದು, ಇದೀಗ ಮಹಾನಗರ ಪಾಲಿಕೆಯಿಂದ ಭರಿಸುವಂತಾಗಿದೆ ಎಂದು ಹರಿಹಾಯ್ದರು. ಇನ್ನು ಡಾ.ಕ್ರಾಂತಿಕಿರಣ ಮೊದಮೊದಲು ಗೌಡ ಸಮುದಾಯಕ್ಕೆ ಸೇರಿದವನು ಎಂದು ಹೇಳಿಕೊಂಡು ಓಡಾಡುತ್ತಿದ್ದ ಅವರು ಇದೀಗ ಚುನಾವಣೆಗಾಗಿ ಎಸ್​ಸಿ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ: ಕಡಿಮೆ ಸೀಟ್ ಬಂದರೂ ಗುದ್ದಾಡಿ ಬಿಜೆಪಿ ಸರ್ಕಾರ ಮಾಡ್ತೀವಿ: ಜನರಿಗೆ ಮಾತುಕೊಟ್ಟ ರಮೇಶ್ ಜಾರಕಿಹೊಳಿ

ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ದುರ್ಗದ ಬಯಲು, ಎಮ್.ಜಿ.ಮಾರುಕಟ್ಟೆ ಅಭಿವೃದ್ಧಿಗಿಟ್ಟ ಸುಮಾರು 110 ಕೋಟಿ ಅನುದಾನವನ್ನು ಬೇರೆ ಕಡೆಗೆ ವರ್ಗಾಯಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಪೂರ್ವ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿಗರಲ್ಲಿ ಕಾಳಜಿ ಇದ್ದಿದ್ದರೇ ಈ ಅನುದಾನವನ್ನು ಬೇರೆಡೆಗೆ ವರ್ಗಾವಣೆ ಮಾಡಿದಾಗ ಯಾಕೆ ಪ್ರತಿಭಟನೆ ಕೊಡಲಿಲ್ಲ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಪ್ರಶ್ನೆ ಮಾಡಿದರು.

ರಾಜ್ಯ ಬಿಜೆಪಿ ಸರ್ಕಾರ ಕೋವಿಡ್ ಹೆಸರಿನಲ್ಲಿ ಬಿಜೆಪಿಯೇತರ ಶಾಸಕರಿಗೆ ಅನುದಾನ ಕೊಡದೇ ಸತಾಯಿಸಿದ್ದಾರೆ. ಅವರ ಶಾಸಕರಿಗೆ 80 ಕೋಟಿ ನೀಡಿದರೇ ನಮಗೆ 25 ಕೋಟಿ ನೀಡಿದ್ದಾರೆ. ಪ್ರತಿಯೊಂದು ವಿಚಾರದಲ್ಲಿ ಚುನಾವಣೆ ರಾಜಕೀಯ ಚಿಂತನೆ ಮಾಡತ್ತಾರೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ, ಇವರಿಂದ ನಾವೆನನ್ನು ಕಲಿಯುವ ಅಗತ್ಯವಿಲ್ಲ ಎಂದು ಶಾಸಕ ಅಬ್ಬಯ್ಯ ಕಿಡಿಕಾರಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಟಿಫಿಕೆಟ್ ನನಗೆ ಬೇಕಿಲ್ಲ: ಆರಗ ಜ್ಞಾನೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.