ETV Bharat / state

ಬಿಜೆಪಿ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ, ಬೇಕಾದ್ರೆ ತನಿಖೆ ಮಾಡಲಿ: ಜೋಶಿ

ನಮ್ಮ ಅವಧಿಯಲ್ಲಿ ನೀರಾವರಿ, ಲೋಕೋಪಯೋಗಿ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಹಗರಣ ಆಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

Pralhad Joshi
ಪ್ರಹ್ಲಾದ್ ಜೋಶಿ
author img

By

Published : May 21, 2023, 2:26 PM IST

ಭ್ರಷ್ಟಾಚಾರ ಆರೋಪ: ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ

ಹುಬ್ಬಳ್ಳಿ: ತಾವು ಕೊಟ್ಟ ಭರವಸೆಯನ್ನು ಈಡೇರಿಸಲು ಆಸಕ್ತಿ ಇಲ್ಲ. ಚುನಾವಣಾ ಕಾರಣಕ್ಕಾಗಿ ಸುಳ್ಳು ಭರವಸೆ ನೀಡಿದ್ದಾರೆ. ಆದರೆ ಈಗ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೂರಿದರು. ಇಂದು ನಗರದ ತಮ್ಮ‌ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಒಂದನೇ ಸಂಪುಟದಲ್ಲಿ ಭರವಸೆ ಈಡೇರಿಸಲಾಗುವುದು ಎಂದಿದ್ದರು. ಆದರೆ ಈಗ ಏನು ಹೇಳುತ್ತಿದ್ದೀರಿ?. ಇನ್ ಪ್ರಿನ್ಸಿಪಲ್ ಕೊಡಲಾಗಿದೆ ಅಂತಾ. ಇದೇನಾ ಜನರಿಗೆ ನೀಡಿದ ಭರವಸೆ ಈಡೇರಿಸುವುದು?. ಇನ್ ಪ್ರಿನ್ಸಿಪಲ್ ಚುನಾವಣಾ ಸಂದರ್ಭದಲ್ಲಿ ಹೇಳಿದ್ಧೀರಾ? ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣ ಕುರಿತು ಸಹ ತನಿಖೆ ಮಾಡಲಿ. ನಮ್ಮ ಅವಧಿಯಲ್ಲಿ ನೀರಾವರಿ, ಲೋಕೋಪಯೋಗಿ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಹಗರಣ ಆಗಿಲ್ಲ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ ಎಷ್ಟು ಅಂತಾ ಈಗಾಗಲೇ ತಿಳಿಸಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಹೆಚ್ಚಳವಾಗಿದೆ. 2009 ರಿಂದ 2014 ರವರೆಗೆ ಡೆವೆಲೇಶನ್ ಫಂಡ್ 148 ಶೇಕಡಾವಾರು ಜಾಸ್ತಿಯಾಗಿದೆ ಎಂದರು.

ಇದನ್ನೂ ಓದಿ: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಇರುವುದು ಸತ್ಯ; ಎಷ್ಟು ಪರ್ಸೆಂಟು ಅಂತ ಹೇಳಲ್ಲ- ಶೆಟ್ಟರ್

2014 ರಿಂದ 2019 ರವರೆಗೆ ಡೆವಲೇಶನ್ ಫಂಡ್ 129 ಜಾಸ್ತಿಯಾಗಿದೆ. 700, 800 ಕೋಟಿ ರಷ್ಟು ಬರುತಿದ್ದ ಡೆವೆಲೆನ್ ಅನುದಾನ 5000, 7000 ಕೋಟಿ ಬಂದಿದೆ. ಸಿದ್ದರಾಮಯ್ಯ ಆರೋಪ ಮಾಡುವ ಮೊದಲು ತಿಳಿದುಕೊಳ್ಳಲಿ. ಉದಾಹರಣೆಗೆ 2009-10 ರಲ್ಲಿ 20476 ಕೋಟಿ ರೂಪಾಯಿ ಬರುತಿದ್ದರೆ 2019-20 ರಲ್ಲಿ 7578 ಕೋಟಿ ಬಂದಿದೆ. 2021-22ರಲ್ಲಿ 7862 ಕೋಟಿ ಬಂದಿದೆ. ಪ್ರತಿ ವರ್ಷ ರಾಜ್ಯಕ್ಕೆ ಅನುದಾನ ಹೆಚ್ಚಾಗುತ್ತಲೇ ಇದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

ಇದನ್ನೂ ಓದಿ: 40% ಕಮಿಷನ್ ಆರೋಪ; ಕಮಲ ವಿರುದ್ಧ ಕಾಂಗ್ರೆಸ್ ಹೋರಾಟ ಯಶಸ್ವಿ

ಸಿದ್ದರಾಮಯ್ಯ ಅವರ ಆರೋಪವೇನು?: ಕರ್ನಾಟಕ ರಾಜ್ಯಕ್ಕೆ 15 ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿರುವ 5,495 ಕೋಟಿ ರೂ.ಗಳ ನ್ಯಾಯಸಮ್ಮತ ವಿಶೇಷ ಅನುದಾನವನ್ನು ನೀಡದೇ ಇರುವುದರಿಂದ ರಾಜ್ಯವು ನಷ್ಟ ಅನುಭವಿಸುತ್ತಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಆದರೆ, ಅದನ್ನು ಈ ಹಿಂದಿನ ಬಿಜೆಪಿ ಸರ್ಕಾರವು ಪಡೆದುಕೊಂಡಿಲ್ಲ, ಹಣ ಪಡೆಯುವ ಪ್ರಯತ್ನವನ್ನೇ ನಡೆಸಿಲ್ಲ. ರಾಜ್ಯಕ್ಕೆ ಇದಕ್ಕಿಂತ ಹೆಚ್ಚು ಹಾನಿ ಮಾಡಿದ ಸರ್ಕಾರ ಇದೆಯಾ?" ಎಂದು ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ಮೋದಿಯಿಂದ ರಾಜ್ಯಕ್ಕೆ 5,495 ಕೋಟಿ ರೂ. ನಷ್ಟ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.