ಧಾರವಾಡ : ಕೊರೊನಾ ನಿಯಂತ್ರಣಕ್ಕೆ ಪ್ರಾರ್ಥಿಸಿ ಕುಸುಮ ನಗರದ ಘಂಟಾ ಮಾರುತಿ ದೇವಸ್ಥಾನದಲ್ಲಿ ಶ್ರೀರಾಮಸೇನೆ ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು. ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಹನುಮಂತ ದೇವರ ಜಪ ಯಜ್ಞ ಮಾಡಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಇಂದು ನಮ್ಮ ದೇಶದಲ್ಲಿ ಕೊರೊನಾ ಹೆಚ್ಚಾಗಿದೆ. ಅದರ ನಿವಾರಣೆಗಾಗಿ ವಿಶೇಷ ಪೂಜೆ ಮಾಡಿದ್ದೇವೆ. ಎರಡು ಕೋಟಿ ಹನುಮ ನಾಮ ಜಪ ಮಾಡಲಿದ್ದೇವೆ ಎಂದರು.
ಹನುಮಂತನ ಜನ್ಮಸ್ಥಳ ವಿವಾದಕ್ಕೆ ಒಳಗಾಗಿದೆ. ಸಾವಿರಾರೂ ವರ್ಷದಿಂದ ಅಂಜನಾದ್ರಿ ಪರ್ವತವೇ ಜನ್ಮಸ್ಥಳ ಆಗಿದೆ. ಇದೊಂದು ನಂಬಿಕೆ, ವಿಶ್ವಾಸ. ಆಂಧ್ರ ಸಿಎಂ ಕ್ರಿಶ್ಚಿಯನ್. ಕ್ರಿಶ್ಚಿಯನ್ ಲಾಬಿಯಿಂದ ಹಿಂದು ಆಚರಣೆಗಳಲ್ಲಿ ಗೊಂದಲ ಸೃಷ್ಟಿಸಿದ್ದಾರೆ.
ಹಿಂದು ಆಚರಣೆಗಳ ಅಪಪ್ರಚಾರ ಮಾಡುತ್ತಿದ್ದಾರೆ. ಈ ಕುತಂತ್ರದಿಂದ ತಿರುಮಲದಲ್ಲಿ ಹನುಮಂತ ಹುಟ್ಟಿದ್ದಾನೆಂಬ ವಿವಾದ ಮಾಡಿದ್ದಾರೆ. ಇದು ಸುಳ್ಳು, ಹನುಮಂತ ಹುಟ್ಟಿದ್ದು ಅಂಜನಾದ್ರಿ ಪರ್ವತದಲ್ಲೇ ಎಂದರು.