ETV Bharat / state

ಬಿಜೆಪಿ ಮುಖಂಡನ ಸಂಬಂಧಿ ಕೊಲೆ ಪ್ರಕರಣ : 3 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿ ಪಡೆ - ಎಸಿಪಿ ವಿನೋದ ಮುಕ್ತೆದಾರ

ಕೊಲೆ ಮಾಡಿ ಪರಾರಿಯಾದ ಪ್ರವೀಣ್ ಬೇವಿನಕಟ್ಟಿ, ಸಾಯಿ ಉಣಕಲ್ ಹಾಗೂ ಕುಮಾರ್ ಇದ್ದಲಗಿ ಎಂಬು ಆರೋಪಿಗಳನ್ನ ಎಸಿಪಿ ವಿನೋದ್ ಮುಕ್ತೇದಾರ್ ನೇತೃತ್ವದ ತಂಡ ಬರೀ ಮೂರೇ ಗಂಟೆಯಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕೆಲವು ದಿನಗಳ ಹಿಂದೆ ಅಭಿಷೇಕ್​ನೊಂದಿಗೆ ಜಗಳವಾಡಿದ್ದ ಪ್ರವೀಣ್ ಬೇವಿನಕಟ್ಟಿ, ಪಾಟೀಲರ ಮನೆಯ ಮುಂದಿನ ಕಾರಿನ ಗಾಜನ್ನು ಒಡೆದು ಹೋಗಿದ್ದ..

hubli
ಕೊಲೆ ಪ್ರಕರಣ
author img

By

Published : Jul 12, 2021, 1:48 PM IST

ಹುಬ್ಬಳ್ಳಿ : ಭಾರತೀಯ ಜನತಾ ಪಕ್ಷದ ಮುಖಂಡರೋರ್ವರ ಸಂಬಂಧಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಕೊಲೆಗೆಡುಕರನ್ನು ಮೂರೇ ಗಂಟೆಯಲ್ಲಿ ಬಂಧಿಸುವಲ್ಲಿ ಉತ್ತರ ವಲಯ ಎಸಿಪಿ ವಿನೋದ್ ಮುಕ್ತೇದಾರ್ ನೇತೃತ್ವದ ತಂಡ ಯಶಸ್ವಿಯಾಗಿದೆ. ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಈಶ್ವರಗೌಡ ಪಾಟೀಲ ಅವರ ಚಿಕ್ಕಪ್ಪನ ಮಗ ಅಭಿಷೇಕ್​ ಗೌಡ ಪಾಟೀಲ ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.

ಕೊಲೆ ಮಾಡಿ ಪರಾರಿಯಾದ ಪ್ರವೀಣ್ ಬೇವಿನಕಟ್ಟಿ, ಸಾಯಿ ಉಣಕಲ್ ಹಾಗೂ ಕುಮಾರ್ ಇದ್ದಲಗಿ ಎಂಬು ಆರೋಪಿಗಳನ್ನ ಎಸಿಪಿ ವಿನೋದ್ ಮುಕ್ತೇದಾರ್ ನೇತೃತ್ವದ ತಂಡ ಬರೀ ಮೂರೇ ಗಂಟೆಯಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕೆಲವು ದಿನಗಳ ಹಿಂದೆ ಅಭಿಷೇಕ್​ನೊಂದಿಗೆ ಜಗಳವಾಡಿದ್ದ ಪ್ರವೀಣ್ ಬೇವಿನಕಟ್ಟಿ, ಪಾಟೀಲರ ಮನೆಯ ಮುಂದಿನ ಕಾರಿನ ಗಾಜನ್ನು ಒಡೆದು ಹೋಗಿದ್ದ.

ಅದೇ ವಿಷಯವಾಗಿ ಇಬ್ಬರ ನಡುವೆ ಜಗಳವಾಗುತ್ತಿತ್ತು. ಅದೇ ಕಾರಣದಿಂದಲೇ ನಿನ್ನೆಯೂ ಕೂಡ ಜಗಳವಾಗಿದೆ. ತಕ್ಷಣವೇ ಮುಖ್ಯ ಆರೋಪಿ ಪ್ರವೀಣ್ ತನ್ನಿಬ್ಬರು ಸಂಗಡಿಗರಾದ ಸಾಯಿ ಮತ್ತು ಕುಮಾರ್‌ನನ್ನು ಕಳಿಸಿ, ಅಭಿಷೇಕ್‌ ಗೌಡರನ್ನ ಕೊಲೆ ಮಾಡಿಸಿದ್ದಾನೆಂಬ ಆರೋಪ ಕೇಳಿ ಬಂದಿದೆ.

ಇದನ್ನು ಓದಿ: ಹುಬ್ಬಳ್ಳಿಯಲ್ಲಿ ಬಿಜೆಪಿ ಮುಖಂಡನ ಸಂಬಂಧಿ ಮೇಲೆ ಮಾರಣಾಂತಿಕ ಹಲ್ಲೆ.. ಚಿಕಿತ್ಸೆ ಫಲಿಸದೇ ಯುವಕ ಸಾವು!

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಎಸಿಪಿ ವಿನೋದ್ ಮುಕ್ತೇದಾರ್ ತಂಡವು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಮೂರೇ ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.‌ ಅಶೋಕನಗರದಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಂಡಿರೋ ಪೊಲೀಸರು ಮತ್ತಷ್ಟು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.