ETV Bharat / state

ಶಿರಕೋಳದಲ್ಲಿ ಕೊರೊನಾಗೆ ವ್ಯಕ್ತಿ ಬಲಿ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ - Person death from corona

ಮೊದಲು ತಾಲ್ಲೂಕಿನ ಮೊರಬ ಗ್ರಾಮಕ್ಕೆ ಪ್ರವೇಶ ಕೊಟ್ಟಿದ್ದ ಕೊರೊನಾ ನಂತರ ಅದೇ ಗ್ರಾಮದ ಪಕ್ಕದಲ್ಲಿನ ಶಿರಕೋಳ ಗ್ರಾಮಕ್ಕೂ ಕಾಲಿಟ್ಟು ಆತಂಕ ಹೆಚ್ಚಿಸಿದೆ.

Person death from corona In Shirakola
ಶಿರಕೋಳದಲ್ಲಿ ಕೊರೊನಾಗೆ ವ್ಯಕ್ತಿ ಬಲಿ
author img

By

Published : Jul 7, 2020, 10:52 AM IST

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದ್ದು, ಮೃತರ ಸಂಖ್ಯೆ 13 ಕ್ಕೇರಿದೆ.

ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ನಿವಾಸಿ ಪಿ. 18713, 43 ವಯಸ್ಸಿನ ವ್ಯಕ್ತಿ ನಿನ್ನೆ ಸಂಜೆ ಮೃತಪಟ್ಟಿದ್ದಾರೆ. ಶಿರಕೋಳ ಗ್ರಾಮದ 120 ಜನ ಇರುವ ಒಂದೇ ಕುಟುಂಬದ ಸದಸ್ಯ ಪಿ-12121, 36 ವರ್ಷದ ಪುರುಷ ಮಾಡಿದ ಯಡವಟ್ಟಿನಿಂದ ಸೋಂಕು ಅದೇ ಕುಟುಂಬದ ಮೂವರಿಗೆ ಸೋಂಕು ತಗುಲಿತ್ತು. ಮೃತನು ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರದೆ ಕಳೆದ ಕೆಲ ವರ್ಷಗಳಿಂದ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ವಿಚಾರ ಗೊತ್ತಾಗಿದೆ.

120 ಜನ ಇರುವ ಒಂದೇ ಕುಟುಂಬದ ಸದಸ್ಯ ಪಿ-12121, 36 ವರ್ಷದ ಪುರುಷನ ಕುಟುಂಬ ವೈದ್ಯನಾಗಿ ಈತ ಚಿಕಿತ್ಸೆ ನೀಡುತ್ತಿದ್ದ. ಕೆಲ ದಿನಗಳ ಹಿಂದೆ ಈತನಿಗೆ ಜ್ವರ ಮತ್ತು ನೆಗಡಿ ಕಾಣಿಸಿಕೊಂಡಿದ್ದು ನವಲಗುಂದದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಎಂಬ ಮಾಹಿತಿ ಗೊತ್ತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.